ಸಮ್ಮೇಳನದ ಪ್ರಚಾರ ರಥಕ್ಕೆ ಚಾಲನೆ
ತಾಳಿಕೋಟೆ:ಸೆ.27: ತಾಳಿಕೋಟೆ ತಾಲೂಕಾ ಕೇಂದ್ರವಾದ ಮೇಲೆ ಪಟ್ಟಣದಲ್ಲಿ ಅಕ್ಟೋಬರ್ 1 ರಂದು ನಡೆಯುತ್ತಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ರಥಕ್ಕೆ ಗುರುವಾರರಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರ ನೇತೃತ್ವದಲ್ಲಿ ಸಾಹಿತ್ಯ ಪರಿಷತ್ತಿನ ಸದಸ್ಯರು ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ ಆರ್.ಎಲ್.ಕೊಪ್ಪದ ಅವರು ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಜಾನಪದ ಸಾಹಿತ್ಯ ಬಹಳೇ ಮುಖ್ಯಪಾತ್ರ ವಹಿಸಿದ್ದಾಗಿದೆ ತಾಳಿಕೋಟೆ ಐತಿಹಾಸಿಕ ನಗರಿಯಲ್ಲಿ ತಾಲೂಕಾ ಕೇಂದ್ರವಾದ ಬಳಿಕ ಮೊದಲನೇಯ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಈ ಸಮ್ಮೇಳನದ ಸವಿಯನ್ನು ಎಲ್ಲರೂ ಭಾಗ ವಹಿಸಲು ರಥವನ್ನು ಸಿದ್ದಪಡಿಸಿ ಚಾಲನೆ ನೀಡಲಾಗಿದೆ ಕಾರಣ ಎಲ್ಲ ಕನ್ನಡಾಭಿಮಾನಿಗಳು ಅಕ್ಟೋಬರ್ 1 ರಂದು ನಡೆಯುವ ಐತಿಹಾಸಿಕ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಭುಗೌಡ ಮದರಕಲ್ಲ, ಮಾಸುಮಸಾಬ ಕೇಂಭಾವಿ, ಆರ್.ವ್ಹಿ.ಜಾಲವಾದಿ, ಜೈಭೀಮ ಮುತ್ತಗಿ, ಆನಂದ ಮದರಕಲ್ಲ, ಘನಶಾಮ ಚವ್ಹಾಣ, ಬಿ.ಆರ್.ಪೋಲೀಸ್‍ಪಾಟೀಲ, ವ್ಹಿ.ಬಿ.ಸಜ್ಜನ, ಡೋಣಿ, ಕಟ್ಟಿಮನಿ, ಮೊದಲಾದವರು ಉಪಸ್ಥಿತರಿದ್ದರು.