ಮಾನವೀಯತೆ ಗುಣ ಬೆಳೆಸಿಕೊಳ್ಳಲು ಕರೆ
ಕರಜಗಿ:ಜು.8:ಮಾನವೀಯತೆ ಗುಣ ಬೆಳೆಸಿಕೊಳ್ಳಿ ಆಟೋ ಚಾಲಕರು ಕಾನೂನು ಪಾಲಿಸಿಸುರಕ್ಷಿತ ಪ್ರಯಾಣಕ್ಕಾಗಿ .ಅಲ್ಲದೇ ಬೇರೆ ಎಲ್ಲಾದರೂ ಅಪಘಾತ ಸಂಭವಿಸಿದರೆ ತಕ್ಷಣ ನಿಮ್ಮ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸುವ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದ ಪಿಎಸ್‍ಐ ಎಸ್.ಡಿ.ಒಡೆಯರ ಪೆÇೀಲಿಸ್ ಠಾಣೆಯಲ್ಲಿ ಆಟೋ ಚಾಲಕರಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು ಚಾಲಕರು ಸಾರಾಯಿ ಸೇವನೆ ಮಾಡಿ ಆಟೋ ಚಾಲನೆ ಮಾಡಬಾರದು. ಆಟೋ ಚಾಲಕರು ಬೇರೆ ರಾಜ್ಯದಿಂದ ಕಳ್ಳತನವಾಗಿರುವ ವಾಹನಗಳು ಕಂಡು ಬಂದರೆ ಪೆÇಲೀಸರಿಗೆ ಮಾಹಿತಿ ನೀಡಬೇಕು ಪ್ರತಿಯೊಬ್ಬ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ, ವಾಹನ ನೋಂದಣಿ ಹಾಗೂ ವಿಮೆ ದಾಖಲಾತಿ ಹೊಂದಿರಬೇಕು ಮತ್ತು ಪೆÇೀಲಿಸ್ ಠಾಣೆಯಲ್ಲಿ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಕುರಿತು ಪಿಎ??? ಎಸ್.ಡಿ.ಒಡೆಯರ ಜಾಗೃತಿ ಮೂಡಿಸಿದರು.
ಠಾಣೆಯಲ್ಲಿ ಆಟೋ ಚಾಲಕರಿಗೆ ವಿಭಿನ್ನವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಕರೆದೊಯ್ಯುವುದು ಅಪರಾಧ.ಪ್ರಯಾಣಿಕರು ನಿಂತಿದ್ದಾರೆಂದು ಮೊದಲು ಅವರನ್ನು ತಾವೇ ಕುಳ್ಳಿಸಿಕೊಳ್ಳಬೇಕೆಂದು ರಸ್ತೆ ಮಧ್ಯದಲ್ಲೇ ಆಟೋ ನಿಲ್ಲಿಸಬೇಡಿ, ಇಂಡಿಕೇಟರ್ ಬಳಸಿ ತಿರುವು ತೆಗೆದುಕೊಳ್ಳಿ,ಪಾದಚಾರಿಗಳು ಕಂಡಾಗ ಸಾವಧಾನವಾಗಿದ್ದು ಆಟೋ ಚಾಲನೆ ಮಾಡಿರಿ,ಸಂಚಾರಿ ನಿಯಮಗಳನ್ನು ಪಾಲಿಸಿರಿ,ರಸ್ತೆಯಲ್ಲಿ ವೇಗದ ಚಾಲನೆ ಬೇಡ,ನಿಧಾನವಾಗಿ, ರಸ್ತೆಯಲ್ಲಿರುವ ಇತರೆ ವಾಹನಗಳು,ಚಾಲಕರ ಸ್ನೇಹಿಯಾಗಿ ಆಟೋ ಓಡಿಸಿರಿ ಎಂದು ಕಿವಿಮಾತು ಹೇಳಿದರು ಸಭೆಯಲ್ಲಿ 60ಕ್ಕೂ ಹೆಚ್ಚು ಆಟೋ ಚಾಲಕರು ಭಾಗವಹಿಸಿದ್ದರು .ಈ ಸಂದರ್ಭದಲ್ಲಿ ಪೆÇೀಲಿಸ್ ಸಿಬ್ಬಂದಿ, ಆಟೋ ಚಾಲಕರು ಉಪಸ್ಥಿತರಿದ್ದರು.
ಆಟೋ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸಬೇಕು ಮತ್ತು ಚಾಲನೆ ಸಮಯದಲ್ಲಿ ಸಮವಸ್ತ್ರ ಧರಿಸಬೇಕು ಕಡ್ಡಾಯವಾಗಿ ಸಂಚಾರ ನಿಯಮ ಪಾಲನೆ ಮಾಡಬೇಕು
ಅಫಜಲಪುರ ಪೆÇಲೀಸಠಾಣೆ ಸಿಬ್ಬಂದಿ
ಇಮಾಮ ಬಾಗವಾನ