ಶ್ರೀನಾಗಲಿಂಗಶ್ರೀಗಳ ಆರಾಧನಾ ಮಹೋತ್ಸವ
ನವಲಗುಂದ,ಜು8 : ಶ್ರೀನಾಗಲಿಂಗಸ್ವಾಮಿಗಳ 143ನೇ ಆರಾಧನಾ ಮಹೋತ್ಸವ ಇದೇ ಜುಲೈ 10 ಮತ್ತು 11 ರಂದು ಜರುಗಲಿದೆ.
ಬುಧವಾರ ಆರಾಧನೆ, ಪೂಜೆ ಸಂಜೆ ಚಿದ್ರೂಪಾನಂದ ಸರಸ್ವತಿಜೀ ಶ್ರೀಗಳು ದಯಾನಂದ ಗುರುಕುಲ ಹುಬ್ಬಳ್ಳಿ, ಕೃಷ್ಣಾನಂದ ಶರಣರು ಶಂಕರಾಚಾರ್ಯ ಅವಧೂತ ಆಶ್ರಮ ಖಜ್ಜಿಡೋಣಿ ಸಾನಿಧ್ಯದಲ್ಲಿ, ಶಾಸಕ ಎನ್.ಎಚ್. ಕೋನರಡ್ಡಿ ಅವರ ಅಧ್ಯಕ್ಷತೆಯಲ್ಲಿ, ಖ್ಯಾತ್ಯಮನೋವೈದ್ಯರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸಿ. ಆರ್. ಚಂದ್ರಶೇಖರ ಅವರಿಗೆ ನಾಗಲಿಂಗಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಧರ್ಮಸಭೆ ನಡೆಯುವುದು.
ಜುಲೈ 11 ಗುರುವಾರದಂದು ಬೆಳಿಗ್ಗೆ ಅಭಿನವ ಯಚ್ಚರಸ್ವಾಮಿಗಳು ಗವಿಮಠ ಶಿರೋಳ ಇವರ ಸಾನಿಧ್ಯದಲ್ಲಿ ಮತ್ತು ಎನ್. ನಾಗೇಂದ್ರ ಅತಿಥಿ ಸ್ಥಾನದಲ್ಲಿ ಸಂಗೀತಸೇವೆ, ಸಂಜೆ ಪಲ್ಲಕ್ಕಿ ಹಾಗೂ ಮೇಣೆ ಉತ್ಸವ ವಿಜೃಂಭಣೆಯಿಂದ ಜರುಗುತ್ತವೆ.