ಬಾಬು ಜಗಜೀವನ್ ರಾಂ ರವರ 38 ನೇ ಪುಣ್ಯಸ್ಮರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ ಜು.7: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೋಳ್ಳಲಾಗಿದ್ದ ಬಾಬು ಜಗಜೀವನ ರಾಂ ರವರ 38 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಪುಷ್ಪ ನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಯಾತ್ ಮುಖ್ಯಕಾರ್ಯನಿರ್ವಾಹಕ ಆಧಿಕಾರಿ ಸುರೇಶ್ ಬಿ.ಇಟ್ನಾಳ್, ಉಪವಿಭಾಗಧಿಕಾರಿ ದುರ್ಗಶ್ರೀ,  ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಕೆ. ನಾಗರಾಜ್,  ಹರಿಜನ ಯುವಕರ ಸಂಘದ ಕಾರ್ಯದರ್ಶಿ ಸೋಮ್ಲಾಪುರ ಹನುಮಂತಪ್ಪ, ಮಾಜಿ ಜಿಲ್ಲಾ ಪಂಚಾಯಾತ್ ಉಪಾಧ್ಯಕ್ಷ ಮತ್ತಿಹಳ್ಳಿ ಶಿವಣ್ಣ, ಆದಿ ಜಾಂಬವ ಸಂಘದ ಅಧ್ಯಕ್ಷರಾದ ಟಿ.ರಮೇಶ, ಮಾದಿಗ ದಂಡೋರ ಉಪಾಧ್ಯಕ್ಷ ಚಿದಾನಂದ, ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಎಚ್.ಸಿ ಮಲ್ಲಪ್ಪ, ದಲಿತ ಮುಖಂಡರಾದ ರವಿಕುಮಾರ್, ತಾಲೂಕು ಸಂಘಟನಾ ಸಂಚಾಲಕರು ನಾಗರಾಜ್ ಬಿ.ಚಿತ್ತನಹಳ್ಳಿ, ತಾಲೂಕು ಮಹಿಳಾ ಸಂಚಾಲಕಿ ಆರತಿ ಬಿ ಚಿತ್ರನಹಳ್ಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು