ಪರಿಸರ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ : ಟಿ.ವಸಂತ್
ಸಂಜೆವಾಣಿ ವಾರ್ತೆ
ದಾವಣಗೆರೆ, ಜು. 7; ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ಮಾತೆಗೊಂದು ಮರ ಕಾರ್ಯಕ್ರಮದಡಿ ಪರಿಸರ ಸಂರಕ್ಷಣೆಗಾಗಿ ವಿವಿಧ ಬಗೆಯ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಲಾಗುತ್ತಿದೆ ಎಂದು ಪರಿಸರ ಪ್ರೇಮಿ, ಔಷಧ ವ್ಯಾಪಾರಿ ಟಿ.ವಸಂತ್ ಹೇಳಿದರು. ನಗರದ ಎಸ್.ಎಸ್.ಬಡಾವಣೆಯಲ್ಲಿ  ಪರಿವರ್ತನಾ ವೇದಿಕೆ, ಕರುಣಾ ಜೀವ ಟ್ರಸ್ಟ್, ಎಸ್.ಎಸ್.ಬಡಾವಣೆ ನಾಗರಿಕರ ಸಹಯೋಗದಲ್ಲಿ ಮಾತೆಗೊಂದು ಮರ ಕಾರ್ಯಕ್ರಮದಡಿ ನಡೆದ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಭಾಗದಲ್ಲಿ ಒಂದೊAದು ಕುಟುಂಬಕ್ಕೆ ಒಂದೊAದು ಗಿಡ ನೆಡುವ ಮೂಲಕ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬರೀ ಗಿಡಗಳನ್ನು ನೆಟ್ಟರೆ ಸಾಲದು, ಅವುಗಳನ್ನು ಬೆಳೆಸಿ ಪೋಷಿಸಬೇಕು. ಪರಿಸರ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಈಗಾಗಲೇ ನಮ್ಮ ವೇದಿಕೆಯಿಂದ ರಸ್ತೆಗಳ ಅಕ್ಕಪಕ್ಕ, ಶಾಲಾ ಕಾಲೇಜು ಆವರಣ, ಪಾರ್ಕ್, ಮನೆಗಳ ಮುಂಬಾಗ ಸೇರಿದಂತೆ ವಿವಿಧೆಡೆ ಬನ್ನಿ, ಬೇಲ, ಆಲ, ಅರಳಿ, ದೋರಹುಣಸೆ, ಮಹಾಗನಿ, ಹೊಂಗೆ, ಸಂಪಿಗೆ, ಬಸರಿ, ಬಿಲ್ವ, ಹತ್ತಿ, ಬೆಟ್ಟದ ನಲ್ಲಿ ಸೇರಿದಂತೆ ಸುಮಾರು ಇಲ್ಲಿವರೆಗೆ 37 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದೇವೆ. ಉತ್ತಮವಾಗಿ ಗಿಡಮರಗಳು ಬೆಳೆದರೆ ಮನುಷ್ಯನಿಗೆ ಉಚಿತವಾಗಿ ಆಮ್ಲಜನಕ ಸಿಗುತ್ತದೆ. ಇದರಿಂದ ಯಾವುದೇ ರೋಗ ರುಜಿನೆಗಳು ಬರುವುದಿಲ್ಲ. ವಾತಾವರಣ ಕೂಡಾ ತಂಪಾಗಿರುತ್ತದೆ. ಅಲ್ಲದೇ ಕಾಶಿ, ಉಡುಪಿ, ಅಯೋಧ್ಯೆಯಲ್ಲಿಯೂ ಸಹಾ ಇಲ್ಲಿಂದ ಗಿಡಗಳನ್ನು ತೆಗೆದುಕೊಂಡು ಹೋಗಿ ನೆಟ್ಟಿದ್ದೇವೆ. ಈ ಭಾಗದ ಜನತೆ ನಮ್ಮ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕರುಣಾ ಟ್ರಸ್ಟö್ನ ಶಿವನಕೆರೆ ಬಸವಲಿಂಗಪ್ಪ, ಎ.ಎಂ.ಕೊಟ್ರೇಶ್ವರ, ಡಾ.ಶಾಂತಾಭಟ್, ಡಾ.ಶ್ರೀಪಾದಭಟ್, ಎಸ್.ಓಂಕಾರಪ್ಪ, ಡಾ.ಶಿಶುಪಾಲ, ಗೀತಾ ಬದರಿನಾಥ, ಜಯಂತಿಮಾಲ, ವಾಣಿ ವಸಂತ, ಲಕ್ಷಿö್ಮ, ಮಮತಾ, ಅರ್ಚನಾ ಸಾಯಿಪ್ರಸಾದ, ಸ್ವಾತಿ, ಸಾಹಿತ್ಯ, ರಾಧಿಕಾ, ಸೌಮ್ಯ ಸತೀಶ, ಶ್ರೀದೇವಿ, ಸುಷ್ಮಾ ರವಿಶಂಕರ, ಪೂರ್ಣೀಮ, ಗೌರಮ್ಮ, ಡಾ.ರಾಮಪ್ಪ, ಡಾ.ನಿರಂಜನ್ ಸೇರಿದಂತೆ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.
…..