ಹೊಸಪೇಟೆಗೆ ಜಪಾನ್ ಮಾದರಿಯ ಅರಣ್ಯ ಅಗತ್ಯ: ದೀಪಕ್
ಸಂಜೆವಾಣಿ ವಾರ್ತೆ
ವಿಜಯನಗರ, ಜು.08: ಅಲ್ಪ ಸ್ಥಳದಲ್ಲೇ ಅರಣ್ಯ ಬೆಳೆಸುವ ಜಪಾನಿ ತಂತ್ರಜ್ಞಾನದ ಮಿಯವಾಕಿ ಫಾರೆಸ್ಟ್ ಪರಿಕಲ್ಪನೆಯನ್ನು ಹೊಸಪೇಟೆ ಜನತೆ ಗೆ ಪರಿಚಯಿಸಬೇಕಿದೆ ಎಂದು ಹೊಸಪೇಟೆ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ದೀಪಕ್ ಕೊಳಗದ್ ಹೇಳಿದರು.
ಹೊಸಪೇಟೆಯಲ್ಲಿ ಭಾನುವಾರ ಆಯೋಜಿಸಿದ್ದ ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಡಿದ ಅವರು, ಹೊಸಪೇಟೆಯಲ್ಲಿ ಸರ್ಕಾರಿ ಮತ್ತು ಅರಣ್ಯ ಪ್ರದೇಶವೂ ಕಡಿಮೆ. ಹೀಗಾಗಿ ಈ ಭಾಗದಲ್ಲಿ ಅರಣ್ಯ ಬೆಳೆಸಲು ಜಪಾನ್ ಮಾದರಿಯನ್ನು ಅನುಸರಿಸಬೇಕಿದೆ. ಜೊತೆಗೆ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಶಾಶ್ವತ ಯೋಜನೆಗಳನ್ನು ಹೊಂದಿರುವ ಕೀರ್ತಿಗೆ ಹೊಸಪೇಟೆ ರೋಟರಿ ಕ್ಲಬ್ ಪಾತ್ರವಾಗಿದ್ದು, ಅದನ್ನು ಮುಂದುವರಿಸಬೇಕಿದೆ. ಈ ನಿಟ್ಟಿನಲ್ಲಿ ತಾಯಿ ಮಕ್ಕಳ ಆರೋಗ್ಯ, ಪರಿಸರ ಜಾಗೃತಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಉದ್ದೇಶಿಸಿದ್ದಾಗಿ ತಿಳಿಸಿದರು.
ಇನ್ನರ್‍ವೀಲ್ ಅಧ್ಯಕ್ಷೆ ಸುನೀತಾ ಕಿಶೋರ್ ಮಾತನಾಡಿ, ಮಹಿಳಾ ಸಬಲೀಕರಣ, ಮಳೆ ನೀರು ಕೊಯ್ಲು, ಶಿಕ್ಷಣ, ಪರಿಸರ ಸೇರಿದಂತೆ ಆರೋಗ್ಯ, ಪೌಷ್ಠಿಕ ಆಹಾರ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದಾಗಿ ತಿಳಿಸಿದರು.
ಜಿಲ್ಲಾ 316ರ ಮಾಜಿ ಗೌರ್ನರ್ ಡಾ. ಸಮೀರ್ ಹರಿಯಾನಿ, ಡಾ.ರೂಪ ಹರಿಯಾನಿ ನೂತನ ಅಧ್ಯಕ್ಷರುಗಳಿಗೆ ಪಿನ್ ಹಾಕಿದರು.
ಕಳೆದ ವರ್ಷದಲ್ಲಿ ಮಾಡಿದ ಕಾರ್ಯ ಯೊಜನೆಗಳ ವರದಿಯನ್ನು ರೋಟರಿ ಕಾರ್ಯದರ್ಶಿ ದಾದಾಪೀರ್, ಇನ್ನರ್ ವೀಲ್ ಕಾರ್ಯದರ್ಶಿ ನೈಮಿಷಾ ಪ್ರಸ್ತುತಪಡಿಸಿದರು.
ನೂತನ ಪದಾಧಿಕಾರಿಗಳ ಪದಗ್ರಹಣ:
2024 -25ನೇ ಸಾಲಿನ ರೋಟರಿ ನೂತನ ಅಧ್ಯಕ್ಷರಾಗಿ ದೀಪಕ್ ಕೊಳಗದ್ ಹಾಗೂ ಇನ್ನ ರ್‍ವೀಲ್‍ನ ಅಧ್ಯಕ್ಷೆಯಾಗಿ ಸುನೀತ ಕಿಶೋರ್ ಅವರಿಗೆ ನಿಕಟ ಪೂರ್ವ ಅಧ್ಯಕ್ಷರಾದ ಸತ್ಯನಾರಾಯಣ ಹಾಗೂ ರಮ್ಯ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
ರೋಟರಿ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿ ಮಂಜುನಾಥ್ ಅಂಗಡಿ, ಮಹೇಂದ್ರ ಸೋನಿ, ಖಜಾಂಚಿಯಾಗಿ ಹರ್ಷ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಪದಗ್ರಹಣ ಮಾಡಿದರು.
ಇನ್ನರ್‍ವೀಲ್ ಸಂಸ್ಥೆಯ ಕಾರ್ಯದರ್ಶಿಯಾಗಿ ರಾಜೇಶ್ವರಿ ಅರಳಿಹಳ್ಳಿ ಉಪಾಧ್ಯಕ್ಷೆಯಾಗಿ ವೈ.ಅಶ್ವಿನಿ, ನೈಮಿಷಾ, ಖಜಾಂಚಿಯಾಗಿ ಶೈಲಜ ಒಡೆಯರ್ ಜಂಟಿ ಕಾರ್ಯದರ್ಶಿಯಾಗಿ ಲಕ್ಷ್ಮಿ, ಅನುಪಮಾ ಕೋರಿ ಶೆಟ್ಟಿ, ಸುಜಾತ ನಾಗರಾಜ್ ಮತ್ತಿತರರು ನಿರ್ದೇಶಕರಾಗಿ ಪದಗ್ರಹಣ ಸ್ವೀಕರಿಸಿದರು.