ಜಗಳವಾಡಿ ತವರು ಮನೆಗೆ ಹೋದ ಹೆಂಡತಿ: ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಗಂಡ
ಕಲಬುರಗಿ,ಜು.8-ಜಗಳವಾಡಿ ಪತ್ನಿ ಮಗನನ್ನು ಕರೆದುಕೊಂಡು ತವರು ಮನೆಗೆ ಹೋದುದ್ದರಿಂದ ಮನನೊಂದು ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಧನಗರಗಲ್ಲಿಯಲ್ಲಿ ನಡೆದಿದೆ.
ಸಿದ್ದಣ್ಣ ಭೀಮಾಶಂಕರ ಗಿರೆಪ್ಪಗೋಳ್ ಆತ್ಮಹತ್ಯೆಗೆ ಶರಣದಾವರು. ಮೂಲತ: ಕಡಣಿ ಗ್ರಾಮದವರಾದ ಸಿದ್ದಣ್ಣ ಅವರು ತರಕಾರಿ ವ್ಯಾಪಾರ ಮಾಡುತ್ತ ಪತ್ನಿ, ಮಗನೊಂದಿಗೆ ಜೀವನ ಸಾಗಿಸುತ್ತಲಿದ್ದರು. ಧನಗರಗಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿದ್ದರು. 2/3 ದಿನಗಳ ಹಿಂದೆ ಪತಿ-ಪತ್ನಿ ನಡುವೆ ಜಗಳ ನಡೆದು ಪತ್ನಿ ಲಕ್ಷ್ಮೀ ಮಗನನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದರು. ಇದರಿಂದ ಮನನೊಂದು ಸಿದ್ದಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಮೃತನ ಸಹೋದರ ಈರಣ್ಣ ಗಿರೆಪ್ಪಗೋಳ್ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಆತ್ಮಹತ್ಯೆ
ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಬ್ಬಿ ಕಾಲೋನಿಯಲ್ಲಿ ನಡೆದಿದೆ.
ಮಾಳಪ್ಪ ಬಂದನಳ್ಳಿ (26) ಆತ್ಮಹತ್ಯೆಗೆ ಶರಣಾದವರು. ಪತ್ನಿ ಲಕ್ಷ್ಮೀ ಜೊತೆ ಗುಬ್ಬಿ ಕಾಲೋನಿಯಲ್ಲಿ ವಾಸವಾಗಿದ್ದರು. ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ಮಾಳಪ್ಪ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಸಹೋದರ ಬಸವರಾಜ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.