ಸೊಳ್ಳೆಗಳ ಹರಡುವಿಕೆ ತಡಗಟ್ಟಲು ಸಲಹೆ
ವಿಜಯಪುರ.ಜು.೮:ಸಾರ್ವಜನಿಕರು ಮನೆಯ ಸುತ್ತಮುತ್ತಲಿನಲ್ಲಿ ಕಾಲಕಾಲಕ್ಕೆ ನೀರು ನಿಲ್ಲುವ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಸೊಳ್ಳೆಗಳಿಂದ ಹರಡುವ ರೋಗಗಳು ಬಾರದಂತೆ ನೋಡಿಕೊಳ್ಳಬೇಕಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಸರಸಮ್ಮ ತಿಳಿಸಿದರು.
ಅವರು ಶನಿವಾರದಂದು ಪಟ್ಟಣದ ಪುರಸಭಾ ಆವರಣದಲ್ಲಿ ಪುರಸಭೆ, ಆರೋಗ್ಯ ಇಲಾಖೆ ಹಾಗೂ ಸರಕಾರಿ ಹೆಣ್ಣು ಮಕ್ಕಳ ಮಾದರಿ ಪಾಠ ಶಾಲಾ ಮಕ್ಕಳಿಂದ ಆಯೋಜಿಸಿದ್ದ ಡೆಂಗ್ಯೂ ಜ್ವರ ನಿಯಂತ್ರಣ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೊಳ್ಳೆ ಉತ್ಪಾದನೆಯಾಗುವುದನ್ನು ಮೂಲದಲ್ಲೇ ತಡೆಯಬೇಕು. ನೀರಿನ ಸಂಗ್ರಹ ಸ್ಥಳದಲ್ಲೇ ಈ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ನೀರಿನ ಮೂಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ನೀರಲ್ಲೇ ಸೊಳ್ಳೆಗಳು ಸಂತಾನೋತ್ಪತ್ತಿ ಆಗದಂತೆ ಎಚ್ಚರ ವಹಿಸಬೇಕು ಎಂದರು.
ಪುರಸಭಾ ಕಂದಾಯ ನಿರೀಕ್ಷಕ ತ್ಯಾಗರಾಜ್ ಮಾತನಾಡಿ, ಈಗಾಗಲೇ ಪಟ್ಟಣದ ಮನೆಯ ಸುತ್ತಮುತ್ತಲು ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಶಾಲಾ ಮಕ್ಕಳು ಆರೋಗ್ಯ ಇಲಾಖೆ ವತಿಯಿಂದ ಮನೆ ಮನೆಗೂ ತೆರಳಿ ಲಾರ್ವಾ ಸಮೀಕ್ಷೆ ನಡೆಸಿ ಜನರಲ್ಲಿ ಅರಿವು ಮೂಡಿಸುವ ಕೆಲಸಗಳನ್ನು ಮಾಡುತ್ತಿದೆ. ಸಾರ್ವಜನಿಕರು ಜ್ವರ ಕಾಣಿಸಿಕೊಂಡರೆ ಕೂಡಲೆ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಪುರಸಭಾ ಸದಸ್ಯರಾದ ಭೈರೇಗೌಡ, ಮುಖ್ಯಶಿಕ್ಷಕ ಮನೋಹರ್, ಪುರಸಭಾ ಮುಖ್ಯಾಧಿಕಾರಿ ಸಂತೋಷ್ ಕುಮಾರ್, ಆರೋಗ್ಯಧಿಕಾರಿ ಲಾವಣ್ಯ,ಕಂದಾಯ ಅಧಿಕಾರಿ ಚಂದ್ರು, ಪರಿಸರ ಅಭಿಯಂತರ ಶೇಖರ್, ಸಹನಾ,ಪುರಸಭೆ ಸಿಬ್ಬಂದಿಯಾದ ಅನಿಲ್.ಪವನ್ ಜೋಶಿ, ಜನಾರ್ಧನ, ಸುನೀಲ್,ಮಂಜುನಾಥ್, ಪೃಥ್ವಿ, ಶಿವ ನಾಗೇಗೌಡ ,ಮೂರ್ತಿ, ವಿನೋದ್,ರವಿ, ಗೋಪಿಕೃಷ್ಣ , ಹೇಮಾವತಿ,ಲಿಂಗಣ್ಣ, ಕುಮಾರ್,ಮಂಜುನಾಥ್, ಹೇಮಂತ್ ಕುಮಾರ್, ಜನಾರ್ಧನ್, ಪುರಸಭೆ ಪೌರಕಾರ್ಮಿಕರು ಸರ್ಕಾರಿ ಶಾಲೆಯ ಮಕ್ಕಳು ಹಾಗೂ ಉಪಾಧ್ಯಾಯರು ಇದ್ದರು.