ಅಧಿಕಾರ ಇಲ್ಲದ ಸಮಯದಲ್ಲಿ ನಮ್ಮ ಸರ್ಕಾರದಿಂದ ಸಮುದಾಯಗಳಿಗೆ ಅನುದಾನ: ಡಿ.ರವಿಶಂಕರ್
ಸಂಜೆವಾಣಿ ವಾರ್ತೆ
ಕೆ.ಆರ್.ನಗರ ಜು,08:- ದೇಶದ ಅಭಿವೃದ್ಧಿ ಮತ್ತು ಮಹನೀಯರು ನೀಡಿದ ಕೊಡುಗೆಗಳನ್ನು ಸಮುದಾಯದಿಂದ ಅಳೆಯಲಾಗುವುದಿಲ್ಲಾ ಅವರು ಮಾಡಿದ ಅಭಿವೃದ್ಧಿ ಮತ್ತು ನೀಡಿದ ಕೊಡುಗೆಗಳಿಂದ ಮಾತ್ರ ಸಾದ್ಯ ಇದರಲ್ಲಿ ಡಾ.ಬಾಬು ಜಗಜೀವನ ರಾಂ ಅವರು ಕೂಡ ಅಗ್ರ ಗಣ್ಯರು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಡಾ.ಬಾಬು ಜಗಜೀವನರಾಮ್ ಪುತ್ಥಳಿ ಬಳಿ ಗುರುವಾರ ತಾಲೂಕು ಆಡಳಿತದ ವತಿಯಿಂದ ಶನಿವಾರ ಆಯೋಜಿಸಿದ್ದ ಹಸಿರುಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ರವರ 38ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹುಟ್ಟಿನಿಂದ ಹಾಗೂ ಜಾತಿ, ಧರ್ಮದಿಂದ ಯಾರನ್ನು ಗುರುತಿಸ ಬೇಕಿಲ್ಲಾ ಅವರು ಮಾಡಿದ ಸಾಧನೆಗಳಿಂದ ಮಾತ್ರ ನಮಗೆ ಮಾದರಿ ಎಂದರು.
ದಲಿತ ಸಮುದಾಯದ ಸ್ವಾತಂತ್ರ ಸೇನಾನಿಗಳಲ್ಲಿ ಪ್ರಥಮ ಸ್ಥಾನ ಹೊಂದಿದ್ದು ಬಾಬುಜೀ ಅವರು ತಮ್ಮ ಹೋರಾಟ, ಆಡಳಿತ ಅನುಭವ ಇಂದಿನ ನಮ್ಮಂತಹ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ, ದೇಶ ಬರಗಾಲದಿಂದ ತತ್ತರಿಸಿ ಆಹಾರದ ಕೊರತೆ ಹೆದರಿಸುತಿದ್ದ ಸಂದರ್ಭದಲ್ಲಿ ಕೃಷಿ ಮಂತ್ರಿಯಾಗಿದ್ದ ಬಾಬೂಜೀ ಅವರು ದಕ್ಷತೆಯಿಂದ ಕೆಲಸ ಮಾಡಿ ಕೃಷಿಗೆ ಅಗತ್ಯವಾದ ಯೋಜನೆಗಳನ್ನು ರೂಪಿಸಿ ರೈತರಿಗೆ ಕೊಡುವ ಮೂಲಕ ದೇಶದಲ್ಲೇ ಹಸಿರು ಕ್ರಾಂತಿ ಮಾಡಿ ನಮ್ಮ ಭಾರತ ಆಹಾರ ಉತ್ಪಾದನೆಯಲ್ಲಿ ಇಂದಿಗು ಕೂಡ ಸ್ವಾವಲಂಬನೆ ಸಾಧಿಸುವಂತೆ ಮಾಡಿದ ಮಹಾನ್ ನಾಯಕರಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.
ಅಂದಿನ ಸರ್ಕಾರಗಳಲ್ಲಿ ಸಂಪುಟದಲ್ಲಿ ವಿವಿಧ ಖಾತೆಗಳ ಮಂತ್ರಿಗಳಾಗಿ ಕೆಲಸ ನಿರ್ವಹಿಸಿ ನಿರಂತರವಾಗಿ ಅಧಿಕಾರದಲ್ಲಿದ್ದು ತಮಗೆ ನೀಡಿದ ಎಲ್ಲಾ ಖಾತೆಗಳಿಗೂ ನ್ಯಾಯ ಒದಗಿಸಿ ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಶೋಷಿತರ ಪರವಾಗಿ ಅನೇಕ ಜನಪ್ರಿಯ ಯೋಜನೆಗಳನ್ನು ತರುವ ಮೂಲಕ ತಮ್ಮ ಸಾಮಾಜಿಕ ಕಾಳಜಿ ಮೆರೆದಿದ್ದರು ಎಂದು ಹೇಳಿದರು.
ಕಾರ್ಮಿಕರ ಕೆಲಸದ ಅವಧಿಯನ್ನು ಸೀಮಿತಗೊಳಿಸಿ ದುಡಿಯುವ ಸ್ಥಳದಲ್ಲಿ ಅವರಿಗೆ ಮೂಲಭೂತ ಸೌಕರ್ಯಗಳು ಸೇರಿದಂತೆ ಅವರ ರಕ್ಷಣೆ ಸೇರಿದಂತೆ ಇಂದಿನ ಕಾರ್ಮಿಕರಿಗೂ ಅಂದು ಅವರು ತಂದ ಕಾನೂನುಗಳೇ ಪೂರಕವಾಗಿದ್ದು ಇಂತಹ ಮಹಾತ್ಮರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಸಮಾಜದ ಎಲ್ಲರು ಅವರನ್ನು ಗೌರವಿಸಬೇಕಾಗಿದೆ. ಬಾಬೂಜೀಯವರ ದೂರದೃಷ್ಠಿತ್ವ, ನಾಯಕತ್ವ, ಹೋರಾಟದ ಗುಣಗಳು ಇಂದಿನ ಎಲ್ಲರಿಗೂ ಆದರ್ಶವಾಗಿದ್ದು ನಾವೆಲ್ಲರು ನಮ್ಮಗಳ ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದು ಮನವಿ ಮಾಡಿದರು.
ಪಟ್ಟಣದಲ್ಲಿ ಕಳೆದ ಹಲವು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಬಾಬು ಜಗಜೀವನ ರಾಂ ಸುಮುದಾಯ ಭವನವನಕ್ಕೆ ಕಳೆದ ಅವಧಿಯಲ್ಲಿ ನಮ್ಮ ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಅವಧಿಯಲ್ಲಿ 90 ಲಕ್ಷ ಅನುಧಾನ ಕೊಡಿಸಿದ್ದೇನೆ ಅಲ್ಲದೇ ತಾಲೂಕಿಗೆ 13 ಜಗ ಜೀವನ ರಾಂ ಭವನಗಳು, ಸೇರಿದಂತೆ ಡಾ.ಬಿ.ಆರ್.ಅಂಬೇಡ್ಕರ್ ಅಭವನಗಳಿಗೆ ಅನುಧಾನ, ಎಲ್ಲಾ ಹಿಂದುಳಿದ ಸಮುಧಾಯಗಳ ಭವನಕ್ಕೆ ಅನುಧಾನ ಅಂದೇ ಕೊಡಿಸಿದ್ದೇವೆ. ಇಂದು ಅವುಗಳನ್ನು ಪೂರ್ಣಗೊಳಿಸಿ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿ ನಿಮ್ಮ ಋಣ ತೀರಿಸತ್ತೇನೆ ಎಂದು ಭರವಸೆ ನೀಡಿದರು.
ಯಾವುದೇ ಸಮುದಾಯಗಳು ಕೇವಲ ಮನವಿ ನೀಡುವ ಮೂಲಕ ಬೇಡಿಕೆಗಳನ್ನು ಹೀಡೇರಿಸಿಕೊಳ್ಳಲು ಸಾಧ್ಯವಿಲ್ಲಾ ಮೊದಲು ವಿದ್ಯಾವಂತರಾಗಿ ಸಮಾಜದಲ್ಲಿ ಮುನ್ನೆಲೆಗೆ ಬಂದರೇ ಅವರೇ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಇದು ಅಂಬೇಡ್ಕರ್ ಮತ್ತು ಬಾಬೂಜಿಯವರ ಆಶಯವಾಗಿದ್ದು ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡಿ ಆಗ ಸಮಾಜದ ಜತೆಗೆ ದೇಶವು ಅಭಿವೃದ್ಧಿಯಾಗಲಿದೆ ಎಂದು ತಿಳುವಳಿಕೆ ನೀಡಿದರು.
ಸಮುಧಾಯದ ಬೇಡಿಕೆಯಂತೆ ಪಟ್ಟಣದಲ್ಲಿರುವ ಈಗಿನ ಬಾಬೂಜಿ ಯವರ ಪ್ರತಿಮೆಯನ್ನು ಕಂಚಿನ ಪ್ರತಿಮೆ ಮಾಡಿಸಿ ಕೊಡುತ್ತೇನೆ ಜತೆಗೆ ಸಮಾಜದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿ ಎಂದು ಶಪಥ ಮಾಡಿದರು.
ಕಾರ್ಯಕ್ರಮವನ್ನು ಕುರಿತು ತಾಲೂಕು ಆದಿಜಾಂಭವ ಸಂಘದ ಅಧ್ಯಕ್ಷ ಲೊಕೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತಹÀಸಿಲ್ಧಾರ್ ಸಿ.ಎಸ್.ಪೂರ್ಣಿಮಾ. ತಾಪಂ ಇಓ ಜಿ.ಕೆ.ಹರೀಶ್, ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ, ಟಿಎಸ್‍ಡಬ್ಲೂಯ ಎಸ್.ಎಂ.ಅಶೋಕ್‍ಕುಮಾರ್, ಪುರಸಭಾ ಸದಸ್ಯರಾದ ಸರೋಜಮಹದೇವ್, ಪ್ರಕಾಶ್, ನಟರಾಜ್, ಮಿಕ್ಸರ್‍ಶಂಕರ್, ಶಂಕರ್‍ಸ್ವಾಮಿ, ಮಾಜಿ ಅಧ್ಯಕ್ಷ ಡಿ.ಕಾಂತರಾಜ್, ತಾಪಂ ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ತಾಲೂಕು ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಮಧುವನಹಳ್ಳಿ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಹೆಚ್.ಕುಮಾರ್, ಕಾರ್ಯದರ್ಶಿ ಕಂಚುಗಾರಕೊಪ್ಪಲು ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ಮುಖಂಡರಾದ ರವಿಪೂಜಾರಿ, ಎಂ.ಎ.ನಾಗೇಂದ್ರ, ಕಾಳಯ್ಯ ಇನ್ನಿತರರು ಇದ್ದರು.