ನಾಡಿದ್ದು ಕೂಡ್ಲಿಗಿಗೆ ಸಚಿವ ಪ್ರಿಯಾಂಕಾ ಖರ್ಗೆ..
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು.8 :- ನಾಡಿದ್ದು (ಬುಧವಾರ) ಕೂಡ್ಲಿಗಿಗೆ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕಾ ಖರ್ಗೆ ಭೇಟಿ ನೀಡಲಿದ್ದಾರೆ ಎಂದು ಶಾಸಕ ಡಾ ಶ್ರೀನಿವಾಸ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ಸಚಿವರು  ಬೆಂಗಳೂರಿನಿಂದ ರಸ್ತೆ ಮೂಲಕ ಕಾರಿನಲ್ಲಿ  ಚಿತ್ರದುರ್ಗ ಮಾರ್ಗವಾಗಿ ರಾಷ್ಟೀಯ ಹೆದ್ದಾರಿ 50ರ ಮೂಲಕ ನೇರವಾಗಿ ಮರಿಯಮ್ಮನಹಳ್ಳಿ ಸಮೀಪದ ತುಂಗಭದ್ರಾ ಜಲಾಶಯದ ಹಿನ್ನಿರಿನಿಂದ ಪಾವಗಡ ಕುಡಿಯುವ ನೀರು ಯೋಜನೆಯ ಜಾಕವೆಲ್ ಸೈಟ್ ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನಂತರ ಕಾರಿನಲ್ಲಿ ಹೈವೇ 50ರಸ್ತೆ ಮೂಲಕ  ಕೂಡ್ಲಿಗಿ ಸಮೀಪದ ಶಿವಪುರ ಹತ್ತಿರವಿರುವ  ಮೇಘಾ ಪ್ರಾಜೇಕ್ಟ್ ನ  ಕುಡಿಯುವ ನೀರಿನ ಶುದ್ದೀಕರಣ ಸಂಸ್ಕರಣಾ  ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ  ನಂತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
ಕೂಡ್ಲಿಗಿ ತಾಲೂಕಿನ ಬಿಷ್ಣಹಳ್ಳಿ ಕ್ರಾಸ್ ಬಳಿ ಬಿಷ್ಣಹಳ್ಳಿ, ಬೆಳ್ಳಕಟ್ಟೆ ಗೊಲ್ಲರಹಟ್ಟಿ, ಬೆಳ್ಳಕಟ್ಟೆ ರಸ್ತೆಯ ಕಾಮಗಾರಿ ಸೇರಿದಂತೆ ಇತರೆ ಇಪ್ಪತ್ತಕ್ಕೂ ಹೆಚ್ಚು ಕೋಟಿ ಅನುದಾನದ ಕಾಮಗಾರಿಗೆ ಸಚಿವರಾದ ಪ್ರಿಯಾಂಕಾ ಖರ್ಗೆ ಚಾಲನೆ ನೀಡಲಿದ್ದಾರೆ.ಕೂಡ್ಲಿಗಿ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಜೊತೆ ಚರ್ಚೆ ನಡೆಸಿ ನಂತರ ಕೂಡ್ಲಿಗಿಯಿಂದ ನಾಯಕನಹಟ್ಟಿ ಮಾರ್ಗವಾಗಿ ಚಳ್ಳಕೆರೆ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವರ ಆಪ್ತವಲಯದ ಅಧಿಕಾರಿಗಳು ಮತ್ತು ಕೂಡ್ಲಿಗಿ ಶಾಸಕರು ಸೇರಿದಂತೆ ವಿಜಯನಗರ ಜಿಲ್ಲಾ ಹಾಗೂ ಕೂಡ್ಲಿಗಿ ತಾಲೂಕಿನ ಅಧಿಕಾರಿ ವರ್ಗದವರು ಉಪಸ್ಥಿತರಿರಲಿದ್ದಾರೆ.
One attachment • Scanned by Gmail