ವ್ಯಾಜ್ಯ ಮುಕ್ತ ಗ್ರಾಮ ಕಾನೂನು ವ್ಯವಸ್ಥೆ ರೂಢಿಯಲ್ಲಿ ಬಂದರೆ ರಾಜ್ಯದ ಅಭಿವೃದ್ಧಿಗೆ ಪೂರಕ : ಕಾನೂನು ಸಚಿವ ಎಚ್ ಕೆ ಪಾಟೀಲ.
ಅಥಣಿ :ಜು.8: ನ್ಯಾಯದಾನ ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ಗೌರವ ಕಡಿಮೆ ಇದೆ.
ನ್ಯಾಯಾಲಯದಲ್ಲಿ ಸಾಕ್ಷಿದಾರನ್ನ ಮತ್ತು ಆರೋಪಿಯನ್ನ ನಡೆಸಿಕೊಳ್ಳುವ ಅಥವಾ ಎಕವಚನದಲ್ಲಿ ಕರೆಯುವ ರೀತಿ ಬದಲಾಗಬೇಕು ಮತ್ತು ಅವರಿಗೆ ಗೌರವ ಕೊಡುವ ಪದ್ಧತಿ ನ್ಯಾಯಾಲಯಗಳಲ್ಲಿ ತರಬೇಕಿದ್ದು, ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ ಮನವಿ ಮಾಡಿದರು.
ಅವರು ಅಥಣಿಯಲ್ಲಿ 11 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು 40 ಕ್ಕೂ ಹೆಚ್ಚು ವರ್ಷಗಳಿಂದ ಇತ್ಯರ್ಥವಾಗದ ಅನೇಕ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದುಕೊಂಡಿವೆ ಹೀಗಾಗಿಯೇ ನ್ಯಾಯ ಅರಸಿ ಬಂದವರಿಗೆ ನ್ಯಾಯದಾನ ವಿಳಂಬದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಬಡವರ ಪ್ರಕರಣಗಳನ್ನು ಕೇವಲ 6 ತಿಂಗಳ ಒಳಗಾಗಿಯೇ ಇತ್ಯರ್ಥ ಪಡಿಸಬೇಕು ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾನೂನು ರೂಪಿಸಲು ತಯಾರಿ ನಡೆಸಿದೆ ಎಂದರು ಅನ್ಯಾಯ ಆಗಿರುವಂತಹ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡಲು ರಾಜ್ಯ ಸರಕಾರ ವಿಕ್ಟಿಮ್ ಓಂಬಡ್ಸಮನ್ ಸ್ಥಾಪನೆಗೆ ಮುಂದಾಗಿದೆ ಎಂದರು.
ಸರ್ಕಾರ ಜಿಲ್ಲಾ ಮಟ್ಟದಲ್ಲಿ ಅಡ್ವೋಕೇಟ್ ಚೇಂಬರ್ ಇರುವಂತೆ ತಾಲೂಕಾ ಮಟ್ಟದಲ್ಲಿಯೂ ಕೂಡಾ ಅಡ್ವೋಕೇಟ್ ಚೇಂಬರ್ ಗಳನ್ನ ನಿರ್ಮಾಣ. ಯುವ ನ್ಯಾಯವಾದಿಗಳಿಗೆ ತರಬೇತಿಯ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ಅಡ್ವೋಕೇಟ್ ಟ್ರೇನಿಂಗ್ ಅಕಾಡೆಮಿ ಪ್ರಾರಂಭಿಸಲಾಗುವುದು.
ಅಥಣಿ ಪವಿತ್ರವಾದ ನೆಲ ಶಿವಯೋಗಿಗಳ ತಪೆÇೀಭೂಮಿ. ಕರ್ಮಭೂಮಿ ಅವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ಈ ಪುಣ್ಯ ಕ್ಷೇತ್ರವಾಗಿದ್ದು ಇಲ್ಲಿ ನೂತನ ಜಿಲ್ಲಾ ನ್ಯಾಯಾಲಯಕ್ಕೆ ವರ್ಗವಾಗಿ ಬಂದಿರುವ ಪ್ರಕರಣಗಳನ್ನು 6 ತಿಂಗಳೊಳಗಾಗಿ ಇತ್ಯರ್ಥವಾದರೆ ಇಲ್ಲಿ ನ್ಯಾಯಾಲಯ ಸ್ಥಾಪನೆ ಮಾಡಿದಕ್ಕೆ ಸಾರ್ಥಕವಾಗುತ್ತದೆ ಎಂದರು.
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ನೀಡಿರುವ ಎಲ್ಲ ಸಲಹೆಗಳನ್ನು ಮುಕ್ತವಾಗಿ ಪರಿಗಣಿಸಲು ಸರಕಾರ ಸಿದ್ಧವಿದೆ ಆದರೆ ಸಾಮಾನ್ಯ ಜನರಿಗೆ ನಿಗದಿತ ಸಮಯದಲ್ಲಿಯೇ ನ್ಯಾಯದಾನ ಸಿಗಬೇಕು ಇಲ್ಲದೇ ಹೋದಲ್ಲಿ ಜನ ಸಾಮಾನ್ಯರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ವಿಶ್ವಾಸ ಕಡಿಮೆಯಾಗುತ್ತದೆ. ವ್ಯಾಜ್ಯ ಮುಕ್ತ ಗ್ರಾಮ ಕಾನೂನು ವ್ಯವಸ್ಥೆ ರೂಢಿಯಲ್ಲಿ ಬಂದರೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ.ಈ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಲು ವಕೀಲರಿಂದ ಸಹಕಾರ ಬೇಕು ಹಾಗೂ ಬೆಂಬಲ ಬೇಕು ಎಂದರು
ನ್ಯಾಯ ನಿರ್ಣಯವಾಗಿದ್ದರೂ ಕೂಡ ಕಂದಾಯ ಇಲಾಖೆಯಿಂದ ಅನುಷ್ಠಾನವಾಗದೆ ಇರುವ ವರದಿಗಳ ಬಗ್ಗೆ ಕೂಡಲೇ ಗಮನ ಹರಿಸಲಾಗುವುದು
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎ ಎಸ್ ಹುಚ್ಚಗೌಡರ. ಕೆ ಎ ವನಜೋಳ. ಮಿತೇಶ ಪಟ್ಟಣ. ಬಿ ಬಿ ಬಿಸಲಾಪೂರ. ಸುನೀಲ ಸಂಕ. ಎಮ್ ಸಿ ದುಂಡಿ. ಸುಶೀಲಕುಮಾರ ಪತ್ತಾರ. ನಿಂಗಪ್ಪ ಖೋಖಲೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
