ವೀರಶೈವ ಲಿಂಗಾಯತ ಸಮುದಾಯಕ್ಕೆ ಸಿಂಹಬಲ: ವೀರಮಹಾಂತ ಶಿವಾಚಾರ್ಯರು
ಕಲಬುರಗಿ: ಜು.8:ನಗರದ ಜಗತ್ ಅನುಭವ ಮಂಟಪದಲ್ಲಿ ಬಸವೇಶ್ವರ ಸೇವಾ ಸಮಾಜ ಟ್ರಸ್ಟ್ ವತಿಯಿಂದ ವೀರಶೈವ ಲಿಂಗಾಯತ ಯುವ ಸಮ್ಮಿಲನ -2 ಕಾರ್ಯಕ್ರಮದಲ್ಲಿ ಟ್ರಸ್ಟ್‍ನ್ ಸದಸ್ಯರು ಸಭೆ ನಡೆಸಿ ಈ ಸಭೆಯಲ್ಲಿ ಕೇಂದ್ರದಲ್ಲಿ ಎಲ್ಲಾ ವೀರಶೈವ ಲಿಂಗಾಯತ ಉಪ ಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಮತ್ತು ಕಲಬುರ್ಗಿಯ ವಿಮಾನ ನಿಲ್ದಾಣಕ್ಕೆ ಕಲ್ಯಾಣ್ ಕರ್ನಾಟಕದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ್ ಹೆಸರನ್ನು ನಾಮಕರಣ ಮಾಡಬೇಕೆಂದು ಚರ್ಚಿಸಲಾಯಿತು.
ದಿವ್ಯ ಸಾನಿಧ್ಯ ವಹಿಸಿಕೊಂಡು ಚಿನ್ಮಯ ಗಿರಿ ಚಿಮಣಗೇರಿಯ ವೀರಮಹಾಂತ್ ಶಿವಾಚಾರ್ಯರು ಸಭೆಯನ್ನು ಉದ್ದೇಶಿಸಿ ಯುವ ಸಮ್ಮಿಲನ ಕಾರ್ಯಕ್ರಮವು ಅದ್ಭುತವಾಗಿ ಆಯೋಜಿಸಿದ್ದು ಬರುವ ದಿನಗಳಲ್ಲಿ ನಾನು ಕೂಡ ತಾವು ಆಯೋಜಿಸುವ ಕಾರ್ಯಕ್ರಮಕ್ಕೆ ಹಾಜರಿದ್ದು ಮಾರ್ಗದರ್ಶನ ನೀಡುತ್ತಾ ಯುವ ಬಂಧುಗಳ ಜೊತೆ ನಿರಂತರವಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು.
ಖ್ಯಾತ ವಕೀಲರಾದ ಸುರೇಶ ಟೆಂಗಳಿ ಅವರು ಮಾತನಾಡಿ ಯಾವುದೇ ಸಮಯ ಸಂಧರ್ಭದಲ್ಲಿ ಕಾನೂನುಆತ್ಮಕ ಸಲಹೆ ಸೂಚನೆಗಳುಮತ್ತು ಸಮುದಾಯದ ಪರವಾಗಿ ಸದಾ ಮುಂಚೂಣಿಯಾಗಿ ನಾವು ಸಮುದಾಯದ ಯುವ ಬಂಧುಗಳ ಜೊತೆ ನಿಲ್ಲುತ್ತೆವೆ ಎಂದೂ ಅಭಯ ನೀಡಿದರು
ಬರುವ ದಿನಗಳಲ್ಲಿ ಸಮುದಾಯದ ಪರವಾಗಿ ಹೊರಡಲು ಮತ್ತು ಸಮುದಾಯದ ಯುವ ಬಳಗವನ್ನು ಸೇರಿಸಲು ಯುವ ಸಮ್ಮಿಲನ ನಿರಂತರವಾಗಿ ನಡೆಯುತ್ತದೆ ಎಂದು ಆಯೋಜಿಕರು ತಿಳಿಸಿದರು.
ಈ ಸಂಧರ್ಭದಲ್ಲಿ ಜಗತ ಬಡಾವಣೆಯ ಪ್ರಮುಖರು ಮತ್ತು 500ರಿಂದ 600 ಜನ ವೀರಶೈವ ಲಿಂಗಾಯತ ಸಮುದಾಯದ ಯುವ ಪಡೆ ಹಾಜರಿದ್ದರು.