ದತ್ತಿ ಗೋಷ್ಠಿಗಳಿಂದ ಜ್ಞಾನ ಪ್ರಸಾರ: ಡಾ. ಜಾವೀದ ಜಮಾದಾರ
ವಿಜಯಪುರ,ಜು.8: ಶೈಕ್ಷಣಿಕ, ಸಾಂಸ್ಕøತಿಕವಾಗಿ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಜ್ಞಾನ ಪಸರಿಸುವಲ್ಲಿ ಇಂತಹ ದತ್ತಿ ಗೋಷ್ಠಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೆಢÀರೇಶನ್À ಅಧ್ಯಕ್ಷ ಡಾ. ಜಾವೀದ ಜಮಾದಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ವಿಜಯಪುರ ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ಲಿಂ. ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ದತ್ತಿದಾನಿಗಳು- ಸಭಾಪತಿ ಬಸವರಾಜ ಹೊರಟ್ಟಿ ವಿಷಯ: ಆಕಾಶವಾಣಿ ಪ್ರಸಾರಂಗ ರಂಗಕರ್ಮಿ ಖ್ಯಾತ ನಿರೂಪಕ ದಿವಂಗತ ಅನೀಲ ದೇಸಾಯಿ ಕುರಿತು, ಅವ್ವ ಸೇವಾ ಟ್ರಸ್ಟ್ ದತ್ತಿ ದತ್ತಿದಾನಿಗಳು: ಬಸವರಾಜ ಹೊರಟ್ಟಿ ಅಧ್ಯಕ್ಷರು ಅವ್ವ ಸೇವಾ ಟ್ರಸ್ಟ್, ಧಾರವಾಡ ವಿಷಯ ಅವಿಭಕ್ತ ಕುಟುಂಬ ಕುರಿತು ಚಿಂತನ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ದತ್ತಿ ಗೋಷ್ಠಿಗಳಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.
ವಿಶೇಷ ಸನ್ಮಾನಿತ ಮುಖ್ಯಮಂತ್ರಿಗಳಿಂದ ಶ್ರೇಷ್ಠ ಶಸ್ತ್ರ ಚಿಕಿತ್ಸಕ ಪ್ರಶಸ್ತಿ ಪುರಸ್ಕೃತÀ ಡಾ. ಶಿವಾನಂದ ಮಾಸ್ತಿಹೊಳಿ ಮಾತನಾಡಿ, ನನ್ನದು ಅವಿಭಕ್ತ ಕುಟುಂಬ. ಚಿಕ್ಕ ಮನೆಯಲ್ಲಿ ಎಂಟು ಜನ ಸಹೋದರ,ಸಹೋದರಿಯರು ಕೂಡಿ ಆನಂದದಿಂದ ಕಳೆದ ನನ್ನ ಬಾಲ್ಯ ಜೀವನ ಇಂದು ನನ್ನನ್ವು ಈ ಹಂತದ ಗೌರವಕ್ಕೆ ತಂದು ನಿಲ್ಲಿಸಿದೆ. ಅμÉ್ಟೀ ಅಲ್ಲದೇ ಕನ್ನಡ ಸಾಹಿತ್ಯ ನಮಗೆಲ್ಲರಿಗೂ ಅನ್ನ ನೀಡುವ ಭಾμÉಯಾಗಿದ್ದು ನಮ್ಮೆಲ್ಲರ ಸೌಭಾಗ್ಯ ಎಂದರು.
ಇನ್ನೋರ್ವ ವಿಶೇಷ ಸನ್ಮಾನಿತÀ ವಿಜಯಪುರ ಮಹಾನಗರ ಪಾಲಿಕೆಯ ನೂತನ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮಾತನಾಡಿ, ನಗರದ ಸ್ವಚ್ಛತೆ ಹಾಗೂ ಸೌಂದರ್ಯಿಕರಣಕ್ಕೆ ನಗರದ ಜನತೆ ಸಹಕರಿಸುತ್ತಿದ್ದಾರೆ. ನಾನು ಕನ್ನಡ ಮಾಧ್ಯಮದಲ್ಲಿ ಓದಿ ಇಂದು ನಾನು ಉನ್ನತ ಮಟ್ಟದ ಅಧಿಕಾರಿಯಾಗಲು ಕನ್ನಡ ಭಾμÉ ಕಾರಣವಾಯಿತು ಎಂದರು.
ರಂಗಭೂಮಿ ಕಲಾವಿದÀ ಸಂಗಮೇಶ ಬಾದಾಮಿ ಅವರು ಆಕಾಶವಾಣಿ ಪ್ರಸಾರಾಂಗದ ಕಂಗಕರ್ಮಿ ದಿ, ಅನೀಲ ದೇಸಾಯಿ ಕುರಿತು ಉಪನ್ಯಾಸ ನೀಡುತ್ತಾ ಖ್ಯಾತ ನಿರೂಪಕರಾಗಿ. ಸಂಗೀತ ಅಕಾಡೆಮಿ ಸದಸ್ಯರಾಗಿ ನಟ, ನಿರ್ದೇಶಕರಾಗಿ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದ ದಿ ಅನೀಲ ದೇಸಾಯಿ ಅವರನ್ನು ಸ್ಮರಿಸಿದರು
ಡಾ. ದಾನಮ್ಮ ಗಿಡವೀರ ಉಪನ್ಯಾಸ ನೀಡಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ಮು ಬಿತ್ತುವಲ್ಲಿ ಅವಿಭಕ್ತ ಕುಟುಂಬದ ಪಾತ್ರ ದೊಡ್ಡದು ಎಂದರು
ಸಭೆಯ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಸುಭಾಸ ಯಾದವಾಡ ಮಾತನಾಡಿ, ಜಿಲ್ಲೆಯಲ್ಲಿ ನಿರಂತರವಾಗಿ ಇಂತಹ ಸಾಹಿತ್ಯಿಕ ಚಟುವಟಿಕೆಗಳು ನಡೆದಿರುವದು ಹೆಮ್ಮೆಯ ವಿಷಯ ಎಂದರು.
ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಮಾತನಾಡಿದರು.
ಎನ್.ಆರ್. ಕುಲಕರ್ಣಿ, ಸತೀಶ ಇಂಚಗೇರಿ, ಅನುರಾಧ ಕಲಾಲ, ರಾಜೇಸಾಬ ಶಿವನಗುತ್ತಿ ವೇದಿಕೆಯ ಮೇಲಿದ್ದರು
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಅಭಿμÉೀಕ ಚಕ್ರವರ್ತಿ, ಪೆÇ್ರ. ಸುಭಾಶ್ಚಂದ್ರ ಕನ್ನೂರ, ಕಮಲಾ ಮುರಾಳ, ಬಸವರಾಜ ಆಜೂರ, ಟಿ.ಆರ್. ಹಾವಿನಾಳ, ಆರ್.ಎಸ್. ವಾಡೇದ, ವಿದ್ಯಾವತಿ ಅಂಕಲಗಿ, ಕೆ.ಎಸ್. ಹಣಮಾಣಿ, ಡಿ.ಎಸ್. ಹಾವಗೊಂಡ, ಕೆ. ಸುನಂದ, ಮಾರುತಿ ತರಸೆ, ಅಮೋಘಸಿದ್ದ ಪೂಜಾರಿ, ಎಸ್.ವಿ. ನಾಡಗೌಡ, ಡಾ. ದೀಲಿಪರಾಜ ಪಾಟೀಲ, ಸೋ.ಈ. ಕಗ್ಗೋಡ, ಶೋಭಾ ಹರಿಜನ, ವಿ.ಎಸ್. ಖಾಡೆ, ಭಾಗೀರಥಿ ಸಿಂಧೆ, ಕೆ.ಎಫ್. ಅಂಕಲಗಿ, ಬಿ.ಎಸ್. ಕುರಿ, ಜಿ.ಎಸ್. ಬಳ್ಳೂರ, ಚಂದ್ರಶೇಖರ ಗೊಬ್ಬುರ, ಉಪಸ್ಥಿತರಿದ್ದರು
ರವಿ ಕಿತ್ತೂರ ಸ್ವಾಗತಿಸಿದರು. ಮಹಮ್ಮದ ಗೌಸ ಹವಾಲ್ದಾರ ನಿರೂಪಿಸಿದರು. ಪೆÇ್ರ. ಸಿದ್ರಾಮಯ್ಯ ಲಕ್ಕುಂಡಿಮಠ ವಂದಿಸಿದರು.