ಲೋಕಾಯುಕ್ತ ಬಲೆಗೆ ಭೂಮಾಪನ ಸಹಾಯಕ ನಿರ್ದೇಶಕಿ
ಮಾಲೂರು.ಜು.೮- ಸರ್ವೆ ಮತ್ತು ಭೂಮಾಪನ ಇಲಾಖೆ ಎಡಿಎಲ್‌ಆರ್ ಅಶ್ವಿನಿ ಹಾಗೂ ಕಸಬಾ ಹೋಬಳಿ ರಾಜಸ್ವನಿರೀಕ್ಷಕ ಮಂಜುನಾಥ್ ಎಡಿಎಲ್‌ಆರ್ ಕಚೇರಿಯ ಡಿ.ಗ್ರೂಪ್ ನೌಕರ ನಾಗಪ್ಪ ಅವರು ಪಟ್ಟಣದ ತಾಲೂಕು ಕಚೇರಿಯಲ್ಲಿ ದೂರುದಾರನಿಂದ ಭೂ ಪರಿವರ್ತನೆ ಮೋಜಿನಿ ಸ್ಕೆಚ್ ಹಾಗೂ ಪೋಡಿ ಮಾಡಿಸಲು ೨೦,೦೦೦ ನಗದು ಪಡೆಯುವ ವೇಳೆ ಕೊಲಾರ ಜಿಲ್ಲಾ ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ ಉಮೇಶ್ ಅವರ ನೇತೃತ್ವದಲ್ಲಿ ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ತಾಲೂಕಿನ ದೊಡ್ಡ ಕಡತೂರು ಗ್ರಾಮದ ಬಳಿ ಸರ್ವೆ ನಂಬರ್ ೨೦೧/೨ರ ಕಾಮಣ್ಣ ಎಂಬುವರ ಜಮೀನಿನ ಭೂ ಪರಿವರ್ತನೆ ಸ್ಕೆಚ್ ಹಾಗೂ ಪೋಡಿ ಮಾಡಿಸಲು ಎಡಿಎಲ್‌ಆರ್ ಅಶ್ವಿನಿ ಹಾಗೂ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಮಂಜುನಾಥ್ ಅವರು ದೂರುದಾರ ಮಹೇಶ್ ಅವರಿಗೆ ರೂ. ೪೦ ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಅದರಂತೆ ೧೦,೦೦೦ಗಳನ್ನು ಕೆಆರ್ ಪುರಂ ಎ ಟು ಬಿ ರೆಸ್ಟೋರೆಂಟ್ ಬಳಿ ಮುಂಗಡ ಹಣ ಪಡೆದಿದ್ದು, ಉಳಿದ ಹಣ ನಿನ್ನೆ ಸಂಜೆ ಸರ್ವೆ ಮತ್ತು ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕಿ ಅಶ್ವಿನಿ ಅವರಿಗೆ ದೂರುದಾರ ಉಳಿದ ಹಣ ೨೦ಸಾವಿರ ನೀಡಲು ಬಂದಾಗ ಕಚೇರಿಯ ಸಹಾಯಕ ನಾಗಪ್ಪ ಅವರಿಗೆ ಹಣ ನೀಡುವಂತೆ ಹೇಳಿದ್ದು, ನಾಗಪ್ಪ ಅವರು ದೂರುದಾರನಿಂದ ಹಣ ಪಡೆದು ರಾಜಸ್ಥ ನಿರೀಕ್ಷಕ ಮಂಜುನಾಥ್ ಅವರಿಗೆ ಹಣ ನೀಡುವ ವೇಳೆ ರಾಜಸ್ವ ನಿರೀಕ್ಷಕ ಮಂಜುನಾಥ್ ಹಾಗೂ ಸರ್ವೆ ಮತ್ತು ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕಿ ಅಶ್ವ್ವಿನಿ ದೂರುದಾರ ಮಹೇಶ್ ಎಂಬುವರು ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್ ನೇತೃತ್ವದಲ್ಲಿ ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ.