ಭಾರತ್ ಅಕ್ಕಿ ಸ್ಥಗಿತ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೮;: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರತ್ ಅಕ್ಕಿ ಯೋಜನೆ ನೀಡುತ್ತಿರುವುದನ್ನು ರದ್ದುಪಡಿಸಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು  ಮಹಾನಗರ ಪಾಲಿಕೆ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ  ಮಾತನಾಡಿಲೋಕಸಭಾ ಚುನಾವಣೆ ಮೂರು ತಿಂಗಳು ಇರುವಾಗ ಮತಗಳ ಆಸೆಗಾಗಿ ಕೇಂದ್ರ ಸರ್ಕಾರ ಭಾರತ್ ಅಕ್ಕಿ ಯೋಜನೆ ಜಾರಿಗೆ ತಂದಿತ್ತು. ಚುನಾವಣೆಯಲ್ಲಿ ನಿರೀಕ್ಷಿತ ಕ್ಷೇತ್ರದಲ್ಲಿ ಗೆಲುವು ಸಿಗಲಿಲ್ಲ ಎಂಬ ಕಾರಣಕ್ಕೆ ಯಾವುದೇ ಸುಳಿವು ನೀಡದೆ ದಿಢೀರ್ ನೆ ಭಾರತ್ ಅಕ್ಕಿ ಯೋಜನೆ ನಿಲ್ಲಿಸಿರುವುದು ಅತ್ಯಂತ ಖಂಡನೀಯ ಮತ್ತು ಜನ ವಿರೋಧಿ ಕ್ರಮ. ಕೂಡಲೇ ಯೋಜನೆಯನ್ನು ಪುನರ್ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.ಜನರಿಗೆ ಮರಳು ಮಾಡಲು ಸರ್ಕಲ್ ಗಳಲ್ಲಿ ಭಾರತ್ ಅಕ್ಕಿ ಪೂರೈಕೆ ಮಾಡಿದ ಬಿಜೆಪಿ ಯವರು ಈಗ ನಿಲ್ಲಿಸಿದ್ದಾರೆ. ಹದಿನೈದು ದಿನಗಳಲ್ಲಿ ಭಾರತ್ ಅಕ್ಕಿ ವಿತರಣೆ ಮಾಡಬೇಕು. ಇಲ್ಲವಾದಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಧೈರ್ಯ ಇದ್ದರೆ ಅಕ್ಕಿ ಪೂರೈಕೆ ಮಾಡಬೇಕು. ಕೇಂದ್ರ ಸರ್ಕಾರದಂತೆ ಯಾವುದೇ ಕಾರಣಕ್ಕೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ ಎಂದು ತಿಳಿಸಿದರುಪ್ರತಿಭಟನೆಯಲ್ಲಿ ಎಸ್. ಮಲ್ಲಿಕಾರ್ಜುನ್‌, ಗಡಿಗುಡಾಳ್ ಮಂಜುನಾಥ್,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ, ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, , ಬಿ. ಚಮನ್ ಸಾಬ್, ಮೀನಾಕ್ಷಿ ಜಗದೀಶ್, ಅಬ್ದುಲ್ ಲತೀಫ್, ಯುವರಾಜ್, ಕೆ.ಜಿ. ಶಿವಕುಮಾರ್ ಇತರರು ಇದ್ದರು.