ಉತ್ತಮ ಪರಿಸರ ಮನುಕುಲದ ಸಂಪತ್ತು: ಸಾಹಿತಿ ಪಟ್ಟಣಶೆಟ್ಟಿ
ವಿಜಯಪುರ,ಜು.8: ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆ. ಅರಣ್ಯನಾಶ, ಗಣಿಗಾರಿಕೆ, ಕೈಗಾರಿಕೀಕರಣದಂತಹ ಮಾನವ ಚಟುವಟಿಕೆಗಳಿಂದ ಹಾನಿಗೊಳ್ಳುತ್ತಿರುವ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಾಹಿತಿ ಆರ್.ಎಸ್. ಪಟ್ಟಣಶೆಟ್ಟಿ ಹೇಳಿದರು.
ನಗರದ ಆಲಕುಂಟೆ ಬಡಾವಣೆಯಲ್ಲಿ ಭಾನುವಾರ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ‘ಪರಿಸರ ಉಳಿಸಿ- ಭೂಮಿ ಉಳಿಸಿ”-ಚಿಂತನ ಗೋಷ್ಠಿಗೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಉತ್ತಮ ಪರಿಸರ ಮನುಕುಲದ ಸಂಪತ್ತು. ತಾಪಮಾನ ನಿಯಂತ್ರಿಸಿ ಪರಿಸರ ಸಮತೋಲನ ಕಾಯ್ದುಕೊಳ್ಳಲು ಗಿಡಮರಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸಿ ಕಾಡನ್ನು ಉಳಿಸಿ, ಬೆಳೆಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ಉಪನ್ಯಾಸಕÀ ಅಮರೇಶ ಸಾಲಕ್ಕಿ ಮಾತನಾಡಿ, ಅಜ್ಜಂದಿರು ಹಾದಿ ಬದಿಯಲ್ಲಿ, ಹೊಲ ಗದ್ದೆಗಳ ಬದುವಿನಲ್ಲಿ ಮರಗಳನ್ನು ಬೆಳೆಸಿ, ನಮಗೆ ಒಳ್ಳೆಯ ಪರಿಸರ ನೀಡಿ, ಸಕಾಲಕ್ಕೆ ಮಳೆಯಾಗಲು ಕಾರಣರಾಗಿದ್ದಾರೆ. ಅವರು ಆರೋಗ್ಯವಂತ ಸಮಾಜಕ್ಕೆ ಭದ್ರಬುನಾದಿ ಹಾಕಿ ಇಂದಿನ ಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಹೇಳಿದರು.
ಶಿಕ್ಷಕÀ ಬಾಪೂರಾಯ ಮೆಡೇಗಾರ ಮಾತನಾಡಿ, ಕೃತಕ ಕಾಡು ನಿರ್ಮಾಣ ನಮ್ಮ ಮುಂದಿನ ಗುರಿಯಾಗಿದ್ದು, ಔಷಧೀಯ ಗುಣಗಳ ಮರಗಿಡಗಳನ್ನು ನೆಟ್ಟು ಪೆÇೀಷಿಸಿ ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ನಾವೆಲ್ಲರೂ ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರಕ್ಕೆ ಪ್ರತಿಯೊಬ್ಬರ ಕೊಡುಗೆ ಅತ್ಯಮೂಲ್ಯ. ಜಾಗತಿಕ ತಾಪಮಾನ ಹೆಚ್ಚಳದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಮೊದಲ ಆದ್ಯತೆಯಾಗಿದೆ. ಪರಿಸರ ಕಾಳಜಿ ಸಸಿ ನೆಡುವುದಕμÉ್ಟೀ ಸೀಮಿತವಾಗಿರದೇ ಸಂರಕ್ಷಿಸಿ ಪೆÇೀಷಿಸುವುದಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಡಾವಣೆಯ ವಿವಿಧ ಭಾಗಗಳಲ್ಲಿ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಬಿರು ಗಾಡುವೆ, ಸಂತೋಷ ಹೆಗಡೆ, ಸತೀಶ ನಾಗಠಾಣ, ಅನಿಲ ತಳವಾರ, ಶಶಿಕಾಂತ ಸಂಗಣ್ಣವರ, ಉಮೇಶ ಗುಡಿಸಲಮನಿ, ಸಂತೋಷ ಲೋಣಿ, ಮಾದಣ್ಣ ಕಟಾವಿ, ಶಂಕರ ಭೋವಿ, ಜಗದೀಶ ಮನಗೂಳಿ ಮುಂತಾದವರು ಉಪಸ್ಥಿತರಿದ್ದರು.