ಕಾನೂನು ಕಾಲೇಜು ಶುಲ್ಕ ಕಡಿತಕ್ಕೆ ಆಗ್ರಹ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಸೆ,27- ನಗರದ  ವುಂಕಿ ಸಣ್ಣ ರುದ್ರಪ್ಪ ಕಾನೂನು ಮಹಾವಿದ್ಯಾಲಯ ಪ್ರಸಕ್ತ ಸಾಲಿನಿಂದ ಶುಲ್ಕ ಹೆಚ್ಚಿಸಿರುವ  ಹಿಂದಕ್ಕೆ ಪಡೆಯಬೇಕು ಎಂದು ಅಂಬೇಡ್ಕರ್ ಸಂಘರ್ಷ ಸಮಿತಿ ಆಗ್ರಹಿಸಿದೆ.
ನಿನ್ನೆ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿ. ಕಳೆದ ಐದು ದಶಕಗಳಿಂದ ಎಲ್ಲಾ ವರ್ಗದ ಜನರಿಗೆ ಕಾನೂನು ಪದವಿಯನ್ನು ಕಡಿಮೆ ಶುಲ್ಕದಲ್ಲಿ ಒಡೆಯಲು  ಅವಕಾಶ ಮಾಡಿಕೊಡಲಾಗಿತ್ತು.
2021-22 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ಶುಲ್ಕ ರೂ. 17 ರಿಂದ 18 ಸಾವಿರ ದವರೆಗೆ,  2022-23 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ಶುಲ್ಕ ಸುಮಾರು ರೂ 21 ಸಾವಿರದ ವರೆಗೆ.  2023-24 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ಶುಲ್ಕ 24 ರಿಂದ 25 ಸಾವಿರದ ವರೆಗೆ ನಿಗದಿಪಡಿಸಲಾಗಿತ್ತು. ಆದರೆ ಪ್ರಸ್ತುತ 2024 25 ನೇ ಶೈಕ್ಷಣಿಕ ವರ್ಷದಲ್ಲಿ ದಿಢೀರನೆ ರೂ. 46,460 (ರೂ. 5000 ಗೋಲ್ಡನ್ ಜುಬ್ಲಿ ಪಂಡ ಸೇರಿ) ಶುಲ್ಕ ನಿಗಧಿಪಡಿಸಿದ್ದಾರೆ. ಮತ್ತು 50,000 ದಿಂದ 1,00,000 ದ ವರೆಗೆ ದೇಣಿಗೆಯನ್ನು ವಿದ್ಯಾರ್ಥಿಗಳಿಂದ ಪಡೆಯುತ್ತಿದ್ದಾರೆ.
ಇನ್ನು 5 ವರ್ಷದ ಎಲ್.ಎಲ್.ಬಿ. ಯೂ ಪ್ರಾರಂಭವಾಗಿದ್ದು ಇದರ ಪ್ರಥಮ ವರ್ಷದ ಶುಲ್ಕವು ರೂ. 49,060 (ರೂ. 5000 ಗೋಲ್ಡನ್ ಜುಬ್ಲಿ ಪಂಡ್ ಸೇರಿ) ನಿಗಪಡಿಸಲಾಗಿದ್ದು, ಈ ಎರಡನ್ನೂ ಪರಿಗಣಿಸಿದಾಗ ಈ ಕಾನೂನು ಮಹಾವಿದ್ಯಾಲಯವು ಶಿಕ್ಷಣವನ್ನು ಮಾರಾಟದ ವಸ್ತುವನ್ನಾಗಿ ಮಾರ್ಪಾಡು ಮಾಡಿದ್ದಾರೆಂದು ಸ್ಪಷ್ಟವಾಗಿ ಕಂಡುಬರುತ್ತದೆ.
ಕಾನೂನು ವಿಶ್ವ ವಿದ್ಯಾಲಯವು 2024-25 ನೇ ವರ್ಷದ ಆದೇಶದ ಪ್ರಕಾರ 3 ವರ್ಷದ ಎಲ್. ಎಲ್. ಬಿ ವಿದ್ಯಾರ್ಥಿಗಳಿಗೆ ರೂ. 7,150 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ರೂ. 5,150 ಚುಲ್ಕವನ್ನು ನಿಗದಿಪಡಿಸಲಾಗಿದೆ.  ವಿಶ್ವವಿದ್ಯಾಲಯದ ಶುಲ್ಕದ ಆದೇಶವನ್ನು ಪಾಲಿಸದೇ ದಿಢೀರನೆ ಶುಲ್ಕವನ್ನು  2 ಪಟ್ಟು ಹೆಚ್ಚಿಸಿರುವುದು ಖಂಡನೀಯ. ಶುಲ್ಕ ಹೆಚ್ಚಳದ ನಿರ್ಧಾರ ಕೈಬಿಡಲು ಆಗ್ರಹಿಸಲಾಯ್ತು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಮಹೇಶ್ ಕುರುವಳ್ಳಿ,   ಉಪಾಧ್ಯಕ್ಷ ಕೆ.ಎಂ. ಮಲ್ಲೇಶ್,  ಕಾರ್ಯಾಧ್ಯಕ್ಷ  ಮುಕ್ಕಣ್ಣ. ಪಂಪಣ್ಣ ಕಾರ್ಮಿಕ ಘಟಕದ ಅಧ್ಯಕ್ಷ ಪಿ. ಸಿದ್ದು ಹೆಗಡೆ, ಯುವ ಘಟಕ ಅಧ್ಯಕ್ಷ ಶಿವಕುಮಾರ್. ಜಿಲ್ಲಾ  ಉಪಾಧ್ಯಕ್ಷ ವೀರೇಶ,  ಖಜಾಂಚಿ ಪ್ರಶಾಂತ್,  ಕಾರ್ಯಧ್ಯಕ್ಷ ಹೇಮಂತ್ ರಾಜ್ ಮೊದಲಾದವರು ಇದ್ದರು.
One attachment • Scanned by Gmail