ಸರ್ವಜ್ಞ ವಿದ್ಯಾಪೀಠ ಶಿಕ್ಷಣ ಸಂಸ್ಥೆಯ ಶಾಲಾ ಸಂಸತ್ತು ರಚನೆ
ತಾಳಿಕೋಟೆ:ಜು.8: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳಲ್ಲಿ ಮತದಾನ ಜಾಗೃತಿಯನ್ನು ಮುಡಿಸುವ ಕುರಿತು ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆಯನ್ನು ರಚಿಸಲಾಯಿತು.
ಚುನಾವಣಾ ಅಧಿಕಾರಿಗಳಾಗಿ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ವಹಿಸಿಕೊಂಡಿದ್ದರು. ಮತಗಟ್ಟಿ ಅಧಿಕಾರಿಗಳಾಗಿ ಮುಖ್ಯಗುರುಗಳಾದ ಸಂತೋಷ ಪವಾರ ರವರು ವಹಿಸಿಕೊಂಡಿದ್ದರು. ವಿದ್ಯಾರ್ಥಿಗಳಿಂದ ನಾಮಪತ್ರ ಸಲ್ಲಿಕೆ, ನಾಮ ಪತ್ರಪರಿಶೀಲನೆ ಮಾಡಲಾಯಿತು. ಇಬ್ಬರು, ಮೂವರು ವಿದ್ಯಾರ್ಥಿಗಳು ನಾಮ ಪತ್ರಗಳನ್ನು ಹಿಮ್ಮಪಡೆದುಕೊಂಡರು. ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಪ್ರಚಾರವನ್ನು ಮಾಡಲು ಸಮಯವನ್ನು ಕೊಡಲಾಯಿತು. ತದನಂತರ ಮಕ್ಕಳಿಂದ ಇ ವಿ ಎಮ್ ಮಶೀನ ಎಂಬ ಮೋಬೈಲ್ ಆಪ ಮೂಲಕ ಮತದಾನವನ್ನು ಚಲಾಯಿಸಲು ಅನುವುಮಾಡಿಕೊಡಲಾಯಿತು. ಖಣಕ್ಕೆ ಇಳಿದ ಕನ್ನಡ ಮಾಧ್ಯಮದ ಒಟ್ಟು ಅಭ್ಯರ್ಥಿಗಳು 23, ಮತ್ತು ಆಂಗ್ಲ ಮಾಧ್ಯಮದಿಂದ ಒಟ್ಟು ಅಭ್ಯರ್ಥಿಗಳು 24 ಅಭ್ಯರ್ಥಿಗಳು ಇದ್ದರು. ಮತ ಚಲಾಯಿಸಲು ಬಂದ ವಿದ್ಯಾರ್ಥಿಗಳು ತಮ್ಮ ಆಧಾರಕಾರ್ಡ, ಐಡಿ ಕಾರ್ಡಗಳನ್ನು ಗುರುತಿನ ಚೀಟಿಯನ್ನು ತಗೆದುಕೊಂಡು ಬಂದಿದ್ದರು. ಬೂತ್ ನಂಬರ – 1 ರಲ್ಲಿ ಪಿಆರ್‍ಓ ಆಗಿ-ಶಿವಲೀಲಾ ಚುಂಚುರ, ರೂಪಾ ಪಾಟೀಲ, ಅನೀತಾ ಚೌದ್ರಿ, ಎಪಿಆರ್‍ಓ ಆಗಿ ಬಸವರಾಜ ಚಳ್ಳಗಿ, ಪರಿಶೀಲನಾಧಿಕಾರಿಗಳಾಗಿ ರಾಜು ಜವಳಗೇರಿ, ರಮೇಶ ಪಾಸೋಡಿ, ತಾಂತ್ರಿಕ ಸಲಹೆಗಾರರಾಗಿ ಸಂಜೀವಕುಮಾರ ಭಜಂತ್ರಿ, ರಸೂಲಸಾ ತುರಕಣಗೇರಿ ಇದ್ದರು.
ಬೂತ್ ನಂಬರ -2ರಲ್ಲಿ ಪಿಆರ್‍ಓ ಆಗಿ-ಪಲ್ಲವಿ ಕಸ್ತುರಿ, ರಾಜಬಿ ಬೀದರಿ, ಎಪಿಆರ್‍ಓ ಆಗಿ ಶಾಂತಗೌಡ ಬಿರಾದಾರ, ಪರಿಶೀಲನಾಧಿಕಾರಿಗಳಾಗಿ ಭೀಮನಗೌಡ ಸಾಸನೂರ ,ವಿಜಯಕುಮಾರ ಹಳಿಯಾಳ, ಎಂ ಬಿ ಹಿರೇಗೌಡ್ರ ತಾಂತ್ರಿಕ ಸಲಹೆಗಾರರಾಗಿ ರಾಣಿ ಮೇಡಂ, ಬಸವರಾಜ ತಳವಾರ ಮತ್ತು ಪೋಲಿಂಗ ಎಜಂಟರಾಗಿ ವಿದ್ಯಾರ್ಥಿಗಳು ಇದ್ದರು. ಅಂತಿಮವಾಗಿ ಮತ ಏಣಿಕೆ ಕಾರ್ಯ ಪೂರ್ಣಗೊಂಡ ನಂತರ ಅತೀ ಹೆಚ್ಚು ಮತ ಪಡೆದು ಆಯ್ಕೆಯಾದ ಅಭ್ಯರ್ಥಿಗಳಾದ ರಾಹುಲ ಹೊಸಳ್ಳಿ, ಪ್ರೀಯಂಕಾ ಸರೂರ, ಯೋಗಶ್ರೀ ಸರೋದೆ, ಶಿವಶರಣರೆಡ್ಡಿ ಭೂಸಾ, ದಾನೇಶ್ವರಿ ಕಲ್ಯಾಣಶೆಟ್ಟಿ, ಮಹೇಶ ತಳವಾರ, ಕೌಶಿಕಕುಮಾರÀ ಅಸ್ಕಿ, ಹಣಮಂತ್ರಾಯಗೌಡ ಬಿರಾದಾರ, ಸಾಂದ್ಯಾ ಆಲ್ಯಾಳ, ಮಡಿಸಿದ್ದ ಜನ್ನಪ್ಪಗೋಳ, ಸಚೀನ ಜಂಬಗಿ, ಈ ಅಭ್ಯರ್ಥಿಗಳು ಶಾಲಾ ಸಂಸತ್ತು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಪ್ರಮಾಣ ವಚನವನ್ನು ಭೋದಿಸಿ ಖಾತೆಗಳನ್ನು ಹಂಚಿಕೆ ಮಾಡಲಾಯಿತು. ಒಟ್ಟರೆಯಾಗಿ ಶಾಲಾ ಸಂಸತ್ತು ಕಾರ್ಯಕ್ರವನ್ನು ಅಚ್ಚುಕಟ್ಟಾಗಿ ನೆರವೆರಿಸಲಾಯಿತು.