ಬಂಜಾರ ಸಮುದಾಯಕ್ಕೆ ಸ್ವಯಂ ಉದ್ಯೋಗ ಕಲ್ಪಿಸಿ: ರಾಜು ಪವಾರ ಒತ್ತಾಯ
ವಿಜಯಪುರ,ಜು.8:ಬೆಂಗಳೂರಿನ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯದೇವ ನಾಯಿಕ ತಾಂಡಾಗಳಲ್ಲಿ ಭೇಟಿ ನೀಡಿ ಬಂಜಾರ ಸಮುದಾಯದ ಸಮಸ್ಯೆ ಬಗ್ಗೆ ನಗರದ ಬಂಜಾರ ಡಿಸ್ಟ್ರಿಕ್ ಭವನದಲ್ಲಿ ಚರ್ಚಿಸಿದರು.
ಬಂಜಾರ ಜನಾಂಗ ತಮ್ಮ ಹೊಟ್ಟೆಪಾಡಿಗಾಗಿ ಬೇರೆ ರಾಜ್ಯಕ್ಕೆ ವಲಸೆ ಹೋಗುತ್ತಿರುವವರ ಬಗ್ಗೆ ಮಾಹಿತಿ ಮತ್ತು ಇನ್ನಿತರ ಮೂಲಭೂತ ಸಮಸ್ಯೆಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಬಂಜಾರ ಸಮುದಾಯ ಅತ್ಯುತ್ತಮವಾಗಿ ಸಮಾಜದಲ್ಲಿ ಬೆಳವಣಿಗೆಯಾಗಬೇಕೆಂದು ಯುವಕರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷÀ ರಾಜು ಪವಾರ ಬಂಜಾರ ಸಮಾಜದ ಮಾಹಿತಿ ನೀಡಿ ಮಾತನಾಡಿ, ಬಂಜಾರ ಸಮುದಾಯದ ಜನರು ಗುಳೆ ಹೋಗುವುದಕ್ಕೆ ಕಡಿವಾಣ ಹಾಕಿ ಅವರಿಗೆ ನಮ್ಮ ರಾಜ್ಯದಲ್ಲಿಯೇ ಕೆಲಸ ನೀಡಬೇಕು. ಅವರ ಅಭಿವೃದ್ಧಿಗಾಗಿ ಬಂಜಾರ ನಿಗಮದಿಂದ ಸ್ವಯಂ ಉದ್ಯೋಗ ಯೋಜನೆಯಡಿ ಕೆಲಸ ನೀಡಿ ಅವರನ್ನು ಸ್ವಾವಲಂಬಿಯಾಗಲು ಅನುವು ಮಾಡಿಕೊಡಬೇಕು. ಬಂಜಾರ ಸಮುದಾಯಕ್ಕೆ ಸ್ವಯಂ ಉದ್ಯೋಗ ಕಲ್ಪಿಸಿಕೊಡಬೇಕೆಂದು ನಿಗಮದ ಅಧ್ಯಕ್ಷರಿಗೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕಾಶೀನಾಥ ಜಾಧವ, ರವಿ ಚವ್ಹಾಣ, ಮೋಹನ ರಾಠೋಡ, ವಸಂತ ರಾಠೋಡ ಮುಂತಾದ ಬಂಜಾರ ಸಮುದಾಯದ ಯುವಕರು, ಗಣ್ಯರು ಉಪಸ್ಥಿತರಿದ್ದರು.