ವಿಭಾಗ ಮಟ್ಟದ ದಾಸ ಸಾಹಿತ್ಯ ಸಮ್ಮೇಳನದಲ್ಲಿ ವೈದ್ಯ ಶ್ರೀ ಪುರಸ್ಕೃತ ಡಾ. ಶರಣಬಸಪ್ಪ ಕ್ಯಾತನಾಳ
ಕಲಬುರಗಿ: ಜು.7:ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಲಯದ ವಿಭಾಗ ಮಟ್ಟದ 2ನೇ ದಾಸ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಶ್ರೇಷ್ಠ ವೈದ್ಯ ಶ್ರೀ ಪುರಸ್ಕೃತ ಪ್ರಶಸ್ತಿ ಪಡೆದ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರ್ ಸಿ ಹೆಚ್ ಅಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ ಅವರಿಗೆ ದಕ್ಷಿಣ ವಲಯ ಕಸಾಪ. ವತಿಯಿಂದ ಸಮ್ಮೇಳನ ಸರ್ವಾಧ್ಯಕ್ಷರು ಡಾ. ವಾಸುದೇವ ಅಗ್ನಿಹೋತ್ರಿ. ಮತ್ತು ಹಿರಿಯ ಸಾಹಿತಿಗಳು ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾದ ಡಾ.ಸ್ವಾಮಿರಾವ ಕುಲಕರ್ಣಿ ಅವರು ಸನ್ಮಾನಿಸಿ ಗೌರವಿಸಿದರು.
ಪ್ರಮುಖರಾದ ದಕ್ಷಿಣ ವಲಯದ ಕಸಾಪ ಅಧ್ಯಕ್ಷರು ಶಾಮಸುಂದರ ಕುಲಕರ್ಣಿ . ಹಿರಿಯ ಸಾಹಿತಿಗಳಾದ ಡಾ. ಶೈಲಜಾ ಕೊಪ್ಪರ. ಕಾವ್ಯಶ್ರೀ ಮಹಗಾಂವಕರ. ಅ ಕು ಕ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರು ಡಾ. ರವಿಕಾಂತಿ ಎಸ್ ಕ್ಯಾತನಾಳ. ದಕ್ಷಿಣ ವಲಯದ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಂಬಾಳಿಮಠ, ಆರೋಗ್ಯ ಇಲಾಖೆ ಸಿಬ್ಬಂದಿ ಸಂತೋಷ ಮುಳಜೆ ಪ್ರಭಾರಿ ಆರೋಗ್ಯ ಮೇಲ್ವಿಚಾರಣಾಧಿಕಾರಿಗಳು ಕಲಬುರಗಿ ಆರೋಗ್ಯ ನೀರಿಕ್ಷಿಣಾಧಿಕಾರಿಗಳು ಮಣ್ಣೂರು ವಿಠ್ಠಲ ಬಡಿಗೇರ , ಜ್ಯೋತಿ ಕೊಟನೂರ.ಅವರು ಭಾಗವಹಿಸಿದರು.