ಸಚಿವರೊಂದಿಗೆ ಮುಂಡ್ರಿಗಿ ಲೇಔಟ್  ಯೋಜನೆ ಬಗ್ಗೆ ಶಾಸಕರ ಚರ್ಚೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.27: ಮುಂದಿನ ತಿಂಗಳು ಅ.3 ರಂದು ವಸತಿ ಸಚಿವ ಜಮೀರ್ ಅಹ್ಮದ್ ಅವರ ನೇತೃತ್ವದಲ್ಲಿ ಬಳ್ಳಾರಿ ನಗರದ  ಮಹಾತ್ಮ ಗಾಂಧಿ ಟೌನ್’ಶಿಪ್ (ಮುಂಡ್ರಿಗಿ ಲೇಔಟ್)ಯೋಜನೆಯ ಅನುಷ್ಠಾನದ ಕುರಿತು ಸಭೆ ನಿಗದಿಯಾಗಿದೆಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಸಂಜೆ ಪತ್ರಿಕಾ ಹೇಳಿಕೆ ನೀಡಿ. ವಸತಿ ಇಲಾಖೆಯ ಅಡಿ ಬರುವ ಬೆಂಗಳೂರಿನ  ಕೊಳಚೆ ಅಭಿವೃದ್ಧಿ ಮಂಡಳಿಯ ಕಚೇರಿಯಲ್ಲಿ  ವಸತಿ ಸಚಿವರಿಂದ ನಿನ್ನೆ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ಸಂದರ್ಭ ಬಳ್ಳಾರಿ ನಗರದ ಮಹಾತ್ಮ ಗಾಂಧಿ ಟೌನ್’ಶಿಪ್ ಯೋಜನೆಯ ಅನುಷ್ಠಾನದ ಕುರಿತು ಚರ್ಚೆ ನಡೆಸಲು ಅ 3 ರಂದು ಸಭೆ ನಡೆಸುವುದಾಗಿ ಸಚಿವ ಜಮೀರ್ ಅಹ್ಮದ್ ಅವರು ತಿಳಿಸಿದ್ದಾರೆಂದಿದ್ದಾರೆ.