ಖಾಸಗಿ ಬಸ್ ಹಾಯ್ದು ವ್ಯಕ್ತಿ ಸಾವು
ವಿಜಯಪುರ, ಜು.8:ಖಾಸಗಿ ಬಸ್ ಹಾಯ್ದು ವ್ಯಕ್ತಿಯೊಬ್ಬನು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ 7 ಗಂಟೆಗೆ ನಗರದ ಬಸವೇಶ್ವರ ವೃತ್ತದಲ್ಲಿ ನಡೆದಿದೆ.
ನಗರದ ಶಹಪುರ ಅಗಸಿ ಬಡಾವಣೆಯ ನಿವಾಸಿ ಅಶೋಕ ಪರಜಣ್ಣವರ (58) ಮೃತಪಟ್ಟ ದುರ್ದೈವಿ.
ಅಶೋಕ ರಸ್ತೆಯಲ್ಲಿ ಹೊರಟಿದ್ದ. ಈ ವೇಳೆ ಖಾಸಗಿ ಬಸ್ ಹಾಯ್ದು ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಘಟನೆ ನಡೆದ ಬಳಿಕ ಖಾಸಗಿ ಬಸ್ ಚಾಲಕನು ಬಸ್ ಸಮೇತ ಪರಾರಿಯಾಗಿದ್ದ. ಸಂಚಾರಿ ಪೆÇಲೀಸರು ಬೆನ್ನತ್ತಿ ಚಾಲಕ ಮತ್ತು ಬಸ್ ವಶಕ್ಕೆ ಪಡೆದಿದ್ದಾರೆ.
ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.