ಅಧರ್ಂಬರ್ಧ ಸ್ವಚ್ಛತೆ ನಿವಾಸಿಗಳ ಬೇಸರ
ಸೇಡಂ, ಜು,08: ಇಲ್ಲಿನ ಪುರಸಭೆ ಸ್ವಚ್ಛತಾ ಸಿಬ್ಬಂದಿಯವರು ಬೇರೆ ಕಡೆಯಿಂದ ತಂದು ಕಸವನ್ನು ವಿದ್ಯಾನಗರ ರಸ್ತೆಯ ಪಕ್ಕದಲ್ಲಿ ಹಾಕಿರುವುದನ್ನು ತೆಗೆದುಹಾಕಲು ಪುರಸಭೆಗೆ ವಿನಂತಿ ಕೋರಲಾಗಿತ್ತು. ಸಿಬ್ಬಂದಿಯವರು ಇಂದು ಸ್ವಲ್ಪ ಕಸದ ಚೀಲ ತೆಗೆದುಕೊಂಡು ಹೋಗಿದ್ದಾರೆ, ಆದರೆ ಇನ್ನೂ ಸಾಕಷ್ಟು ಚೀಲ ಹಾಗೆಯೇ ಇವೆ, ಕಂಟಿ ಇರುವ ಸಂಬಂಧ ಅವನ್ನು ಹಾಗೆಯೇ ಬಿಟ್ಟಿದ್ದಾರೆ, ಎಂದು ವಿದ್ಯಾನಗರ ನಿವಾಸಿ ಡಾ.ಬಿ.ಆರ್ ಅಣ್ಣಾ ಸಾಗರ್ ಬೇಸರ ವ್ಯಕ್ತಪಡಿಸಿದ್ದು ಪುರಸಭೆಯ ಅಧಿಕಾರಗಳು ಇತ್ತ ಗಮನಹರಿಸಿ ಸಂಪೂರ್ಣ ಸ್ವಚ್ಛತೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.