ಜಗಳೂರು;  ಕೆ.ಎಸ್. ಆರ್.ಟಿ.ಸಿ ಅಶ್ವಮೇಧ ಬಸ್ ಸಂಚಾರ -: ಶಾಸಕ ಬಿ.ದೇವೇಂದ್ರಪ್ಪ
ಸಂಜೆವಾಣಿ ವಾರ್ತೆ
ಜಗಳೂರು.ಜು.೮; ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಕೆ.ಎಸ್. ಆರ್.ಟಿ.ಸಿ ಅಶ್ವಮೇಧ ಬಸ್ ಗೆ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರ ಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಇಂದು ಬೆಳಿಗ್ಗೆ ಚಾಲನೆ ನೀಡಿದರು ನಂತರ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ರಾಜ್ಯ ವ್ಯಾಪಿ ಕೆಎಸ್ ಆರ್ ಟಿಸಿ ನಿಗಮದಡಿ ಸರ್ಕಾರಿ ಬಸ್ ಸೌಲಭ್ಯ ಉತ್ತಮ ಸೇವೆಯಲ್ಲಿದ್ದು ಅದರಲ್ಲೂ ಕಾಂಗ್ರೆಸ್ ಆಡಳಿತ ಪಕ್ಷ ಜಾರಿಗೊಳಿಸಿರುವ ಶಕ್ತಿ ಯೋಜನೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಅಧಿಕ ಬೇಡಿಕೆ  ಯಿದೆ.ಈ ನಿಟ್ಟಿನಲ್ಲಿ ತಾಲೂಕಿ ನ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ,ಮಹಿಳೆಯರಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸುವ ಸಂಕಲ್ಪ ಹೊಂದಲಾಗಿದೆ.  ಅಲ್ಲದೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಧಿವೇಶನದಲ್ಲಿ ಸಾರಿಗೆ ಸಚಿವರ ಗಮನಕ್ಕೆ ತಂದು ಡಿಪೋ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು.ಪಟ್ಟಣ ದಿನದಿಂದ ದಿನಕ್ಕೆ ವಿಸ್ತರಣೆ ಯಾಗುತ್ತಿದ್ದು.ಸರ್ಕಾರಿ ಜಾಗದ ಕೊರತೆ ಯಿದೆ.ಜಾಗ ಖರೀದಿಸಲು ಸರ್ಕಾರದ ಅನುದಾನದ ಕೊರತೆಯಿದೆ ಎಲ್ಲವ ನ್ನೂ ಸರಿಪಡಿಸಿ ಸೂಕ್ತ ನಿರ್ಧಾರ‌ ಕೈಗೊಳ್ಳಲಾಗುವುದು.ಇದೀಗ ಬೆಳಿಗ್ಗೆ ವೇಳೆ ಬೆಂಗಳೂರಿಗೆ ತೆರಳಲು ಬಸ್ ಸಮಸ್ಯೆ ಹೊಂದಿದ್ದರಿಂದ ಅಧಿಕಾರಿಗಳ ಗಮನಕ್ಕೆ ತಂದ ಪರಿಣಾಮ ಕೂಡಲೇ ಪ್ರಯಾಣಿಕರ ಅನುಕೂಲಕ್ಕಾಗಿ ಅದು ಮೊದಲ ಬಾರಿಗೆ ಪ್ರತಿಷ್ಠಿತ ಅಶ್ವಮೇಧ ಬಸ್ ಸಂಚಾರ ಕಲ್ಪಿಸಲಾಗಿದೆ ಈ ಬಸ್ ಪ್ರತಿದಿನ ಬೆಳಿಗ್ಗೆ 5:25ಕ್ಕೆ ಜಗಳೂರು ನಿರ್ಗಮನವಾಗಿ 10:00 ಗಂಟೆಗೆ ಬೆಂಗ ಳೂರು ತಲುಪುತ್ತದೆ.ಹಾಗೂ ಸಂಜೆ 5:25ಕ್ಕೆ ಬೆಂಗಳೂರು ನಿರ್ಗಮನವಾಗಿ ರಾತ್ರಿ 10:00 ಗಂಟೆಗೆ ಜಗಳೂರಿ ಗೆ ಆಗಮಿಸುತ್ತದೆ ಎಂದು ತಿಳಿಸಿದರು.ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,ತಾಲೂಕಿನಲ್ಲಿ ತಡ ರಾತ್ರಿವೇಳೆ ಕೆಎಸ್ ಆರ್ ಟಿಸಿ ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಹಂತಹಂತವಾಗಿ ಶಾಸಕರ ಸಹಕಾರದಿಂದ ಅಧಿಕಾರಿಗಳೊಂದಿ ಗೆ ಚರ್ಚಿಸಿ ಬಸ್ ಸೌಕರ್ಯ ಒದಗಿಸಲಾಗುವುದು.ಅಲ್ಲದೆ ಇದೀಗ ಮೊದಲ ಬಾರಿ ಪ್ರತಿಷ್ಠಿತ ಬಸ್ ಗಳಲ್ಲೊಂದಾಗಿರುವ ಅಶ್ವಮೇಧ ಬಸ್ ಸೌಲಭ್ಯ ಸಂತಸ ತಂದಿದೆ ಎಂದರು.