ದೇಶದ ಆರ್ಥಿಕ ಅಭಿವೃದ್ಧಿಗೂ ಸಂವಿಧಾನ ಆಶಯವೇ ಮೂಲ ಮಂತ್ರ
ಗದಗ,ಜು8: ದೇಶದ ಆರ್ಥಿಕ ಅಭಿವೃದ್ಧಿಗೂ ಸಂವಿಧಾನ ಆಶಯವೇ ಮೂಲ ಮಂತ್ರವಾಗಿದೆ ಎಂದು ಸಚಿವ ಡಾ.ಎಚ್. ಕೆ. ಪಾಟೀಲ ಅವರು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ರಾಷ್ಟ್ರೀಯ ಸೇವಾ ಯೋಜನಾ ಕೋಶ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ,ಕರ್ನಾಟಕ ಅರಣ್ಯ ಇಲಾಖೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಾಗಾವಿಯ ವಿವಿ ಆವರಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪ್ರಚಾರ ಅಭಿಯಾನ, ಸಂವಿಧಾನ ಓದು, ವನಮಹೋತ್ಸವ ಹಾಗೂ ಪ್ರವಾಸಿ ಮಾರ್ಗದರ್ಶಿ ಗಳ ತರಬೇತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಸಚಿವರು ಮಾತನಾಡಿದರು.
ನಮ್ಮ ಭಾರತದ ಸಂವಿಧಾನ ಕಳೆದ 75 ವರ್ಷದಿಂದ ದೇಶದ ಸರ್ವರ ಬೇಕು ಬೇಡಿಕೆಗಳನ್ನ ಪೂರೈಸಿದೆ. ಆದುದರಿಂದಲೇ ಸಂವಿಧಾನ ನಮ್ಮ ಹೆಮ್ಮೆ ಎನ್ನುತ್ತೇವೆ. ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ನೀಡುವದು ಅಸಾಧ್ಯ ಎಂದು ವಿದೇಶಿಗರು ಹೇಳಿದ್ದರು. ನಮ್ಮದೇಶದ ಜನರನ್ನು, ಮುಖಂಡರನ್ನು ಲಗುವಾಗಿ ಕಾಣುತ್ತಿದ್ದರು. ಆದರೇ ನಾವುಗಳು ನಮ್ಮ ಸಂವಿಧಾನ ಸಾಮರ್ಥ್ಯ ಏನೆಂದು ಈಗ ಜಗತ್ತಿಗೆ ತೋರಿಸಿದ್ದೇವೆ. ಹಲವು ರಾಷ್ಟ್ರಗಳಿಗೆ ನಮ್ಮ ದೇಶ ಮಾದರಿಯಾಗಿದೆ. ನಮ್ಮ ದೇಶದ ಅಭಿವೃದ್ಧಿ ಗುರಿ ನೋಡಿ ನಿಬ್ಬೇರಗಾಗಿ ನೋಡುತ್ತಿದ್ದಾರೆ ಎಂದರು.
ಅನ್ಯ ದೇಶಗಳ ಆರ್ಥಿಕ ವ್ಯವಸ್ಥೆಗಿಂತ ನಮ್ಮ ದೇಶ ಉನ್ನತ ಸ್ಥಾನದಲ್ಲಿದ್ದೇವೆ. ಇದಕ್ಕೆ ಮೂಲ ಕಾರಣ ನಮ್ಮ ಸಂವಿಧಾನವಾಗಿದೆ. ಇದನ್ನು ನಾವೆಲ್ಲರೂ ಮರೆಯಬಾರದು. ಎಲ್ಲ ಜಾತಿ, ದರ್ಮ, ಸಮುದಾಯ ಸರ್ವರನ್ನು ಒಳಗೊಂಡ ಶ್ರೇಷ್ಠ ಸಂವಿಧಾನ ಭಾರತದ ಸಂವಿಧಾನ ಎಂದರು.
ಸಹಕಾರಿ ಭೀಷ್ಮ ಕೆ. ಎಚ್. ಪಾಟೀಲ ಜನ್ಮ ಶತಮಾನೊತ್ಸವ ಅಂಗವಾಗಿ ವಿವಿ ಆವರಣದಲ್ಲಿ ಒಂದು ಲಕ್ಷ ಗಿಡ ನೇಡುವ ಮೂಲಕ ಅರಣ್ಯ ಮರು ಸೃಷ್ಠಿ ಪ್ರಯತ್ನ ಯಶಸ್ವೀಯಾಗಲಿ ಎಂದರು. ಜಿಲ್ಲೆಯಲ್ಲಿ ಶೇ.33 ರಷ್ಟು ಅರಣ್ಯ ಆಗಬೇಕು. ಆ ದಿಸೆಯಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಲಿ. ಇದು ಪಂಚವಾರ್ಷಿಕ ಯೋಜನೆ ಆಗದೇ ಶೀಘ್ರವಾಗಿ ಪೂರ್ಣಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಪ್ರವಾಸಿ ಮಿತ್ರರು ನಮ್ಮ ದೇಶದ ಇತಿಹಾಸ, ಮಹತ್ವ ಸಾರುವವರಾಗಿದ್ದಾರೆ. ಅವರು ವಿದೇಶಿಗಳಿಗೆ ನಮ್ಮ ಆಚಾರ ವಿಚಾರ,ಇತಿಹಾಸ ಸಂಸ್ಕೃತಿಗಳ ಪ್ರಚಾರಕರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಪ್ರವಾಸಿ ಮಿತ್ರರಿಗೆ ಸಮವಸ್ತ್ರ ಇತರಿಸುವ ಬಗ್ಗೆ ಹಾಗೂ ಪ್ರವಾಸಿ ಮಿತ್ರರಿಗೆ ಗುರುತಿನ ಚೀಟಿ ನವೀಕರಣ ಜಿಲ್ಲಾಧಿಕಾರಿಗಳ ಹಂತದಲ್ಲಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವ ಬರವಸೆ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್ ಮೀನಾ ಮಾತನಾಡಿದರು.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿ ಪೆÇ್ರೀ. ಸುರೇಶ ನಾಡಗೌಡರ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ, ದೇಶದಲ್ಲಿ ಯಾವುದೇ ಕಾನೂನುಗಳನ್ನು ರಚಿಸಿದರು ಅದು ಸಂವಿಧಾನದ ಆಶಯವಾಗಿ ಇರಬೇಕು. ಸಂವಿಧಾನ ನಮ್ಮೆಲ್ಲರಿಗು ಸಮಾನತೆ, ಮಾತನಾಡುವ ಸ್ವಾತಂತ್ರ್ಯ ನೀಡಿದೆ ಎಂದರು.
ಕಾನೂನು ಸಚಿವರಾದ ಎಚ್. ಕೆ. ಪಾಟೀಲ ಅವರು ಗ್ರಾಮ ನ್ಯಾಯಾಲಯ ಪರಿಕಲ್ಪನೆಯನ್ನು ಸಂಪುಟ ಸಭೆಯಲ್ಲಿ ಅನುಮೋದನೆ ಮಾಡಿಸಿದ್ದಾರೆ. ಮುಂದಿನ ದಿನಮಾನಗಳಲ್ಲಿ ಎಲ್ಲರಿಗೂ ಸಮಾನತೆ ಸಾಮಾಜಿಕ ನ್ಯಾಯ ದೊರೆಯಲಿದೆ ಎಂದು ಹೇಳಿದರು.
ಜಾನಪದ ವಿವಿ ಕುಲಪತಿ ಟಿ.ಎಂ.ಬಾಸ್ಕರ್ ಮಾತನಾಡಿದರು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಾನಪದ ವಿವಿ ಕುಲಸಚಿವ ಪೆÇ್ರೀ. ಸಿ ಟಿ ಗುರುಪ್ರಸಾದ್, ಪ್ರಶಾಂತ ಜೆ.ಸಿ, ಪ್ರವಾಸಿ ಮಿತ್ರರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪೆÇ್ರೀ. ಅಬ್ದುಲ್ ಅಜೀಜ್ ಮುಲ್ಲಾ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.