ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಜು. ೮: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಮಾಜಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ರವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮಧ್ಯಪಾನ ಸೇವಿಸಿ ಬಿಜೆಪಿ ಪಕ್ಷದ ಹೀನಾಯ ಸಂಸ್ಕೃತಿಯನ್ನು ಬಹಿರಂಗಗೊಳಿಸಿರುವ ಹಿನ್ನೆಲೆಯಲ್ಲಿ ಹಾಗೂ ಕೇಸರಿ ಧ್ವಜವನ್ನ ದುರುಪಯೋಗಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಇಂದು ವಿನೂತನ ಪ್ರತಿಭಟನೆ ನಡೆಸಿದರು
ನಗರದ ಗಾಂಧಿ ಪ್ರತಿಮೆ ಮುಂಭಾಗ ಇಂದು ಪ್ರತಿಭಟನೆ ನಡೆಸಿ ಕೆ ಸುಧಾಕರ್ ಅವರು ಆಯೋಜಿಸಿದ ಬಿಜೆಪಿ ಅಭಿನಂದನಾ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ನೆಲಮಂಗಲ ಘಟಕದ ಅಧ್ಯಕ್ಷರೇ ಪೋಲಿಸ್ ಅಧಿಕಾರಿಗೆ ಪತ್ರ ಬರೆದು ಈ ಕಾರ್ಯಕ್ರಮದಲ್ಲಿ ಉಪಹಾರ ಹಾಗೂ ಮಧ್ಯ ಸೇವನೆಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಬರೆದಿರುವ ಪತ್ರ ಬಿಜೆಪಿಯ ಬಾರ್ ಸಂಸ್ಕೃತಿಯನ್ನು ಎತ್ತಿ ತೋರುತ್ತದೆ ಎಂದು ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಸ್. ಮನೋಹರ್ ಆರೋಪಿಸಿದರು.
ಪ್ರತಿ ವಿಷಯದಲ್ಲೂ ಶಿಸ್ತು ಸಂಸ್ಕೃತಿ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ ಎಂಬುದು ಈಗಾಗಲೇ ಅವರ ಪಕ್ಷದ ನಾಯಕರಿಂದಲ್ಲೇ ಬಹಿರಂಗವಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಅಶೋಕ್ ರವರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದು ಅವರ ಸಮ್ಮುಖದಲ್ಲಿಯೇ ಇಂತಹ ಹೀನಾಯ ಸಂಸ್ಕೃತಿ ಕಾರ್ಯಕ್ರಮ ನಡೆದಿರುವುದು ಅವರ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ, ಭ್ರಷ್ಟಾಚಾರದ ಹಣವನ್ನು ಹಾಗೂ ಕೋವಿಡ್ ಹಗರಣದ ಹಣವನ್ನು ನುಂಗಿರುವ ಮಾಜಿ ಸಚಿವ ಡಾಕ್ಟರ್ ಕೆ ಸುಧಾಕರ್ ಅವರು ತಮ್ಮ ಅಭಿನಂದನಾ ಕಾರ್ಯಕ್ರಮಕ್ಕೆ ಭ್ರಷ್ಟಾಚಾರದ ಹಣವನ್ನು ಉಪಯೋಗಿಸಿರುವುದು ಸಹ ಎತ್ತಿ ತೋರುತ್ತದೆ ಎಂದು ಟೀಕಿಸಿದರು.
ಬಿಜೆಪಿಯ ದುರ್ನಡತೆ ಹಾಗೂ ಕೇಸರಿ ದ್ವಜವನ್ನು ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಪರಿಸರ ರಾಮಕೃಷ್ಣ , ಹೇಮರಾಜ್ , ಪ್ರಕಾಶ್ , ಹೊಬಳೇಶ್ , ರವಿ ಚಿನ್ನಿ ಪ್ರಕಾಶ್, ಚೇತನ್ , ಚಂದ್ರ ಶೇಖರ್,ಪುಟ್ಟರಾಜು , ನವೀನ್ , ವಾಸು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಮಾಜಿ ಸಚಿವ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ರವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಮದ್ಯ ಸೇವಿಸಿ, ಕೇಸರಿ ಧ್ವಜವನ್ನು ದುರುಪಯೋಗಪಡಿಸಿ ಕೊಂಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಮುಂಭಾಗ ವಿನೂತನ ಪ್ರತಿಭಟನೆ ನಡೆಸಿದರು. ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಮುಖಂಡರಾದ ಪರಿಸರ ರಾಮಕೃಷ್ಣ, ಪುಟ್ಟರಾಜು ಮತ್ತಿತರರು ಭಾಗವಹಿಸಿದ್ದರು.