ಸುತ್ತಲಿನ ವಾತಾವರಣ ಸ್ವಚ್ಛತೆಯಿಂದಿರಬೇಕು
ಕಮಲನಗರ:ಸೆ.27:ತಾಲೂಕಿನ ಡೋಣಗಾಂವ (ಎಂ)ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಚಾಲನೆ ನೀಡಿ ಮನುಷ್ಯನ ಜೀವನ ಸುಂದರವಾಗಿರಬೇಕಾದರೆ ಸ್ವಚ್ಛತೆಯನ್ನು ನಮ್ಮ ಉಸಿರಾಗಬೇಕು ಸ್ವಚ್ಛತೆ ಇಲ್ಲದೆ ಬದುಕು ಹೀನವಾಗುತ್ತದೆ ಎಂದು ನುಡಿದರು.
ಅದಕ್ಕಾಗಿ ತಮ್ಮ ತಮ್ಮ ಸುತ್ತಲಿನ ವಾತಾವರಣವನ್ನು ರಾಮರಾಜ್ಯ ಮಾಡಲು ಸ್ವಚ್ಛತೆಯನ್ನು ಆರೋಗ್ಯವಾಗಿ ಕಾಪಾಡಲು ಸ್ವಚ್ಛತೆ ಬಗ್ಗೆ . ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತಾ ಅಭಿಯಾನದ ನಿಮಿತ್ತ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪಂಚಾತ್ ಅಧ್ಯಕ್ಷರಾದ ದೈವಶೀಲ ಉಪಾಧ್ಯಕ್ಷರಾದ ಶಾಂತಿ ಸಾಗರ್ ದೇಶಮುಖ್ ಪಿ ಡಿ ಓ ವಿಜಯಕುಮಾರ್ ಪಾಟೀಲ್ ಸೆಕ್ರೆಟರಿ ಆದಿತ್ಯ ಸರ್ ಅಂಗನವಾಡಿ ಕಾರ್ಯಕರ್ತರು ಆರೋಗ್ಯ ಸೇವಾ ಕಾರ್ಯಕರ್ತರು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಗಳಾಗಿದ್ದರು. ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಪಂಚಾಯತ್ ಪ್ರತಿದಿಧಿಗಳು ಗ್ರಾಮಸ್ಥರು ಉಪಸ್ಥಿತಿಯಲ್ಲಿದ್ದರು.