ಅಟಲ್ ಬಿಹಾರಿ ವಾಜಪೇಯಿ ಶಾಲೆಯ ವಿದ್ಯಾರ್ಥಿಗಳ ಸಾಧನೆ
ವಿಜಯಪುರ,ಸೆ.27:ನಗರದ ಡಾ.ಬಿ.ಆರ್.ಅಂಬೇಡ್ಕರ್ ಒಳ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜಯಪುರದ ಅಟಲ್ ಬಿಹಾರಿ ವಾಜಪೇಯಿ ಶಾಲೆಯ ಮಕ್ಕಳು ಭಾಗವಹಿಸಿ ಅಮೋಘ ಸಾಧನೆ ಮಾಡಿದ್ದಾರೆ.
ಮುದ್ರಾ ಬಾಗಲಕೋಟ, ಸುಚಿತ ಗುಮಡಿ, ಸಾನಿಕಾ ಗುಣದಾಳ, ಆದ್ಯಾ ಸೋನಾರ, ವಿರೇಶ ಇಳಜೇರಿ, ನಂದೀಶ ಮೇಡಿದಾರ, ಅಬುಸುಫಿಯಾನ ಗುಡುಗುಂಟಿ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.
ಆರಾದ್ಯಾ ಕಲ್ಯಾಣಿ, ಸೋನಾಲಿ ಗುಣದಾಳ, ಸಮನ್ವಿತಾ ಪೂಜಾರಿ, ಸ್ವಾತಿ ತಳವಾರ, ಶ್ರೇಯಸ್ ಸಿಂಧೆ, ಯಶರಾಜ ಬಜಂತ್ರಿ ಅವರು ದ್ವಿತೀಯ ಸ್ಥಾನ ಸ್ಥಾನ ಪಡೆದಿದ್ದಾರೆ.
ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಮಕ್ಕಳ ಸಾಧನೆಯನ್ನು ಕಂಡು ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧÀ್ಯಕ್ಷ ಹಾಗೂ ವಿಜಯಪುರದ ಶಾಸಕ ಬಸನಗೌಡ ಪಾಟೀಲ ( ಯತ್ನಾಳ), ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಎಸ್ ಹಿರೇಮಠ, ಶ್ರೀ ಸಿದ್ದೇಶ್ವರ ಸಂಸ್ಥೆಯ , ಶಾಲಾ ನಾಮನಿರ್ದೇಶಿತ ಅಧ್ಯಕ್ಷ ಬಸವರಾಜ ಸುಗೂರ, ಸಂಸ್ಥೆಯ ಗೌರವಾನ್ವಿತ ಹಣಕಾಸು ಕಾರ್ಯದರ್ಶಿ ಸದಾನಂದ ದೇಸಾಯಿ, ಜಂಟಿ ಕಾರ್ಯದರ್ಶಿ ಎಮ್.ಎಮ್ ಸಜ್ಜನ, ಸಂಸ್ಥೆಯ ಕೋಶಾಧಿಕಾರಿ ಶಿವಾನಂದ ನೀಲಾ ಮತ್ತು ಶಾಲಾ ಆಡಳಿತ ಅಧಿಕಾರಿ ಡಾ. ಎಚ್. ವೆಂಕಟೇಶ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಐಶ್ವರ್ಯ ಸಂಗಮ್, ಕರಾಟೆ ತರಬೇತುದಾರ ಪ್ರವೀಣಕುಮಾರ ವಠಾರ ಅವರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.