ನಮ್ಮ ನೆಲದ ಅಸ್ಮಿತೆ ಅರಿತು ನಡೆಯಬೇಕು; ಕೆಂಗಾಪುರ ಶ್ರೀ
ಸಂಜೆವಾಣಿ ವಾರ್ತೆ
ಚನ್ನಗಿರಿ.ಜು.೮; ನಮ್ಮ ಸಾಂಪ್ರಾದಾಯಿಕ ಸಂಸ್ಕೃತಿಯನ್ನು ತಿಳಿಯಬೇಕಾದರೆ ನಮ್ಮ ಈ ನೆಲದ ಅಸ್ಮೀತೆಯನ್ನು ಅರಿತು ನಡೆಯಬೇಕು ಎಂದು ಹರನಹಳ್ಳಿ ಕೆಂಗಾಪುರದ ಶ್ರೀ ರಾಮಲಿಂಗೇಶ್ವರ ಸ್ವಾಮೀಜಿ ಹೇಳಿದರು.ಚನ್ನಗಿರಿ ತಾಲ್ಲೂಕಿನ ಹರನಹಳ್ಳಿ ಕೆಂಗಾಪುರದ ಶ್ರೀ ರಾಮಲಿಂಗೇಶ್ವರಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಥಮ ಪಿ,ಯು,ಸಿ ವಿಧ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ವಿಧ್ಯಾರ್ಥಿಗಳ ಹಾಗೂ ಉಪನ್ಯಾಸಕರ ಸಂಘದ ಉದ್ಘಾಟನೆ ಹಾಗೂ ಯತ್ನಿಕ್ ಡೇ 2024 ರ ಸಮನ್ವಯ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಗ್ರಾಮೀಣ ಸಂಸ್ಕೃತಿ ಹಾಗೂ ಸಾಂಪ್ರಾದಾಯವನ್ನು ಮತ್ತು ಬಹುತ್ವದ ವೈವಿಧ್ಯತೆಯನ್ನು ಕಾಪಾಡಲು ಇಂತಹ ಸಾಂಪ್ರಾದಾಯಿಕ ಹಬ್ಬಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸಿದಾಗ ಮಾತ್ರ ಸಾಧ್ಯ ವಿಧ್ಯಾರ್ಥಿ ಯುವ ಜನರಲ್ಲಿ ಗ್ರಾಮೀಣ ಸೊಗಡಿನ ಬಗ್ಗ ಜಾಗೃತಿ ಮೂಡಿಸುವಂತಹ ಕೆಲಸಗಳು ಈ ಕಾಲೇಜಿನಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದರು.ಕಾಲೇಜು ಪ್ರಾಂಶುಪಾಲರಾದ ದಾದಾಪೀರ ಮಾತನಾಡಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣದ ಜೊತೆಗೆ ವಿಧ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಬಗ್ಗೆ ಪರಿಚಯ ಮಾಡಿಸಬೇಕಿದೆ ಜೊತೆಗೆ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಕಲಿಸಬೇಕು ಜೊತೆಗೆ ಮನೆಯಲ್ಲಿ ಪೋಷಕರು ಮಕ್ಕಳ ವಿಷಯದ ಬಗ್ಗೆ ಗಮನಹರಿಸಬೇಕಾಗಿದೆ, ಕಾಲೀಜಿಗೆ ಪೋಷಕರು ಬಂದು ವಿಧ್ಯಾರ್ಥಿಗಳ ಅಭ್ಯಾಸದ ಬಗ್ಗೆ ಪ್ರಾಂಶುಪಾಲರ ಬಳಿ ಮಾಹಿತಿ ಪಡೆಯಬೇಕು ಇಂದಿನ ಯುವ ಸಮೂಹ ಯಾವುದೇ ದುಷ್ಚಟಗಳಿಗೆ ಬಲಿಯಾಗದೆ ಶಿಕ್ಷಣದ ಬಗ್ಗೆ ಒತ್ತು ನೀಡಿ ಭವಿಷ್ಯವನ್ನ ಉಜ್ವಲಗೊಳಿಸುವತ್ತಾ ಗುರಿ ಇರಬೇಕೆಂದರು.ಈ ವೇಳೆ ಆಡಳಿತ ಮಂಡಳಿಯ ಹೆಚ್,ಆರ್ ಅಶೋಕ್, ಉಪನ್ಯಾಸಕರಾದ ಹೆಚ್,ಆರ್ ಶ್ರೀನಿವಾಸ್, ಮೆಹಬೂಬ್‌ಅಲಿ, ಮಹೇಂದ್ರ, ಅಣ್ಣಪ್ಪನಾಯ್ಕ್, ಡಿ,ಲಾವಣ್ಯ, ವಿಧ್ಯಾ, ಸೇರಿಂತೆ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ವಿಧ್ಯಾರ್ಥಿಗಳು ಹಾಜರಿದ್ದರು.