ಡೆಂಘೀ ಒಳಗೊಂಡು ಸಾಂಕ್ರಮಿಕ ರೋಗದ ಮುಂಜಾಗೃತೆಗೆ ಸಲಹೆ
ಆಳಂದ:ಜು.8: ಮಹಾಮಾರಿ ಡೆಂಘೀ ಪ್ರಕರಣ ಸೇರಿದಂತೆ ಸಾಂಕ್ರಮಿಕ ರೋಗಳಿಂದ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ನಾಗನಾಥ ಕಾವಳೆ ಹೇಳಿದರು.
ತಾಲೂಕಿನ ಸರಸಂಬಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ಸಾಂಕ್ರಮಿಕ ರೋಗಗಳ ಮುಂಜಾಗೃತ ಕ್ರಮ ಕುರಿತಾದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡೆಂಘೀ ಮಹಾಮಾರಿಯಾಗಿ ಕಾಡತೊಡಗಿದೆ. ಇದರ ಭಯ ಬೇಡ ಪ್ರತಿಯೊಬ್ಬರಲ್ಲಿ ಮುನ್ನೆಚ್ಚರಿಕೆ ಕ್ರಮತಂದುಕೊಳ್ಳಬೇಕು. ರೋಗವಲ್ಲ ಇದೊಂದು ವೈರಸ್ ಹೆಣ್ಣು ಸೊಳ್ಳೆಯಿಂದ ಬರುವ ಜ್ವರವಾಗಿದೆ. ಮನುಷ್ಯರ ರಕ್ತ ಹೀರಿ ಬರುತ್ತದೆ ಎಂದು ಎಂದು ಅವರು ಹೇಳಿದರು.
ಡೆಂಘೀ ರೋಗ ಸುಂಕಿತ ವ್ಯಕ್ತಿಗೆ ಸೊಳ್ಳೆ ಕಚ್ಚಿ ಇನ್ನೊಬ್ಬ ಆರೋಗ್ಯವಂತರಿಕೆ ಕಚ್ಚಿದರೆ ಡೆಂಘೀ ಹರಡುತ್ತದೆ. ತೀವ್ರವಾದ ನೋವು, ವಾಂತಿ ಭೇದಿ ಲಕ್ಷಣಗಳಾಗಿವೆ. ಒಂದರಿಂದ ಎರಡು ದಿನಗಳ ಕಾಲ ನೋಡಬೇಕು. ಜ್ವರ ಕಡಿಮೆಯಾಗದೇ ಹೋದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆ ಕೈಗೊಂಡರೆ ಅಲ್ಲಿ ಸಿಬಿಸಿಯಂತ ಮೂರು ವಿದಧ ರಕ್ತದ ಪರೀಕ್ಷೆ ನಡೆಸಲಾಗುತ್ತಿದೆ. ಡೆಂಘೀ ಪ್ರಕರಣ ಪತ್ತೆಯಾದರೆ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗೃತವಾಗಿ ತಡೆಗಟ್ಟಲು ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಹೇಳಿದರು.
ಡೆಂಘೀ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು ಇದರ ಬಗ್ಗೆ ಮೂನ್ನೇಚ್ಚರಿಕೆ ಕ್ರಮ ತೆಗೆದುಕೋಳ್ಳುವುದು ತುಂಬಾ ಮುಖ್ಯವಾಗಿದೆ. ಕಾರಣ ನಿಮ್ಮ ನಿಮ್ಮ ಮನೇಯಲ್ಲಿ ಶೇಖರಿಸಿದ ನಿರನ್ನು ಎರಡು ದಿವಸಕ್ಕೊಮ್ಮೆ ಸ್ವಚ್ಛವಾಗಿ ತೊಳೆದು ತುಂಬಬೇಕು ಹಾಗೂ ನಿರಿನಲ್ಲಿ ಕ್ರಿಮಿಗಳು ಆಗದೆ ಹಾಗೆ ಮುನ್ನಚ್ಚರಿಕೆ ತೆಗೆದುಕ್ಕೊಳ್ಳುವ ಸಲಹೆ ನೀಡಿದರು.
ಕುಡಿಯುವ ನಿರು ಕಾಯಿಸಿ ಆರಿಸಿ ಸೋಸಿ ಕುಡಿಯಬೇಕು ಹಾಗೂ ನಿಮ್ಮ ಮನೆಯ ಸುತ್ತ ಮುತ್ತ ರಸ್ತೆ ಚರಂಡಿಗಳು ಸ್ವಚ್ಚವಾಗಿಡಲು ಮುಂದಾಗಬೇಕು. ಆರೋಗ್ಯವೆ ಭಾಗ್ಯ ಎಂಬ ನಾಣ್ಣುಡಿಯಂತೆ ಎಲ್ಲರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಜ್ವರ ಪ್ರಕರಣ ಕಂಡು ಬಂದರೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದು ಇನ್ನುಳಿದ ರಾಷ್ಟ್ರೀಯ ಕಾಯಕ್ರಮಗಳ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಜ್ಯೋತಿ ರೋಪನುರೆ ಮಾತನಾಡಿದರು. ಮಂಜುನಾಥ ಭಕರೆ ಹಾಗೂ ಶಾಲೆಯ ಸಿಬ್ಬಂದಿ ಹಾಗೂ ಕಲಾವತಿ, ಆಶಾ ಕಾರ್ಯಕರ್ತೆಯರು ಹಾಗೂ ಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.