ದಾಸ ಸಾಹಿತ್ಯ  ಪರೀಕ್ಷೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.08: ನಗರದ  ಸತ್ಯನಾರಾಯಣ ದೇವಾಲಯದ ಸಭಾಂಗಣದಲ್ಲಿ ನಿನ್ನೆ
ವಿಶ್ವ ಮಧ್ವ ಮಹಾ ಪರಿಷತ್ತಿನಿಂದ ದಾಸ, ದಾಸನಿಧಿ, ದಾಸಶ್ರೀ, ದಾಸರತ್ನ, ದಾಸ ಶಿರೋಮಣಿ, ದಾಸರತ್ನ ಮತ್ತು ದಾಸಸಾಗರ ವಿದ್ಯಾರ್ಥಿಗಳು ಪರೀಕ್ಷೆ ನಡೆದವು.
ಕಳೆದ 2017 ರಲ್ಲಿ  ಉತ್ತರಾಧಿ ಮಠದ  ಸತ್ಯಾತ್ಮತೀರ್ಥ ಸ್ವಾಮೀಜಿ ಪ್ರತಿಷ್ಠಾಪಿಸಿದ ಸೌರಭ ದಾಸ ಸಾಹಿತ್ಯ ವಿದ್ಯಾಲಯವು, ದಾಸ ಸಾಹಿತ್ಯದ ಸಾಹಿತ್ತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ.
ಅನೇಕ ಮಹಿಳೆಯರು  ಪರೀಕ್ಷೆ ಬರೆದರು. ಇದಕ್ಕೂ ಮುನ್ನ ಮಹಿಳೆಯರಿಂದ ಸಾಮೂಹಿಕ ಭಜನೆ ನಡೆಯಿತು.