ಪತ್ರಿಕಾ ದಿನಾಚರಣೆ
ನವಲಗುಂದ,ಜು8 : ಒತ್ತಡದ ಬದುಕಿನಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು. ಪ್ರಸುತ್ತ ವಿದ್ಯಮಾನಗಳನ್ನು ಜನರಿಗೆ ತಲುಪಿಸುತ್ತಾ, ಸಮಾಜವನ್ನು ಸುಧಾರಿಸುವ ಕೆಲಸ ಮಾಡುವ ಪತ್ರಕರ್ತರ ಕಾರ್ಯ ಶ್ಲ್ಯಾಘನೀಯವಾದದ್ದು ಎಂದು ರೈತ ಮುಖಂಡ ಬಸನಗೌಡ ಪಾಟೀಲ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕ ಕಾರ್ಯನಿರತ ಪತ್ರಕರ್ತ ಧ್ವನಿ ಸಂಘ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಸಸಿಗೆ ನಿರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಉಪಾಧ್ಯಕ್ಷ ಈಶ್ವರ ಲಕ್ಕುಂಡಿ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮ ನಾಲ್ಕನೇ ಅಂಗವಾಗಿದ್ದು ಪತ್ರಕರ್ತರ ಸೇವೆ ಅಪಾರವಾಗಿದೆ. ಆದರೆ ಇಂದು ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಂದೀಶ ಸಂಗಟಿ ಮಾತನಾಡಿ ಸರ್ಕಾರವು ಪತ್ರಕರ್ತರಿಗೆ ರಕ್ಷಣೆ ನೀಡುವುದರ ಜೊತೆಗೆ ಉಚಿತ ಬಸ್ ಪಾಸ್ ನೀಡುವುದಾಗಿ ಹೇಳಿದೆ ಆದರೆ ಇನ್ನು ಕಾರ್ಯರೂಪಕ್ಕೆ ಬಂದಿಲ್ಲ ಬೇಗನೆ ಉಚಿತ ಬಸ್ ಪಾಸ್ ನೀಡುವಂತೆ ಮನವಿ ಮಾಡಿದ ಅವರು ಪ್ರತಿ ತಾಲೂಕಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಸರ್ಕಾರಕ್ಕೆ ಧನಸಹಾಯ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಅಬ್ದುಲರಜಾಕ ನದಾಫ, ಶಿವು ನಾಯಕ ಖಾದರಸಾಬ್ ನದಾಫ್, ಯಲ್ಲಪ್ಪ ಭೋವಿ, ಮಮತಾಜ್ ನದಾಫ್, ಬಾಬಾಜಾನ ಶಿರಕೋಳ, ಧರ್ಮರಾಜ ಗುಳೇದ ಗಂಗಾಧರ ಕತ್ತಿ, ಶರೀಫ್ ಹುಡೇದ ಕೃಷ್ಣರಡ್ಡಿ ಕುರಹಟ್ಟಿ ಇತರರು ಉಪಸ್ಥಿತರಿದ್ದರು.
ಇಸ್ಮಾಯಿಲ್ ನದಾಫ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಂಕರ ಸುಬೇಧಾರಮಠ ಕಾರ್ಯಕ್ರಮ ನಿರೂಪಿಸಿದರು, ಸಂಜಯ ಗುರಿಕಾರ ವಂದಿಸಿದರು.