ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಮುನವಳ್ಳಿ,ಜು8 : ಪಟ್ಟಣದ ಮುರುಘರಾಜೇಂದ್ರ ಯೋಗ ವಿದ್ಯಾಕೇಂದ್ರ ಸಂಚಾಲಿತ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜರುಗಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಮುರುಘೇಂದ್ರ ಶ್ರೀಗಳು ಶಿಕ್ಷಣ ಸಂಸ್ಥೆ ಬೆಳೆಯಲು ಶಿಕ್ಷಕರ ಪಾತ್ರ ಮಹತ್ವದ್ದು ಅಂಥ ಶಿಕ್ಷಕರು ಸಿಕ್ಕಿರುವುದು ನಮಗೆ ವರವಾಗಿದೆ ವಿದ್ಯಾರ್ಥಿಗಳು ಕೂಡ ಶಿಕ್ಷಣದತ್ತ ಗಮನಹರಿಸಿ ಕೀರ್ತಿ ತರಬೇಕು ಎಂದರು.
ದಿವ್ಯಸಾನಿಧ್ಯ ವಹಿಸಿ ಘಟಪ್ರಭಾ ಗುಬ್ಬಲಗುಡ್ಡದ ಕೆಂಪಯ್ಯಸ್ವಾಮಿಮಠದ ಶ್ರೀ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ ಅನಾದಿ ಕಾಲದಿಂದಲೂ ಶೈಕ್ಷಣಿಕ ಪ್ರಗತಿಯಲ್ಲಿ ಮಠಮಾನ್ಯಗಳು ನೀಡುತ್ತಿರುವ ಕೊಡುಗೆ ಅಪಾರ ಶ್ರೀ ಮುರುಘೇಂದ್ರ ಶ್ರೀಗಳು ಬಡಮಕ್ಕಳಿಗೆ ವಿಷೇಶ ಸವಲತ್ತುಗಳನ್ನು ನೀಡಿ ವಿದ್ಯಾರ್ಥಿಗಳನ್ನು ಬೆಳಸುವದು ಶ್ಲಾಘನಿಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಒಳ್ಳೆಯರೀತಿಯಲ್ಲಿ ಶೀಕ್ಷಣ ಪಡಿದುಕೊಂಡು ಸಾಧನೆ ಗುರಿಯತ್ತ ಸಾಗಿರಿ ಎಂದರು.
ಅರುಣಗೌಡ ಪಾಟೀಲ, ಮಲ್ಲಿಕಾರ್ಜುನ ಜಮಖಂಡಿ, ಈರಣ್ಣ ಸಂಕಣ್ಣವರ, ಗಂಗಾದರ ಗೊರಾಬಾಳ, ಶಂಕರ ಗಯ್ಯಾಳಿ, ಎಂ.ಗಿರೀಶ, ಜಿ.ಜಿ.ಲಮಾಣಿ, ಅಶೋಕ ಸಂಕನ್ನವರ, ಎನ್.ಎಸ್.ಕಬ್ಬೂರ, ರವಿ ಪೂಜಾರ, ಎಂ.ಸಿ.ಬಾಂಡೇಕರ, ಗಾಯಿತ್ರಿ ಹಿರೇಮಠ, ದಾನಯ್ಯ ಗದಗಿನ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ 2023-24 ನೇ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಂ.ಎಮ್ ತಿಮ್ಮಾಣಿ, ಗ್ರಾ.ಪಂ ಅಧ್ಯಕ್ಷ ಪುಂಡಲೀಕ ಉಪ್ಪಾರ, ಸುರೇಶ ಜಾವೂರ ಇವರುಗಳಿಗೆ ಗೌರವ ಸತ್ಕಾರ ಜರುಗಿತು.
ಸ್ವಾಗತವನ್ನು ಕೆ.ಬಿ.ನಲವಡೆ, ಕಾರ್ಯಕ್ರಮ ನೀರೂಪಣೆ ಎಮ್.ಎಚ್,ಪಾಟೀಲ, ಶೇಖರ ಮುಪ್ಪಿನವರಮಠ ವಂದಿಸಿದರು.