ಬಳ್ಳಾರಿ ಕೆಎಂಎಫ್ ಮೆಗಾ ಡೈರಿಗೆ ಜಮೀನು ಮಂಜೂರುಹಣ ಪಾವತಿಗೆ ಸಮಸ್ಯೆ
* 15 ಎಕರೆ ಜಮೀನು
* ಕೊಳಗಲ್ಲು ಬಳಿಯ ಜಮೀನು.
* 2.92 ಕೋಟಿ ಪಾವತಿಗೆ ಡಿಸಿ ಪತ್ರ
* ಆಡಳಿತ ಮಂಡಳಿ ಇಲ್ಲದೆ ಹಣ ಪಾವತಿಗೆ ಸಮಸ್ಯೆ.
ಎನ್.ವೀರಭದ್ರಗೌಡ
ಬಳ್ಳಾರಿ, ಜು.08: ಇಲ್ಲಿನ ರಾಬವಿಕೋ ಹಾಲು ಒಕ್ಕೂಟ(ಕೆಎಂಎಫ್)ಗೆ  ಮೆಗಾ ಡೈರಿ ಸ್ಥಾಪನೆಗೆ 15 ಎಕರೆ ಜಮೀನು ಮಂಜೂರು ಮಾಡಿ 2.92 ಕೋಟಿ ರೂ  ಡಿಸಿಯವರು ಪತ್ರ ಬರೆದಿದ್ದಾರೆ. ಆದರೆ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇರದ ಕಾರಣ ಹಣ ಪಾವತಿಗೆ ಸಮಸ್ಯೆಯಾಗಿದೆ.
ಗಾಲಿ ಸೋಮಶೇಖರ ರೆಡ್ಡಿ ಅವರು ಕೆಎಂಎಫ್ ಅಧ್ಯಕ್ಷರಾಗಿದ್ದಾಗ ಬಳ್ಳಾರಿಗೆ ಮೆಗಾ ಡೈರಿ ತರುವುದಾಗಿ ಹೇಳಿ ದಶಕ ಕಳೆದಿದೆ. ಆದರೂ ಇನ್ನೂ ಆಗಿಲ್ಲ. ಈ ಮೊದಲು ಶ್ರೀಧರಗಡ್ಡೆ ಬಳಿ ಎಂದು, ನಂತರ ಈಗ ಇರುವಡೆಯೇ ಮಾಡಲು ಚರ್ಚೆ ನಡೆದಿತ್ತು. ಆದರೆ ಇದಕ್ಕೆ  ಅನುಮತಿ ಸಿಗದ ಕಾರಣ ನಿಂತಿತ್ತು.
ಈ ಮಧ್ಯೆ ಹಾಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಇಲ್ಲಿ ನಿವೇಶನ ದೊರೆಯುತ್ತಿಲ್ಲ ಎಂಬ ಸಬೂಬು ನೀಡಿ,
ಮೆಗಾ ಡೈರಿ ಯೋಜನೆಯನ್ನು  ತಮ್ಮ ಹಗರಿಬೊಮ್ಮನಹಳ್ಳಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸಿದ್ದರಂತೆ. ಈಗಲೂ ಅವರು ಈ ಪ್ರಯತ್ನದಲ್ಲಿದ್ದಾರಂತೆ.
ಈ ಮಧ್ಯೆ ಜಿಲ್ಲಾಡಳಿತ  ಜೂನ್ 29 ರಂದು ಒಕ್ಕೂಟಕ್ಕೆ ಪತ್ರ ಬರೆದು ತಾಲೂಕಿನ‌ ಕೊಳಗಲ್ಲು ಗ್ರಾಮದ ಸರ್ವೇ ನಂಬರ್ 139/ಬಿ ನಲ್ಲಿ ಮೆಗಾ ಡೈರಿಗೆ 15 ಎಕರೆ ಜಮೀನು ಮಂಜೂರು ಮಾಡಿದೆ. ಇದಕ್ಕೆ ಸರ್ಕಾರದ ನಿಯಮಾವಳಿಗಳ ಬೆಲೆಯಂತೆ 2.92,01,070 ರೂಗಳನ್ನು 15 ದಿನದೊಳಗೆ  ಪಾವತಿಸುವಂತೆ ಸೂಚಿಸಿದ್ದಾರೆ.
ಆದರೆ ಹಣ ಪಾವತಿ ಮಾಡಲು ಒಕ್ಕೂಟದ  ಬೋರ್ಡ್ ಅನುಮತಿ ಬೇಕು. ಈಗ ಚುನಾವಣೆ ಘೋಷಣೆಯಾಗಿ ಬೋರ್ಡ್ ತನ್ನ ಅಧಿಕಾರ ಕಳೆದುಕೊಂಡಿರುವುದರಿಂದ ಹಣ ಪಾವತಿ ಸಾಧ್ಯವಿಲ್ಲ. ಹೋಸ ಬೋರ್ಡ್ ಬರಬೇಕು ಅದು ಸಧ್ಯಕ್ಕೆ ಆಗುವ ಲಕ್ಷಣಗಳಿಲ್ಲ. ಆಡಳಿತಾಧಿಕಾರಿ ನೇಮಕಗೊಂಡರೆ ಅವರು ಅನುಮತಿಯಿಂದ ಹಣ ಪಾವತಿಸಬಹುದು‌.  ಹೆಚ್ಚುದಿನಗಳ ಕಾಲ ಬೋರ್ಡ್ ಅಸ್ತಿತ್ವಕ್ಕೆ ಬರದಿದ್ದರೆ ಆಡಳಿತಾಧಿಕಾರಿ ನೇಮಕವಾಗುತ್ತೆ.
ಕೋಟ್:
ಪರಿಹರಿಸಲಿದೆ:
ಹಲವು ವರ್ಷಗಳ ಕನಸಿನ ಮೆಗಾ ಡೈರಿ ಸ್ಥಾಪನೆಗೆ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಅದಕ್ಕೆ ಈಗ ಹಣ ಪಾವತಿಯ ಸಮಸ್ಯೆ ಎದುರಾಗಿರುವುದು ಬೇಸರದ ಸಂಗತಿ. ಆದಷ್ಟು ಬೇಗ ಆಡಳಿತಾಧಿಕಾರಿ ನೇಮಕಗೊಂಡು ಈ ಸಮಸ್ಯೆಗೆ ಪರಿಹಾರ ದೊರಕಿಸಲಿದೆ.
ಧನಂಜಯ ಹಮಾಲ್
ನಾಮ‌ ನಿರ್ದೇಶಿತ ಸದಸ್ಯರು
ಕೆಎಂಎಫ್, ಬಳ್ಳಾರಿ
ಪತ್ರ ಬರೆದು ತಿಳಿಸಿದೆ:
ಡಿಸಿಯವರಿಂದ ಪತ್ರ ಬಂದಿದೆ. ಆದರೆ ನಮ್ಮಲ್ಲಿ ಬೋರ್ಡ್ ಇಲ್ಲದ ಕಾರಣ ಹಣ ಪಾವತಿಗೆ ಇರುವ ಸಮಸ್ಯೆ ಬಗ್ಗೆ ಪತ್ರ ಬರೆದು ತಿಳಿಸಿದೆ.  ನಾವಾಗಿ ಹಣ ಪಾವತಿಸದಿದ್ದರೆ ಜಮೀನು ಹಿಂದಕ್ಕೆ ಹೋಗುತ್ತೆ. ನಾವು ಸಿದ್ದರಿದ್ದೇವೆ. ತಾಂತ್ರಿಕ ಸಮಸ್ಯೆ ಜಿಲ್ಲಾಡತಕ್ಕೆ ತಿಳಿಸಿದೆ.
ಪಿರ್ಯಾ ನಾಯ್ಕ
ವ್ಯವಸ್ಥಾಪಕ ನಿರ್ದೇಶಕರು.
ಕೆಎಂಎಫ್, ಬಳ್ಳಾರಿ