ಡಾ.ಸಂಧ್ಯಾ ಎಸ್. ಕಾನೇಕರ್ ರಿಗೆ ಅಭಿನಂದನೆ
ಕಲಬುರಗಿ:ಜು.8:ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ರಾಷ್ಟ್ರೀಯ ಹಳಕಟ್ಟಿ ಬಳಗ, ಜನಕಲ್ಯಾಣ ಎಜ್ಯುಕೇಶನ ಆಯಿಂಡ್ ರೂರಲ್ ಡೆವಲಪ್‍ಮೆಂಟ್ ಟ್ರಸ್ಟ್, ಕರ್ನಾಟಕ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕøತಿಕ ಪರಿಷತ್ತು ರಾಜ್ಯ ಘಟಕ, ಹಾಗೂ ಕಲಬುರಗಿ ಯುಥ್ ಅಡ್ವೆಂಚರ್ ಸ್ಪೋಟ್ಸ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ
ಕರ್ನಾಟಕ ರಾಜ್ಯ ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತರಾದ ಡಾ.ಸಂಧ್ಯಾ ಎಸ್. ಕಾನೇಕರ್ ರವರ ಅಭಿನಂದನಾ ಸಮಾರಂಭವು ಕಲಬುರಗಿ ನಗರದ ಸೇಡಂ ರಸ್ತೆ ಓಂ ನಗರ ಗೇಟ್ ಎದುಗಡೆ ಇರುವ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭವನ್ನು ಆರೋಗ್ಯ ಇಲಾಖೆ ಕಲಬುರಗಿ ವಿಭಾಗಿಯ ಸಹ ನಿರ್ದೇಶಕ ಡಾ.ಅಂಬಾರಾಯ ರುದ್ರವಾಡಿ ಸೇರಿ ವೇದಿಕೆಯಲ್ಲಿದ್ದ ಗಣ್ಯರಿಂದ ಸಸಿಗೆ ನೀರುಣಿಸುವ ಮುಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಮಾರಂಭದಲ್ಲಿ ಪುಜ್ಯ ವರಜ್ಯೋತಿ ಬಂತೆ ಜಿ, ಪುಜ್ಯ ಪಂಚಾಕ್ಷರಿ ಸ್ವಾಮಿಜಿ, ಡಾ.ಜಯದೇವಿ ಗಾಯಕವಾಡ, ಶರಣಬಸಪ್ಪ ಗಣಜಲಖೇಡ, ಅರವಿಂದ ಮೊಲ್ಡಿ, ಸೂರ್ಯಕಾಂತ ನಿಂಬಾಳಕರ್, ಮಹೇಶ ಹುಬ್ಬಳ್ಳಿ, ಸುರೇಶ ಎಸ್ ಕಾನೇಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.