ಶಿಕ್ಷಕ ಹುದ್ದೆ ಅತ್ಯಂತ ಶ್ರೇಷ್ಠ ಹಾಗೂ ಗೌರವಯುತ ಹುದ್ದೆ : ಎಸ್ ಬಿ ಮುನ್ನೊಳ್ಳಿ
ಅಥಣಿ : ಸೆ.27:ಮಕ್ಕಳು ದೇವರ ಸಮಾನ, ಅವರಿಗೆ ಜ್ಞಾನವನ್ನು ದಾನ ಮಾಡುವ ಶಿಕ್ಷಕರು ಕೂಡಾ ದೇವರಿಗೆ ಸಮಾನ. ದೇಶದ ಅನೇಕ ಶ್ರೇಷ್ಠ ಹುದ್ದೆಗಳಲ್ಲಿ ಶಿಕ್ಷಕ ಹುದ್ದೆ ಅತ್ಯಂತ ಗೌರವಯುತವಾಗಿದ್ದು, ಆ ಗೌರವವನ್ನು ಕಾಪಾಡಿಕೊoಡು ಮಕ್ಕಳಿಗೆ ಸತ್ಯ ಮತ್ತು ಸಂಸ್ಕಾರವನ್ನ ಕಲಿಸಿಕೊಡಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕ ಎಸ್ ಬಿ ಮುನ್ನೊಳ್ಳಿ ಹೇಳಿದರು.
ಅವರು ಗುರುವಾರ ಪಟ್ಟಣದ ಕೆ. ಎ. ಲೋಕಾಪುರ ಮಹಾವಿದ್ಯಾಲಯದಲ್ಲಿ ಅಥಣಿ ರೋಟರಿ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ಅತ್ಯುತ್ತಮ ಶಿಕ್ಷಕರಿಗೆ 2024 – 25 ಸಾಲಿನ ನೇಷನ್ ಬಿಲ್ಡರ್ ಅವಾರ್ಡ್ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರತಿಯೊಬ್ಬರ ಜೀವನದಲ್ಲಿ ಜ್ಞಾನ ಅಮೂಲ್ಯವಾದ ಸಂಪತ್ತು. ಗಳಿಸಿದ ಹಣ, ಅಧಿಕಾರ ಕಳೆದುಕೊಳ್ಳಬಹುದು, ಆದರೆ ಜ್ಞಾನ ಸಂಪತ್ತನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ನಿಸ್ವಾರ್ಥ ಭಾವನೆಯಿಂದ ಮಕ್ಕಳಿಗೆ ಸನ್ಮಾರ್ಗ ತೋರಿಸುವವರು ಗುರುಗಳು. ಶಿಕ್ಷಕರು ಗುರುಗಳಲ್ಲ, ಸಂಬಳದ ಉಪಾಧ್ಯಾಯರು ಎಂಬುದನ್ನು ಪ್ರತಿಯೊಬ್ಬ ಶಿಕ್ಷಕರು ತಿಳಿದುಕೊಂಡಿರಬೇಕು.
ಶ್ರೇಷ್ಠ ಭಾರತವನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ತಾಯಿ ಒಂದು ಮಗುವಿಗೆ ಜನ್ಮ ನೀಡಿ ಸಮಾಜಕ್ಕೆ ಪರಿಚಯಿಸಿದರೆ, ಶಿಕ್ಷಕರು ಆ ಮಗುವಿಗೆ ಸೂಕ್ತ ಮಾರ್ಗದರ್ಶನ ಮತ್ತು ಜ್ಞಾನವನ್ನು ನೀಡಿ ಎತ್ತರಕ್ಕೆ ಬೆಳೆಸುತ್ತಾರೆ. ಆದ್ದರಿಂದ ಶಿಕ್ಷಕರ ಸೇವೆಯನ್ನು ಸ್ಮರಿಸಿ ಅನೇಕ ಸಂಘ ಸಂಸ್ಥೆಗಳು ಮತ್ತು ಸರ್ಕಾರ ಪ್ರಶಸ್ತಿ ನೀಡಿ ಗೌರವಿಸುತ್ತವೆ. ರೋಟರಿ ಸಂಸ್ಥೆಯವರು ಅತ್ಯುತ್ತಮ ಶಿಕ್ಷಕರನ್ನ ಗುರುತಿಸಿ ನೇಶನ್ ಬಿಲ್ಡರ್ ಅವಾರ್ಡ್ ನೀಡುತ್ತಿರುವುದು ಕಾರ್ಯ ಶ್ಲಾಘನೀಯ. ಪ್ರಶಸ್ತಿಗಳು ನಮ್ಮ ಗೌರವವನ್ನು ಹೆಚ್ಚಿಸುವುದರ ಜೊತೆಗೆ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಪ್ರಶಸ್ತಿ, ಗೌರವ ಮತ್ತು ಶ್ರೀಮಂತಿಕೆ ನಮ್ಮ ಹೃದಯದಲ್ಲಿರಬೇಕು. ಅವುಗಳನ್ನು ತಲೆಗೆ ಏರಿಸಿಕೊಂಡರೆ ಅಹಂ ಭಾವ ಬರುತ್ತದೆ ಎಂದರು.
ಅತಿಥಿಗಳಾಗಿ ಆರ್ ಎಸ್ ಎಸ್ ಮುಖಂಡ, ಸಂಸ್ಕೃತ ಚಿಂತಕ ಅರವಿಂದರಾವ ದೇಶಪಾಂಡೆ ಮಾತನಾಡಿ ಶಿಕ್ಷಕರು ಮನಸ್ಸು ಮಾಡಿದರೆ ವಿಶೇಷ ಕೊಡುಗೆಯನ್ನ ನೀಡುತ್ತಾರೆ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಡಾ.ಎ. ಪಿ. ಜೆ ಅಬ್ದುಲ್ ಕಲಾಂ, ಡಾ. ಬಿ ಆರ್ ಅಂಬೇಡ್ಕರ, ಸರ್ವಪಳ್ಳಿ ರಾಧಾಕೃಷ್ಣನ್, ಬಾಲಗಂಗಾಧರ ತಿಲಕರಂತಹ ಅನೇಕ ಮಹಾನ್ ವ್ಯಕ್ತಿಗಳು ರಾಷ್ಟ್ರ ನಿರ್ಮಾಣದಲ್ಲಿ ಮಾಡಿದ ವಿಶೇಷ ಕೊಡುಗೆಯನ್ನು ವಿವರಿಸಿದರು. ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಜೊತೆಗೆ ರಾಷ್ಟ್ರ ಪ್ರೇಮ ಕಲಿಸಬೇಕು. ಭಾರತ ವಿಶ್ವಗುರು ಸ್ಥಾನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ಗುರುವಿನ ಸ್ಥಾನದಲ್ಲಿರುವ ಶಿಕ್ಷಕರು ರಾಷ್ಟ್ರ ಕಟ್ಟುವ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಅರುಣ ಸೌದಾಗರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಥಣಿ ತಾಲೂಕಿನ ವಿವಿಧ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಕಾಲೇಜು ವಿಭಾಗದ ಪ್ರಾಚಾರ್ಯರಿಗೆ 2024 ನೇ ಸಾಲಿನ ರೋಟರಿ ನೇಶನ್ ಬಿಲ್ಡರ್ ಅವಾರ್ಡ್ ನೀಡಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಶಿಕ್ಷಕ ಎಸ್ ಎಂ ಜನಗೌಡ, ಪ್ರಾಚಾರ್ಯ ಡಾ. ಬಿ ಎಸ್ ಕಾಂಬಳೆ, ಆರ್ ಎಂ ದೇವರೆಡ್ಡಿ. ಮಾತನಾಡಿ ರೋಟರಿ ಸಂಸ್ಥೆಯ ಕಾರ್ಯವನ್ನು ಸ್ಮರಿಸಿ ಅತ್ಯುತ್ತಮ ಶಿಕ್ಷಕ ಸೇವೆಯನ್ನ ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರೋಟರಿ ಇನ್ನರವ್ಹಿಲ್ ಕ್ಲಬ್ ನ ಅಧ್ಯಕ್ಷೆ ತೃಪ್ತಿ ಕುಲಕರ್ಣಿ. ಕಾರ್ಯದರ್ಶಿ ಲಲಿತಾ ಮೇಕನಮರಡಿ, ಖಜಾoಚಿ ಸುನಿತಾ ದೇಸಾಯಿ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಸಚಿನ ದೇಸಾಯಿ, ಖಜಾoಚಿ ಶೇಖರ್ ಕೋಲಾರ. ಅನಿಲ ದೇಶಪಾಂಡೆ, ಅರುಣ ಯಲಗುದ್ರಿ. ಬಾಲಚಂದ್ರ ಬುಕಿಟಗಾರ, ಡಿ ಡಿ ಮೇಕನಮರಡಿ. ಸಂತೋಷ ಬೊಮ್ಮಣ್ಣವರ, ಸುರೇಶ್ ಬಳ್ಳೊಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅರುಣ ಸೌದಾಗರ ಸ್ವಾಗತಿಸಿದರು. ಶ್ರೀಕಾಂತ ಅಥಣಿ ನಿರೂಪಿಸಿದರು. ಮೇಘರಾಜ ಪಾರಮಾರ ವಂದಿಸಿದರು.
ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕ, ಕೃಷಿಕ ಮತ್ತು ಸೈನಿಕರ ಪಾತ್ರ ಬಹಳ ಮಹತ್ತರವಾಗಿದೆ. ರೋಟರಿ ಸಂಸ್ಥೆಯು ಕಳೆದ 26 ವರ್ಷಗಳಿಂದ ಅಥಣಿಯಲ್ಲಿ ಅನೇಕ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ವಿಶೇಷ ಕೊಡುಗೆ ನೀಡಿದ್ದೇವೆ. ಅದೇ ರೀತಿ ಇನ್ನರ್ ವಿಲ್ ಕ್ಲಬ್ ಕೂಡಾ ಅನೇಕ ಸಮಾಜಮುಖಿ ಸೇವೆಗಳನ್ನು ಸಲ್ಲಿಸುತ್ತಾ ರಜತ ಮಹೋತ್ಸವದ ಸಂಭ್ರಮದಲ್ಲಿದೆ.
ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ
13 ಜನ ಶಿಕ್ಷಕರಿಗೆ ನೇಷನ್ ಬಿಲ್ಡರ್ ಅವಾರ್ಡ್
ಪ್ರಾಥಮಿಕ ವಿಭಾಗದಲ್ಲಿ ಎಸ್ ಎಮ್ ಜನಗೌಡ. ಎಂ ಎಂ ಮಿರ್ಜಿ. ಎಸ್ ಜಿ ಯಳ್ಳೂರ. ಬಿ ಕೆ ನಾಗರೆಡ್ಡಿ. ಶೃತಿ ಜಿ. ಪ್ರೌಢಶಾಲಾ ವಿಭಾಗದಲ್ಲಿ ಪಿ ಡಿ ಮೀಸೆಣ್ಣವರ. ಕೆ ಬಿ ಗುಂತಾಜ. ಎ ಆರ್ ಕಾಂಬಳೆ. ಎಸ್ ಎನ್ ಕಾಂಬಳೆ.
ಕಾಲೇಜು ವಿಭಾಗದಲ್ಲಿ ಎಲ್ ಎನ್ ಬಣಜವಾಡ. ಆರ್ ಎಮ್ ದೇವರೆಡ್ಡಿ. ಬಿ ಎಸ್ ಕಾಂಬಳೆ. ಗಣೇಶ ಪವಾರ. ಪ್ರಶಸ್ತಿಗೆ ಭಾಜನರಾಗಿದ್ದಾರೆ