ದ್ವೇಷ ರಾಜಕಾರಣದಿಂದ ಶೋಷಿತರ ಬದುಕು ನರಕಯಾತನೆ: ಜವಳಿ
ವಾಡಿ:ಜು.8: ಜಾತಿ ರಾಜಕಾರಣದಿಂದ ದೇಶದಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗಿದ್ದು ಶೋಷಿತರ ಬವಣೆ, ನೋವು, ನಲಿವುಗಳು ಲೆಕ್ಕಕ್ಕೆ ಬರುತ್ತಿಲ್ಲ. ಜನಸಾಮಾನ್ಯರ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಯುವ ಬದಲು ಕೇವಲ ವೈಯುಕ್ತಿಕ ಹಾಗೂ ದ್ವೇಷದ ಮಾತುಗಳು ಕೇಳಿಬರುತ್ತಿವೆ ಎಂದು ಹೋರಾಟಗಾರ ನಾಗೇಂದ್ರ ಜವಳಿ ತೀವ್ರ ವಿμÁಧ ವ್ಯಕ್ತಪಡಿಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ರವಿವಾರ ಆಯೋಜಿಸಿದ್ದ “ದ್ವೇಷದ ಮನಸುಗಳ ನಡುವೆ ಪ್ರೀತಿಯ ರಾಜಕಾರಣ” ಎನ್ನುವ ಶಿರ್ಷಿಕೆಯಲ್ಲಿ ನಡೆದ ಕವಿಗೋಷ್ಠಿಯ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ದಲಿತ ಹಾಗೂ ತಳಸಮುದಾಯದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹಾಗೂ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ನಮ್ಮನ್ನು ಆಳುವ ಸರ್ಕಾರಗಳು ಚಕಾರ ಎತ್ತದೆ ಕೇವಲ ತಮ್ಮ ಕುರ್ಚಿಗಾಗಿ ಬಡಿದಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅಲ್ಲೋಲಕಲ್ಲೋಲ ಉಂಟಾಗುತ್ತಿದ್ದು ಶಾಂತಿ ಸಹಬಾಳ್ವೆ ಇಲ್ಲವಾಗಿದೆ ಎಂದು ವಿμÁದ ವ್ಯಕ್ತಪಡಿಸಿದ ಅವರು, ದ್ವೇಷದ ರಾಜಕಾರಣಕ್ಕೇ ವಿರಾಮ ಹಾಕಿ ಪ್ರೀತಿಯ ರಾಜಕಾರಣ ಹುಟ್ಟು ಹಾಕಬೇಕಾಗಿದೆ ಎಂದರು.
ಕಡಗಂಚಿ ಸಿದ್ದೇಶ್ವರ ಬಿಇಡ್ ಕಾಲೇಜು ಪ್ರಾಂಶುಪಾಲ ಡಾ.ಕೈಲಾಶ ಡೋಣಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿನ ಶಕ್ತಿಯಾಗಿರುವ ಭಜರಂಗದಳ, ಆರ್ ಎಸ್ಎಸ್ ಸಂಸ್ಥೆಗಳನ್ನು ನಾವು ಸೋಲಿಸಬೇಕಾಗಿದೆ. ಈ ವ್ಯಕ್ತಿಯನ್ನು ಬೆಳೆಸುವ ಸಂಸ್ಥೆಗಳನ್ನು ಬಗ್ಗುಬಡಿಯುವ ತಂತ್ರಗಾರಿಕೆ ಬೇಕಾಗಿದೆ. ದೇಶದಲ್ಲಿ ಜಾತಿ ವ್ಯವಸ್ಥೆ ಎದ್ದು ಕುಣಿಯುತ್ತಿದ್ದು ಅದನ್ನು ಬುಡಸಮೇತ ಕೀಳಬೇಕಾಗಿದೆ. ಗುರು ಗೋವಿಂದ ಭಟ್ಟರು, ಡಾ.ಅಂಬೇಡ್ಕರ್, ಬಸವಣ್ಣನವರ ತತ್ವಗಳನ್ನು ಜಾರಿಗೆ ಬರಬೇಕು ಎನ್ನುವ ಸಂಕಲ್ಪ ನಾವು ಮಾಡಬೇಕಾಗಿದೆ. ಸಾಹಿತಿಗಳ ವ್ಯಕ್ತಿತ್ವಕ್ಕಿಂತ ಅವರು ಬರೆದ ಸಾಹಿತ್ಯ ಪರಿಗಣಿಸಬೇಕು. ವಿಶ್ವವಿದ್ಯಾಲಯಗಳು ಸಹ ಜಾತಿ ವ್ಯವಸ್ಥೆ ಹಾಗೂ ಜಾತಿ ರಾಜಕಾರಣದಿಂದ ಮುಕ್ತವಾಗಿಲ್ಲ. ಜಾತಿ ಧರ್ಮಗಳು ಬೆಳೆಸುವುದನ್ನು ಬಿಟ್ಟು ಪ್ರೀತಿಯ ರಾಜಕಾರಣ ಹುಟ್ಟು ಹಾಕೋಣ ಎಂದು ಹೇಳಿದ ಅವರು, ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗಕ್ಕೆ 371ನೇ ಕಲಂ ತಿದ್ದುಪಡಿ ಮಾಡುವ ಮೂಲಕ ಸಾಂಸ್ಕೃತಿಕ ಹಕ್ಕು ನೀಡಿರುವುದು ಸಂಭ್ರಮದ ಸಂಗತಿಯಾಗಿದೆ ಎಂದರು.
ಪತ್ರಕರ್ತರ ವಿಕ್ರಮ್ ನಿಂಬರ್ಗಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಲನ ವೇದಿಕೆ ಸದಸ್ಯ ಹರಿಶ್ಚಂದ್ರ ಕರಣಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಮಾಬಾಯಿ ಮಹಿಳಾ ಸಂಘದ ಅಧ್ಯಕ್ಷೆ ನಾಗಮ್ಮ ಧನ್ನೇಕಾರ ವೇದಿಕೆ ಮೇಲಿದ್ದರು. ಸಂಚಲನ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕಾಶೀನಾಥ ಹಿಂದಿನಕೇರಿ, ಮುಖಂಡರಾದ ರಘುವೀರ್ ಪವಾರ್, ಭೀಮರಾವ ಗಂಗನೋರ ಕಮರವಾಡಿ, ಸುಶಿಲಾಬಾ ಸುಜಾತಾ ಎಂ.ಎಸ್, ಮಧು ಹಿಂದಿನಕೇರಿ, ಶೋಭಾ ವಿನಿ, ಪಾರ್ವತಿ ಆನಿ, ಆನಂದ ನಿಂಬರ್ಗಾ, ಛಾಯಾ ಕೊಂಚೂರು, ನಿಸರ್ಗ, ಅನುμÁ್ಕ, ಸಂದ್ಯಾ, ಗೋಪಾಲ ಸುತ್ರಾವೆ, ವಿಜಯಕುಮಾರ ಗಾಯಕವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಮಲೇಶಿ ನಾಟೇಕಾರ ಸ್ವಾಗತಿಸಿದರು. ನ್ಯಾಯವಾದಿ ಶ್ರವಣಕುಮಾರ ಮೌಸಲಗಿ ನಿರೂಪಿಸಿದರು. ಸಿದ್ದಯ್ಯ ಶಾಸ್ತ್ರಿ ನಂದೂರಮಠ ವಂದಿಸಿದರು. ಕವಿಗಳಾದ ಕಾಶಿನಾಥ್ ಹಿಂದಿನಕೇರಿ, ಶ್ರೀಶರಣು ಹೊಸಮನಿ, ಖೇಮಲಿಂಗ ಬೆಳಮಗಿ, ಯಾದಗಿರಿ ಕವಿ ಗುರುಪ್ರಸಾದ್ ಕಲ್ಬುರ್ಗಿ ಕವಿ ಪ್ರಿಯಾಂಕಾ ಮಾವಿನಕೇರಿ, ದೇವಿಂದ್ರ ಕರದಹಳ್ಳಿ, ಮಲೇಶಿ ನಾಟೇಕಾರ, ವೀರಣ್ಣ ಯಾರಿ, ಕೃಷ್ಣ ರಾವೂರ, ಜಗನ್ನಾಥ ಅಂದರಕಿ, ಬಿರಲಿಂಗ ಕಲ್ಬುರ್ಗಿ, ಶ್ರೀನಿವಾಸ ರೆಡ್ಡಿ, ಧರಣಪ್ಪ ಮಂಗಳೂರು, ದಯಾನಂದ ಖಜೂರಿ, ರವಿಕುಮಾರ ಮುತ್ತಗಿಕರ್, ರವಿ ಕೊಳ್ಕೂರ್, ವಿಕ್ರಮ್ ನಿಂಬರ್ಗಾ ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿ ಸಭೆಯ ಗಮನ ಸೆಳೆದರು. ಶೋಭಾ ನಿಂಬರ್ಗಾ ಜನ ಕಲಾ ತಂಡದವರಿಂದ ಹೋರಾಟದ ಹಾಡುಗಳು ಮನಸೂರೆಗೊಂಡಿವು.