ರಾಷ್ಟ್ರೀಯ ಸಮ್ಮೇಳನಕ್ಕೆ ಸ್ವಯಂಸೇವಕ ಮನೀಶ್ ಆಯ್ಕೆ
ವಿಜಯಪುರ.ಜು.೮-ಮಹಾರಾಷ್ಟ್ರ ರಾಜ್ಯದ ವರ್ದ ಜಿಲ್ಲೆಯ ಸೇವಾ ಗ್ರಾಮದಲ್ಲಿರುವ ಅಖಿಲ ಭಾರತ ಸರ್ವೋದಯ ಮಂಡಳಿಯ ರಾಷ್ಟ್ರೀಯ ಸರ್ವಸೇವಾ ಸಂಘದ ಕಾರ್ಯಕಾರಿ ಸಮಿತಿಯ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವು ಒರಿಸ್ಸಾ ರಾಜ್ಯದ ಅಂಗುಲ್ ಜಿಲ್ಲೆಯ ಬಾಜಿ ರೌಟ್ ಛತ್ರಬಸ್ ಅಂಗುಲ್ ನಗರದಲ್ಲಿ ಆಯೋಜಿಸಲಾಗಿದೆ.
ಈ ರಾಷ್ಟ್ರೀಯ ಸಮ್ಮೇಳನಕ್ಕೆ ಚಿಕ್ಕಮರಳಿ ಗ್ರಾಮದ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ಅಂತಿಮ ಪದವಿ ವಿದ್ಯಾರ್ಥಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಎನ್.ಎಸ್.ಎಸ್ ಸ್ವಯಂ ಸೇವಕ ಎಸ್.ಎಂ.ಮನೀಶ್ ಮೇಲ್ಕಂಡ ರಾಷ್ಟ್ರೀಯ ಸಭೆಗೆ ವಿಶೇಷ ಆಹ್ವಾನಿತ ಸ್ವಯಂ ಸೇವಕರಾಗಿ ಆಯ್ಕೆಯಾಗಿರುವ ಇವರು ಈ ಸಭೆಯಲ್ಲಿ ಗುಡಿ ಕೈಗಾರಿಕೆಗಳು, ಖಾದಿ ಗ್ರಾಮೋದ್ಯೋಗ, ರಾಷ್ಟ್ರೀಯ ಭಾವೈಕ್ಯತೆ, ಯುವ ಚಟುವಟಿಕೆ ಗಳು, ಗ್ರಾಮಮಟ್ಟಗಳ ಶ್ರಮದಾನ ಶಿಬಿರಗಳು ಮತ್ತು ಸರ್ವೋದಯ ಕಾರ್ಯದಲ್ಲಿ ಯುವಜನತೆಯ ಪಾತ್ರ ಮೊದಲಾದ ವಿಷಯಗಳ ಬಗ್ಗೆ ಚರ್ಚಾಗೋಷ್ಠಿ ಹಾಗೂ ಸಲಹೆ ಸೂಚನೆಗಳ ಕಾರ್ಯಗಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿಯ ಅಧ್ಯಕ್ಷ ಡಾ.ವಿ.ಪ್ರಶಾಂತ ತಿಳಿಸಿದರು.
ಆಯ್ಕೆಗೊಂಡ ಸ್ವಯಂ ಸೇವಕನಿಗೆ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀ ನ ಆಡಳಿತ ಮಂಡಳಿಯ ಪರವಾಗಿ ಪ್ರಾಂಶುಪಾಲೆ ಡಾ.ಎನ್. ಆನಂದಮ್ಮ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ವಿ.ವಿಶ್ವಾಸ್, ಕರ್ನಾಟಕ ರಾಜ್ಯ ಸರ್ವೋದಯ ಮಂಡಳಿಯ ಅಧ್ಯಕ್ಷ ಡಾ.ಎಚ್.ಎಸ್. ಸುರೇಶ್, ಕಾರ್ಯದರ್ಶಿ ಡಾ.ಯಾ.ಚಿ. ದೊಡ್ಡಯ್ಯ ಮೊದಲಾದವರು ಅಭಿನಂದಿಸಿದರು.