ನೊಂದವರ ಬೆಂಬಲಕ್ಕೆ ನಿಂತ   ಶ್ರೀರಾಮುಲು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.08: ಕಳೆದ ಹತ್ತು ದಿನಗಳ ಹಿಂದೆ ತಾಳೂರು ರಸ್ತೆ  ಹೆಚ್ಎಲ್ಸಿ ಸಬ್ ಕೆನಾಲ್ ಮೇಲೆ ಇರೋ ಹತ್ತಕ್ಕೂ ಹೆಚ್ಚು ಗುಡಿಸಲುಗಳನ್ನು ಅನಧಿಕೃತ ನಿರ್ಮಾಣ  ಎಂದು ತೆರವು ಮಾಡಿದ್ದರು. ಅಲ್ಲಿರುವ ಒಬ್ಬರ ಷಾಮಿಯಾನ ಅಂಗಡಿಗೆ ತೊಂದರೆ ಆಗುತ್ತೆ ಎಂದು ಈ ಕಾರ್ಯ ನಡದಿದೆಯಂತೆ.  ಕಾಲುವೆಯ ಉದ್ದಕ್ಕೂ ಅನಧಿಕೃತ ನಿರ್ಮಾಣ ಇದ್ದರೂ ಅವನ್ನು ತೆರವುಗೊಳಿಸದೇ ಇವನ್ನಷ್ಟೇ ತೆರವಿಗೆ ಮುಂದಾಗಿದೆ.
ತೆರವಿನಿಂದಾಗಿ ಸೂರು ಕಳೆದುಕೊಂಡ ಬಡವರು  ಬೀದಿಗೆ ಬಿದ್ದಿದ್ದರು. ಅಳಿದುಳಿದ ಗುಡಿಸಲು ಮುಂದೆಯೇ ವಾಸ ಮಾಡುತ್ತಿದ್ದರು. ಸಂತ್ರಸ್ತರ ಕಷ್ಟವನ್ನು ಅರಿತ ಮಾಜಿ ಸಚಿವ ಬಿ. ಶ್ರೀರಾಮುಲು ಸ್ಥಳಕ್ಕಾಗಮಿಸಿ ಹತ್ತು ಕುಟುಂಬದವರಿಗೆ ತಾತ್ಕಾಲಿಕ ಸೂರನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ತಾತಲಿಕ ಗು ಟೆಂಟ್  ನಿರ್ಮಾಣ ಮಾಡಿ ಆ ಕುಟುಂಬಗಳಿಗೆ  ಆಹಾರ ಧಾನ್ಯವನ್ನು ನೀಡಿದ್ದಾರೆ.
ಸ್ಥಳೀಯ ಪ್ರಭಾವಿ ನಾಯಕರ ಕುಮ್ಮಕ್ಕಿನಿಂದಾಗಿ ಕಳೆದ ನಲವತ್ತು ವರ್ಷದಿಂದ ವಾಸ ಮಾಡುತ್ತಿರುವ ಬಡವರ ಗುಡಿಸಲು ತೆರವು ಮಾಡಿದ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮುಲು ಬಳ್ಳಾರಿಯಲ್ಲಿ ಅದೆಷ್ಟೋ ಜನರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಅವರಿಗೊಂದು ಬಡವರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು. ಅಲ್ಲದೇ ನಿಯಮದ ಪ್ರಕಾರ ತೆರವು ಮಾಡಲಿ ಆದರೆ ತೆರವು ಮಾಡಿದವರಿಗೆ ಮತ್ತೊಂದು ಕಡೆ ಸೂರನ್ನು ನೀಡಬೇಕಲ್ಲವೇ ಎಂದು ಪ್ರಶ್ನಿಸಿದರು.
ಈ ವೇಳೆ ಬಿಜೆಪಿ ಕಾರ್ಪೋರೇಟರ್ ಹನುಮಂತಪ್ಪ, ಗೋವಿಂದರಾಜು , ಮುಖಂಡರಾದ  ಗುರುಲಿಂಗನಗೌಡ  ಮೊದಲಾದವರು ಇದ್ದರು
One attachment • Scanned by Gmail