ಚರಂಡಿ ಅವ್ಯವಸ್ಥೆ: ದಸಂಸ ತಜಸೀಲ್ದಾರ್‌ಗೆ ಮನವಿ ಪತ್ರ
ಮಾಲೂರು.ಜು.೮- ಲಕ್ಕೂರಿನ ಆದಿದ್ರಾವಿಡ ಕಾಲೋನಿಯಲ್ಲಿನ ಚರಂಡಿ ಅವ್ಯವಸ್ಥೆಯಿಂದಾಗಿ ಕೊಳಚೆ ನೀರು ಹರಿದು ಹೋಗಲು ದಾರಿ ಇಲ್ಲದ ಕಾರಣ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ. ಸ್ವಚ್ಛತೆ ಇಲ್ಲದೆ ನಿಲ್ಲುತ್ತಿದ್ದು ಸೊಳ್ಳೆಗಳು ಹೆಚ್ಚಾಗಿದೆ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ವತಿಯಿಂದ ಜಿಲ್ಲಾ ಸಂಚಾಲಕ ಲಕ್ಕೂರು ವೆಂಕಟೇಶ್ ಅವರು ತಹಸಿಲ್ದಾರ್ ಕೆ. ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ನಮ್ಮ ಪೂರ್ವಿಕರಿಂದ ಹಿಡಿದು ಇಲ್ಲಿಯವರೆಗೆ ನೂರಾರು ವರ್ಷಗಳಿಂದ ಬದಕು ಕಟ್ಟಿಕೊಂಡಿರುತ್ತೇವೆ ಏಡಿ ಕಾಲೋನಿಯಲ್ಲಿ ಪಂಚಾಯಿತಿ ಸೀಮೆಂಟ್ ರಸ್ತೆ ಮತ್ತು ಚರಂಡಿಯನ್ನು ನಿರ್ಮಿಸಿದೆ.ಆ ಚರಂಡಿಯಲ್ಲಿ ಹರಿದು ಬರುವ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ಸರಿಯಾದ ಕಾಲುವೆ ಇಲ್ಲದೆ ತ್ಯಾಜ್ಯ ನೀರು ಒಂದೆ ಕಡೆ ನಿಂತಿರುವುದರಿಂದ ಸೊಳ್ಳೆಗಳು ಹೆಚ್ಚಾಗಿ ರೋಗರುಜೀನಗಳು ಕಾಲೋನಿಯ ಜನರನ್ನು ಕಾಡುತ್ತಿದೆ ಹಾಗೇಯೆನಿಂತಿರುವುದರಿಂದ ಸುತ್ತಮತ್ತಲಿನ ಮನೆಯವರಿಗೆ ಅನ್ಯವಾದ ವಾಸನೆಯಿಂದ ಜನರು ಬೆಸತ್ತು ಹೋಗಿದ್ದಾರೆ ಈ ಹಿಂದೆ ಆನೇಕ ಬಾರಿ ಅರ್ಜಿಯನ್ನು ಕೊಟ್ಟಿದ್ದು ಯಾವುದೆ ಸರಿಯಾದ ಅನುಕೂಲವಾಗಿರುವುದಿಲ್ಲ ಇದು ಹೀಗೆಯೆ ಮುಂದುವರೆದರೆ ಮುಂದಿನ ದಿನಗಳಲ್ಲಿ ದಂಡಾಧಿಕಾರಿಗಳ ಕಛೇರಿ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಈ ಕೂಡಲೆ ಪರಿಹರಿಸಬೇಕೆಂದು ಆದಿದ್ರಾವಿಡ ಕಾಲೋನಿಯ ಸಮಸ್ತ ನಾಗರೀಕರು ಹಾಗೂ ಕರ್ನಾಟಕ ದಲಿತ ಸಂಘ?ಸಮಿತಿ (ಅಂಬೇಡ್ಕರ್‌ವಾದ) ಸಂಘಟನೆಯೂ ಒತ್ತಾಯ ಮಾಡುತ್ತದೆ ಎಂದರು
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘ? ಸಮಿತಿ ಅಂಬೇಡ್ಕರ್‌ವಾದದ ಮಂಜುನಾಥ್ ನಾರಾಯಣಸ್ವಾಮಿ ರವಿ ಮನೋಜ್ ಮಧು ನಿತಿನ್ ಅಮರ್ನಾಥ್ ಚರಣ್ ಮಂಜುನಾಥ್ ಶಿವು ಇನ್ನಿತರರು ಹಾಜರಿದ್ದರು.