ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಿ
ಬಾದಾಮಿ,ಜು.8: ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಮೂಲಕ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದು ಮುಖಂಡ ಹನಮಂತಗೌಡ ಹುಡೇದಮನಿ ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಕಲ್ಲಾಪೂರ ಎಸ್.ಕೆ.ಗ್ರಾಮದ ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ)ಯಲ್ಲಿ ಶಾಲಾ ಸಂಸತ್ ರಚನೆ ಮತ್ತು ಮಕ್ಕಳಿಗೆ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಡಳಿತ ಅನುಭವ, ಸಾಮಾಜಿಕ, ಸಾಮಾನ್ಯ, ರಾಜಕೀಯ ಸೇರಿದಂತೆ ವಿವಿದ ವಿಷಯಗಳನ್ನು ಪ್ರಾಯೋಗಿಕವಾಗಿ ಅನುಭವಿಸಲು ಶಾಲಾ ಸಂಸತ್ ರಚನೆ ಉತ್ತಮ ಪ್ರಕ್ರಿಯೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಪುಂಡಲೀಕ ಕರಡಿಗುಡ್ಡ, ಬಸವರಾಜ ಸಣ್ಣಪ್ಪನ್ನವರ, ಗ್ರಾ.ಪಂ.ಸದಸ್ಯ ಮುತ್ತಪ್ಪ ಆನೆಗುಂದಿ, ಯಲ್ಲವ್ವ ಕರಡಿಗುಡ್ಡ, ಬಸವರಾಜ ಎತ್ತಿನಮನಿ, ಫಕೀರಪ್ಪ ಕರಡಿಗುಡ್ಡ, ಮುಖ್ಯಶಿಕ್ಷಕ ಜೆ.ಎಲ್.ಹಟ್ಟಿ, ಸೇರಿದಂತೆ ಸಹಶಿಕ್ಷಕರು ಹಾಜರಿದ್ದರು.