ಧ.ರಾ.ಮ. ವಿಜ್ಞಾನ ಕಾಲೇಜಿನ ಅಂತಿಮ ಬಿಎಸ್ಸಿ‌ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೭: ನಗರದ ಧ.ರಾ.ಮ.ವಿಜ್ಞಾನ  ಕಾಲೇಜಿನ ಅಂತಿಮ ಬಿ.ಎಸ್ಸಿ., ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್‌ ಡಾ.ಯು.ಎಸ್.ಮಹಾಬಲೇಶ್ವರ  ಆಗಮಿಸಿದ್ದರು.ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಏನಾದರೂ ಒಂದು ಸಾಧನೆಯನ್ನು ಮಾಡಬೇಕಾದರೆ, ಶ್ರಮ ಅತ್ಯವಶ್ಯಕ ಎಂದು ವಿವಿಧ ವಿಜ್ಞಾನಿಗಳು ಸಂಶೋಧನೆಯನ್ನು ಕೈಗೊಂಡುಸಾಧನೆಯನ್ನು ಮಾಡಿದ, ವಿಜ್ಞಾನಿ ಸಾಧಕರನ್ನು ಕುರಿತು, ಅರ್ಥ ಪೂರ್ಣವಾಗಿ ಬಣ್ಣಿಸಿದರು. ತಾವುಗಳು ಸಹ ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯೋನ್ಮುಖರಾಗಿ ಸಂಶೋಧನಾ ಪ್ರವೃತ್ತಿಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿ ಹೇಳುತ್ತಾ, ಜೀವನದಲ್ಲಿ ಯಾವಾಗಲೂ ಸಂತೋಷಮಯವಾಗಿ ಬದುಕಲು ಕಲಿಯಬೇಕು. ಸಾಮರಸ್ಯದ ಬದುಕು ಅತೀ ಮುಖ್ಯ ಎಂದು ತಿಳಿ ಹಾಸ್ಯದ ಮೂಲಕ ಕಿವಿ ಮಾತುಗಳನ್ನು ಹೇಳಿದರು. ಪಿಯು ಪ್ರಾಂಶುಪಾಲರಾದ .ಜೆ.ಶಿವಪ್ಪ ಮಾತನಾಡಿ ಮನಸ್ಸನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಕಾಲೇಜಿನ ಪ್ರಾಂಶುಪಾಲರಾದ, ಶ್ರೀಮತಿ.ಎಂ.ಪಿ.ರೂಪಶ್ರೀ ಅವರು ಬಾವಿ ಜೀವನದಲ್ಲಿ ಉನ್ನತವಾದ ಉದ್ದೇಶಗಳನ್ನು ಇಟ್ಟುಕೊಂಡು ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕೆಂದು ತಿಳಿಹೇಳಿದರು.ವಿವಿಧ ಸಮಿತಿಯ ಸಂಚಾಲಕರುಗಳಾದ, ಡಾ.ಚೇತನಾ.ಬಿ.ಸಿ. ಪ್ರತಿಭಾ ಪುರಸ್ಕಾರ, ಡಾ.ಗಿರಿಮಲ್ಲೇಶ್ವರ ಬಗರಿ ಕ್ರೀಡೆ, ಡಾ.ಮೊಹಮ್ಮದ್‌ ಇಮದಾದುಲ್ಲಾ, ಸಾಂಸ್ಖೃತಿಕ  ಚಟುವಟಿಕೆಗಳ ಪ್ರತಿಭಾವಂತರಿಗೆ ಬಹುಮಾನ ವಿತರಣೆ ನಡೆಸಿಕೊಟ್ಟರು. ಹಾಗೂ ಕನ್ನಡ ವಿಭಾಗ ಆಯೋಜಿಸಿದ್ದ, ತಿಂಗಳ ತಿರುಳು ಕಾರ್ಯಕ್ರಮದ ಬಹುಮಾನ ವಿತರಣೆ.ಶಿವಪ್ಪ ಮಳ್ಳೂರ, ರಸಾಯನಶಾಸ್ತ್ರ ವಿಭಾಗ ಆಯೋಜಿಸಿದ್ದ, ರಸಪ್ರಶ್ನೆ ಕಾರ್ಯಕ್ರಮದ ಬಹುಮಾನ ವಿತರಣೆ, ಡಾ.ವಸಂತಕುಮಾರ್‌,ಬಿ.ಸಿ. ನಡೆಸಿದರು. ಪ್ರಾರಂಭದಲ್ಲಿ ಕು.ಎಸ್.ಅರ್ಪಿತ ಪ್ರಾರ್ಥಿಸಿದರು. ಡಾ.ಮಂಜುರಾಜ್.ಟಿ.ಸ್ವಾಗತಿಸಿದರು. ಐ.ಕ್ಯು.ಎ.ಸಿ.ಸಂಯೋಜಕರಾದ ಡಾ.ರೋಹಿತ್.ಎಲ್.ಎಸ್.ವಂದಿಸಿದರು. ಹಾಗೂ ವೇದಿಕೆಯ ಮೇಲೆ ಸಾಂಸ್ಕೃತಿಕ ಚಟುವಟಿಕೆಯ ಸಂಚಾಲಕರಾದ ಡಾ.ಮೊಹಮ್ಮದ್‌ ಇಮಾದಾದುಲ್ಲಾ ಮತ್ತು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ, ಡಾ.ವಸಂತನಾಯ್ಕ್.ಟಿ ಉಪಸ್ಥಿತರಿದ್ದರು ಮತ್ತು ಕಾಲೇಜಿನ ಎಲ್ಲಾ ಬೋಧಕ / ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.