ಕೆರೆಗೆ ಕಲುಷಿತ ನೀರು: ಪೈಪ್ ಲೈನ್ ಮುಚ್ಚಿ ಕ್ರಮ
ಆನೇಕಲ್.ಜು.೮- ಕೊಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳೂರು ಗ್ರಾಮದ ಕೆರೆಗೆ ಖಾಸಗಿ ಅಪಾಟ್ ಮೆಂಟ್ ಗಳು ಮತ್ತು ಪಿಜಿ ಗಳಿಂದ ಹೊರ ಬಿಡುತ್ತಿರುವ ಕಲುಷಿತ ನೀರು ಮುಳ್ಳೂರು ಗ್ರಾಮದ ಕೆರೆಗೆ ನೇರವಾಗಿ ಸೇರಿ ಕೆರೆಯು ಸಂಪೂರ್ಣ ಮಲಿನಗೊಂಡು ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಬೀತಿಯಲ್ಲಿದ್ದು ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಸಾರ್ವಜನಿಕರು ನೀಡಿದ ದೂರಿನ ಮೇಲೆ ಇಂದು ಕೊಡತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೃಷ್ಣವೇಣಿ ಮತ್ತು ಉಪಾಧ್ಯಕ್ಷರಾದ ಮಂಜುನಾಥ್ ಮತ್ತು ಪಂಚಾಯಿತಿ ಸದಸ್ಯರು ಕೆರೆಯನ್ನು ಪರಿಶೀಲನೆ ನಡೆಸಿದರು. ನಂತರ ಕೆರೆಗೆ ನೇರವಾಗಿ ಕಲುಷಿತ ನೀರನ್ನು ಬಿಟ್ಟ ಪಿಜಿಗಳ ಹಾಗೂ ಅಪಾಟ್ ಮೆಂಟ್ ಗಳ ಪೈಪ್ ಗಳನ್ನು ಜೆಸಿಬಿ ಮೂಲಕ ಮುಚ್ಚಲಾಯಿತು.
ಈ ವೇಳೆ ಕೊಡತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್ ಹಾಗೂ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ(ಬಾಬು) ರವರು ಮಾತನಾಡಿ ಮುಳ್ಳೂರು ಗ್ರಾಮದ ಕೆರೆಯನ್ನು ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ಅಭಿವೃದ್ದಿ ಪಡಿಸಲಾಗಿದೆ ಆದರೆ ಕೆರೆಯ ಸುತ್ತ ಮುತ್ತಲಿನಲ್ಲಿರುವ ಖಾಸಗಿ ಅಪಾಟ್ ಮೆಂಟ್ ಗಳು ಮತ್ತು ಪಿಜಿ ಗಳ ಮಾಲೀಕರು ಕಲುಷಿತ ನೀರನ್ನು ಶುದ್ದೀಕರಿಸದೆ ನೇರವಾಗಿ ಕೆರೆಗೆ ಬಿಡುತ್ತಿರುವುದರಿಂದ ಕೆರೆಯು ಸಂಪೂರ್ಣವಾಗಿ ಮಲಿನವಾಗಿದೆ ಹಾಗೂ ಕೆರೆಯ ಸುತ್ತಲೂ ಗಬ್ಬು ನಾರುತ್ತಿದ್ದು ಇದರಿಂದ ಕರೆಯ ಸುತ್ತಮುತ್ತಲಿನಲ್ಲಿ ವಾಸಿಸುತ್ತಿರುವ ಬಡಾವಣೆ ನಿವಾಸಿಗಳಿಗೆ ಮತ್ತು ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಬೀತಿಯಲ್ಲಿದ್ದು ಈ ವಿಚಾರವಾಗಿ ಖಾಸಗಿ ಅಪಾಟ್ ಮೆಂಟ್ ಗಳಿಗೆ ಮತ್ತು ಪಿಜಿ ಗಳ ಮಾಲೀಕರಿಗೆ ಪಂಚಾಯಿತಿ ವತಿಯಿಂದ ನೋಟಿಸ್ ಕೂಡ ಜಾರಿ ಮಾಡಲಾಗಿದೆ ಆದರೆ ನೋಟಿಸ್ ಗೆ ಕ್ಯಾರೆ ಎನ್ನುತ್ತಿಲ್ಲ ಈ ನಿಟ್ಟಿನಲ್ಲಿ ಇಂದು ಜೆಸಿಬಿಗಳ ಮೂಲಕ ಅಗೆದು ಪಿಜಿಗಳ ಹಾಗೂ ಅಪಾಟ್ ಮೆಂಟ್ ಗಳ ಪೈಪ್ ಗಳನ್ನು ಮುಚ್ಚಲಾಗುತ್ತಿದೆ ಎಂದು ಹೇಳಿದರು.
ಸ್ಥಳದಲ್ಲಿ ಕೊಡತಿ ಗ್ರಾಮ ಪಂಚಾಯಿತಿ ಸದಸ್ಯರಾದ ಆಶಾ ಚಿಟ್ಟಿಬಾಬು. ರಾಮಸ್ವಾಮಿ, ಸತೀಶ್, ಆಂಥೋನಿ ಮೇರಿ. ನಂಜುಂಡರೆಡ್ಡಿ, ಮಮತಾ, ರಾಧ ಕಾವೇರಪ್ಪ. ಅನಿತ ಲಷ್ಮಣರೆಡ್ಡಿ ಮಾಜಿ ಅಧ್ಯಕ್ಷರಾದ ರಮೇಶ್ ರೆಡ್ಡಿ ಮತ್ತು ಸ್ಥಳೀಯ ಮುಖಂಡರುಗಳು. ಪಂಚಾಯಿತಿ ಅದಿಕಾರಿಗಳು ಭಾಗವಹಿಸಿದ್ದರು.