ಡೆಂಗ್ಯೂ ಕುರಿತು ಜಾಗೃತಿ
ಹುಬ್ಬಳ್ಳಿ,ಜು.8: ಡೆಂಗ್ಯೂ ಮಹಾಮಾರಿಯ ಕುರಿತಂತೆ ಹು-ಧಾ ಮಹಾನಗರ ಪಾಲಿಕೆ ಕೈಗೊಂಡಿರುವ ನಿಯಂತ್ರಣ ಜವಾಬ್ದಾರಿಯ ಕುರಿತು ಸಮತಾ ಸೇನಾ ಕರ್ನಾಟಕ ವತಿಯಿಂದ ಮಾಹಿತಿ ಕರಪತ್ರ ಹಂಚುವ ಮೂಲಕ ಹುಬ್ಬಳ್ಳಿಯಲ್ಲಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಲಾಯಿತು.
ನಗರದ ಚೆನ್ನಮ್ಮ ವೃತ್ತ, ಬಸ್ ನಿಲ್ದಾಣ, ಮಿನಿ ವಿಧಾನಾಸೌಧ, ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಪಾಲಿಕೆಯ ಮಾಹಿತಿ ಕರಪತ್ರಗಳನ್ನು ಹಂಚಲಾಯಿತು.
ಈ ವೇಳೆ ಸಮತಾಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ರಘು ಬಸವಂತಕರ, ಕವಿತಾ ನಾಯ್ಕರ್, ಪರಶುರಾಮ ನಂದ್ಯಾಳ, ಮಂಜಣ್ಣಾ ಉಳ್ಳಿಕಾಶಿ, ಬಾಬರ ಖೋಜೆ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.