ಶಾಂತಿ ನೆಮ್ಮದಿಯ ಬದುಕಿಗೆ ಧರ್ಮಾಚರಣೆ ಬೇಕು : ರಂಭಾಪುರಿ ಶ್ರೀ
ಸಂಜೆವಾಣಿ ವಾರ್ತೆ
ಬೇಲೂರು.ಜು.೭; ಮಾನವ ಯಾವಾಗಲೂ ಸುಖಾಪೇಕ್ಷಿ. ಸಂತೃಪ್ತಿ ಸಮೃದ್ಧಿಗಾಗಿ ಜೀವನಮೌಲ್ಯಗಳನ್ನು ಪಾಲಿಸಬೇಕಾಗುತ್ತದೆ. ಜೀವನದ ಶ್ರೇಯಸ್ಸಿಗಾಗಿ ಧರ್ಮ ದಿಕ್ಸೂಚಿ. ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಧರ್ಮಾಚರಣೆಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ತಾಲೂಕಿನ ಬಿಕ್ಕೋಡು ಸಮೀಪದ ಮುಚ್ಚಿನಮನೆ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರಸ್ವಾಮಿ ದೇವಾಲಯದ ಪ್ರತಿಷ್ಠಾಪನಾ ಪ್ರಥಮ ಮಂಡಲೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಸಂಪತ್ತು ಹೆಚ್ಚಿದಂತೆಲ್ಲ ಮಾನವೀಯ ಸಂಬಂಧಗಳುಉಳಿಯುತ್ತಿಲ್ಲ. ಬೆಟ್ಟಕ್ಕೆ ಬೆಟ್ಟದ ಅವಶ್ಯಕತೆ ಇಲ್ಲದಿರಬಹುದು. ಆದರೆಮನುಷ್ಯನಿಗೆ ಮನುಷ್ಯನ ಅವಶ್ಯಕತೆ ಇದ್ದೇ ಇದೆ. ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಒಂದಿಷ್ಟಾದರೂಧರ್ಮಪ್ರಜ್ಞೆ ಮತ್ತು ರಾಷ್ಟ್ರಪ್ರಜ್ಞೆ ಇರಬೇಕಾಗುತ್ತದೆ. ದೇವರು ಧರ್ಮ ಮತ್ತು ಶ್ರೀ ಗುರುವಿನಲ್ಲಿ ಅಚಲ ನಿಷ್ಠೆ ಶ್ರದ್ಧೆಯಿರಲಿ.ಬೆಳೆಯುವ ಯುವ ಜನಾಂಗದಲ್ಲಿ ವೈಚಾರಿಕತೆಯಿರಲಿ. ಆದರೆ ನಾಸ್ತಿಕಮನೋಭಾವ ಬೆಳೆದುಕೊಂಡು ಬರಬಾರದು. ನಾಗರೀಕತೆಯ ಸಮಾಜದಲ್ಲಿ ಅನಾಗರೀಕ ವರ್ತನೆಗಳು ನಡೆಯುತ್ತಿರುವುದುಒಳ್ಳೆಯ ಲಕ್ಷಣವಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವಧರ್ಮ ಸಂಹಿತೆಯಲ್ಲಿ ಸಕಲ ಜನಾಂಗಕ್ಕೂ ಅವಶ್ಯಕವಾಗಿರುವ ದಶವಿಧಧರ್ಮ ಸೂತ್ರಗಳನ್ನು ಬೋಧಿಸಿದ್ದಾರೆ. ಹಣತೆ ತನಗಾಗಿ ಉರಿಯುವುದಿಲ್ಲ. ಜಗಕೆ ಬೆಳಕು ನೀಡಲು ತನ್ನನ್ನು ತಾನುಸುಟ್ಟುಕೊಳ್ಳುತ್ತದೆ. ಅದೇ ರೀತಿ ಶ್ರೀ ಗುರು ಭಕ್ತ ಸಂಕುಲದ ಉನ್ನತಿಮತ್ತು ಶ್ರೇಯಸ್ಸಿಗಾಗಿ ಸದಾ ಶ್ರಮಿಸುತ್ತಿರುವುದನ್ನು ಯಾರೂಮರೆಯಬಾರದೆಂದ ಜಗದ್ಗುರುಗಳು ಶ್ರೀ ಶಿವಲಿಂಗೇಶ್ವರ ದೇವಾಲಯಪ್ರತಿಷ್ಠಾಪನೆಯ ಮಂಡಲ ಪೂಜಾ ಸಂದರ್ಭದಲ್ಲಿಜಗದ್ಗುರುಗಳವರನ್ನು ಭವ್ಯ ಸ್ವಾಗತದೊಂದಿಗೆಬರಮಾಡಿಕೊಂಡಿರುವುದು ತಮಗೆ ಸಂತೋಷ ತಂದಿದೆ ಎಂದರು.