ಜುಲೈ17 ರಿಂದ ಯೋಗ ಶಿಕ್ಷಕರ ತರಬೇತಿ ಕಾರ್ಯಾಗಾರ
ಸಂಜೆವಾಣಿ ವಾರ್ತೆ
ಹೊಸಪೇಟೆ ಜು8: ಇದೆ ತಿಂಗಳು 17 ರಿಂದ 25 ದಿನಗಳ ಯೋಗ ಶಿಕ್ಷಕರ ತರಬೇತಿ ಕಾರ್ಯಾಗಾರ ಹೊಸಪೇಟೆಯಲ್ಲಿ ನಡೆಯಲಿದೆ ಎಂದು ಪತಂಜಲಿ ಯೋಗ ಸಮಿತಿ ರಾಜ್ಯ ಯುವ ಪ್ರಭಾರಿ ಕಿರಣ್ ಕುಮಾರ ಹೇಳಿದರು.
ಈ ಕುರಿತು ಭಾನುವಾರ ಸಂಜೆ ನಡೆದ ಜಿಲ್ಲಾ ಘಟಕದ ಸಭೆಯ ನಂತರ ಪತ್ರಿಕಾ ಹೇಳಿಕೆ ನೀಡಿದ ಅವರು ವಿಜಯನಗರ ಜಿಲ್ಲಾ ಮಟ್ಟದ ಯೋಗ ಶಿಕ್ಷಕರ ತರಬೇತಿ ಹೊಸಪೇಟೆಯ ಕೊಟ್ಟೂರುಸ್ವಾಮಿ ಮಠದಲ್ಲಿ ಇದೆ ಜುಲೈ 17 ರಿಂದ 25 ದಿನಗಳ ಕಾಲ ನಡೆಯಲಿದೆ, ಈ ಬಗ್ಗೆ ಆಸಕ್ತಿ ಇರುವ ಯೋಗ ತರಬೇತಿ ನೀಡಲು ಉತ್ಸುಕವಾಗಿರುವವರು 10ರೊಳಗಾಗಿ ತಮ್ಮ ಹೆಸರು ನೊಂದಾಯಿಸಬಹುದಾಗಿದೆ.
ತರಬೇತಿಯು ನಿತ್ಯವೂ ಬೆಳಿಗ್ಗೆ 5.15ಕ್ಕೆ ಆರಂಭವಾಗಿ 7.15ಕ್ಕೆ ಮತ್ತು ಸಂಜೆ 6 ರಿಂದ 7-30ರವರೆಗೂ ನಡೆಯಲಿದ್ದು ಪ್ರಾಯೋಗಿಕ ಹಾಗೂ ಭೌಧಿಕ ಜ್ಞಾನ ನೀಡಲು ಪತಂಜಲಿ ಯೋಗ ಪೀಠ ಹಾಗೂ ದೇಶದ ವಿವಿಧ ಭಾಗಗಳ ತಜ್ಞರು ಪಾಲ್ಗೊಳ್ಳುವರು,
ಕೇವಲ ಕೆಲವರಿಗೆ ಮಾತ್ರ ಅವಕಾಶಗಳಿದ್ದು ತಕ್ಷಣವೆ ಹೆಸರು ನೊಂದಾಯಿಸಿ ಪ್ರಯೋಜನ ಪಡೆಯುವಂತೆ ಕೋರಿದ್ದಾರೆ.
ಸಭೆಯಲ್ಲಿ ಪತಂಜಲಿ ಯೋಗ ಸಮಿತಿಯ ಬಳ್ಳಾರಿ ಜಿಲ್ಲಾ ಪ್ರಭಾರಿ ರಾಜೇಶ್ ಕರ್ವಾ, ವಿಜಯನಗರ ಪ್ರಭಾರಿ ಡಾ.ಎಫ್.ಟಿ.ಹಳ್ಳಿಕೇರಿ, ಹಿರಿಯ ಯೋಗಸಾಧಕರಾದ ಮಂಗಳಮ್ಮ, ಶಿವಮೂರ್ತಿ, ಅಶೋಕ ಚಿತ್ರಗಾರ, ಶ್ರೀನಿವಾಸ ಮಂಚಿಕಟ್ಟಿ, ಅನಂತ ಜೋಶಿ, ಶ್ರೀಧರ, ಶ್ರೀರಾಮ ಮತ್ತು ವಿಠೋಬಣ್ಣ ಸೇರಿದಂತೆ ವಿವಿಧ ಕೇಂದ್ರಗಳ ಸಂಚಾಲಕರು ಪಾಲ್ಗೊಂಡಿದ್ದರು.