ಜಿಲ್ಲಾ ಆಸ್ಪತ್ರೆ ಎದುರಿನ ಪಾರ್ಕ್ ನಲ್ಲಿ ಕೊಚ್ಚೆ;  ಡೆಂಗ್ಯೂ ಹರಡಲು ಅನುಕೂಲ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೭: ಜಿಲ್ಲಾ ಆಸ್ಪತ್ರೆ ಎದುರು ಪಾರ್ಕ್ನಲ್ಲಿ ಕೊಚ್ಚೆ ತುಂಬಿದ್ದು, ಡೆಂಗು ಹರಡಲು ಅನುಕೂಲ ಮಾಡಿಕೊಟ್ಟಂತಾಗಿದೆ, ಅಲ್ಲಿರುವ ಅಂಗಡಿ ಮುಟ್ಟುಗಳು, ಹೋಟೆಲ್‌ಗಳು ಪಾತ್ರೆ ತೊಳೆದ ನೀರು, ಮಳೆ ನೀರು, ಕೊಚ್ಚೆ ನೀರು, ಎಲ್ಲವೂ ಸಹ ಪಾರ್ಕಿನಲ್ಲಿ ಶೇಖರಣೆಯಾಗಿ, ನಿಂತು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳಿಗೆ ವಾಸ ಸ್ಥಳವಾಗಿದೆ. ನಗರಸಭೆಯವರು ಮತ್ತು ಸಾರ್ವಜನಿಕರು ಇಬ್ಬರು ಸಹ ಇಲ್ಲಿಯ ಸ್ವಚ್ಛತೆ ಬಗ್ಗೆ ಗಮನ ಹರಿಸದಿರುವುದರಿಂದ, ಮುಂದೊAದು ದಿನ ಆಸ್ಪತ್ರೆಯ ಮುಂದೆ ರೋಗ ಹರಡುವ ಉಗಮಸ್ಥಾನವಾಗಲಿದೆೆ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್.ಸ್ವಾಮಿ  ಆರೋಪಿಸಿದ್ದಾರೆ.ಎಲ್ಲಾ ಕಡೆ ಡೆಂಗು ಹರಡುತ್ತಿದೆ ಎಂದು ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಕೊಡುತ್ತಿರುವ ನಗರಸಭೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಈ ಪಾರ್ಕಿನ ಸುತ್ತ ಒಮ್ಮೆ ಕಣ್ಣಾಡಿಸಿದರೆ, ಎಷ್ಟೊಂದು ಗಲೀಜು ತುಂಬಿಕೊAಡಿದೆ, ದುರ್ವಾಸನೆ ತುಂಬಿಕೊAಡಿದೆ, ಜನರಿಗೂ ಪ್ರಾಣಿಗಳಿಗೂ ವ್ಯತ್ಯಾಸವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಹೆಜ್ಜೆ ಇಟ್ಟು ಪಾರ್ಕಿನೊಳಗೆ ಹೋಗಿ ಕುಳಿತುಕೊಳ್ಳೋಣ ಎಂದು ಯಾರಾದರೂ ಹೊರಗಿನವರು ಬಂದರೆ, ಅªರು ಗಾಬರಿಯಾಗುವುದಂತೂ ನಿಶ್ಚಿತ. ಪಾರ್ಕಿನ ಒಳಗಡೆ ಹೆಜ್ಜೆ ಇಡಲಾರದಷ್ಟು ಗಲೀಜು ನೀರು ತುಂಬಿಕೊAಡಿದೆ, ಕೊಳಚೆ ಪ್ರದೇಶವಾಗಿದೆ, ಕೊಳಚೆ ತುಂಬಿಕೊAಡಿರುವ ನೀರಿನ ಸುತ್ತಮುತ್ತ ಹೋಟೆಲ್‌ಗಳು, ಅಂಗಡಿಗಳು ತಲೆ ಎತ್ತಿವೆ. ಅಂಗಡಿ ಮಾಲೀಕರಿಗೆ ಚಳಿ ಜ್ವರ, ರೋಗಗಳು ಅಂಟಿಕೊAಡು ಬಳಲುತ್ತಿದ್ದಾರೆ. ಅವರು ಸಹ ನಗರಸಭೆಗೆ ಹೆದರಿ, ಎಲ್ಲಾದರೂ ಇದರ ಬಗ್ಗೆ ದೂರು ನೀಡಿದರೆ, ನಮ್ಮ ಅಂಗಡಿಗಳನ್ನು ಎತ್ತಂಗಡಿ ಮಾಡುತ್ತಾರೆ ಎಂದು ಈ ಕಷ್ಟವನ್ನ ಸಹಿಸಿಕೊಂಡೇ ಬದುಕುತ್ತಿದ್ದಾರೆ. ಕೆಲವರು ಸ್ವಲ್ಪ ಧೈರ್ಯ ಮಾಡಿ, ನಗರಸಭೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ, ಇಲ್ಲಿ ಕೊಳಚೆ ನಿರ್ಮಾಣವಾಗಿದೆ, ದಯವಿಟ್ಟು ಸ್ವಚ್ಛಗೊಳಿಸಿ ಎಂದು ವಿನಂತಿಸಿಕೊAಡು, ಅವರಿಂದ ಯಾವುದೇ ಪ್ರತಿಕ್ರಿಯೆ ಬರದೆ ಇದ್ದಾಗ ನೊಂದು, ಪತ್ರಿಕಾ ಪ್ರಕಟಣೆಗೆ ವಿನಂತಿಸಿಕೊAಡಿದ್ದಾರೆ.
ನೀವಾದರೂ ಸ್ವಲ್ಪ ಅಧಿಕಾರಿಗಳ ಗಮನಕ್ಕೆ ತಂದು, ಇಲ್ಲಿ ಸ್ವಚ್ಛತೆಯ ಬಗ್ಗೆ ಏರ್ಪಾಡು ಮಾಡಿ, ಒಂದು ಸುಂದರವಾದ ಪಾರ್ಕ್ ನಿರ್ಮಾಣ ಮಾಡುವಂತ ಯೋಜನೆಗಳನ್ನ ಹಾಕಿಕೊಳ್ಳಿ ಎಂದು ವಿನಂತಿಸಿಕೊAಡಿದ್ದಾರೆ. ಪಾರ್ಕಿನ ಸುತ್ತಮುತ್ತ ಇರುವ ಅಂಗಡಿಯವರು ಸಹ ಇಲ್ಲಿಯ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿಲ್ಲ, ಎಲ್ಲೆಂದರಲ್ಲಿ ಕಸ ಎಸೆಯುವುದು, ಮೂತ್ರಾಲಯ ಮತ್ತು ಶೌಚಾಲಯದಂತೆ ಪಾರ್ಕನ್ನ ಬಳಕೆ ಮಾಡಿದ್ದಾರೆ. ಬಂದ ಗಿರಾಕಿಗಳು ಸಹ ಅಲ್ಲಿಯ ಸ್ವಚ್ಛತೆ ಬಗ್ಗೆ ಗಮನ ಹರಿಸಿಲ್ಲ, ಕುಳಿತುಕೊಳ್ಳುವ ಒಂದೆರಡು ಬೆಂಚ್ ಗಳ ಮುಂದೆ ವಾಸನೆಯುಕ್ತವಾದಂತ ಪರಿಸರದಲ್ಲಿ, ಜನ ಕುಳಿತುಕೊಂಡಿರುತ್ತಾರೆ. ಅದು ಹೇಗೆ ಅಂತ ಪರಿಸ್ಥಿತಿಯಲ್ಲಿ ಪಕ್ಕದ ಹೋಟೆಲ್ಗಳಲ್ಲಿ ಊಟ ತಿಂಡಿ ಮಾಡುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತದೆ ಎಂದರು.