ಕಾನೂನು ವಿದ್ಯಾರ್ಥಿಗಳಿಗೆ ಉಪನ್ಯಾಸ
ಸಂಜೆವಾಣಿ ವಾರ್ತೆ
ಚಿತ್ರದುರ್ಗ. ಜು.೭: ನಗರದ ಎಸ್‌ ಜೆ ಎಂ ಕಾನೂನು ಕಾಲೇಜಿನಲ್ಲಿ ಬದಲಾದಂತಹ ಅಪರಾಧಿಕ ಕಾನೂನುಗಳಲ್ಲಿ ಒಂದಾದಂತ  ಭಾರತೀಯ ನ್ಯಾಯಸಂಹಿತೆ 2023 ರ ವಿಷಯವಾಗಿ ಗೌ.ನ್ಯಾಯಾಧೀಶರು ಹಾಗೂ 2ನೇ ಹೆಚ್ಛುವರಿ ಹಿರಿಯ ವಿಭಾಗ ಹಾಗೂ ಜೆ ಎಂ ಎಫ್‌ ಸಿ ಚಿತ್ರದುರ್ಗ, ಶ್ರೀಮತಿ ಉಜ್ವಲ ವೀರಣ್ಣ ಸಿದ್ದಣ್ಣವರ್‌ ಪುನಶ್ಚೇತನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಮುದಾಯದ ಸೇವೆ, ಆರ್ಗನೈಜಡ್‌ ಕ್ರೈಮ್‌, ಇ ಅಫೆನ್ಸ್‌ ಮುಂತಾದ ವಿಷಯಗಳ ಬಗ್ಗೆ  ಉದಾಹರಣೆಯೊಂದಿಗೆ ಕಾನೂನು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಕಾಲೇಜಿನ ಪ್ರಾಚಾರ್ಯರಾದ ಡಾ.ದಿನೇಶ್‌ ಎಸ್‌ ಹಾಗೂ ಶ್ರೀಮತಿ ಸುಮನ ಎಸ್‌ ಅಂಗಡಿ, ಸಹ ಪ್ರಾಧ್ಯಾಪಕರು ಹಾಗೂ ಬೋಧಕ, ಬೋಧಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.   ಈ ಕಾರ್ಯಕ್ರಮದಲ್ಲಿ ಮುನ್ನಿ ನಾಯಕ್ ಪ್ರಾರ್ಥಿನೆ ಮಾಡಿ, ಸ್ವಾಗತವನ್ನು ವಿಶ್ವಪ್ರಭು ದೇವರು, ವಂದನಾರ್ಪಣೆಯನ್ನು ಅಂಜಿನಮೂರ್ತಿ, ಕಾರ್ಯಕ್ರಮದ ನಿರೂಪಣೆಯನ್ನು ಸೌಂದರ್ಯ ಕೆ  ನಡೆಸಿಕೊಡುವುದರ ಮೂಲಕ ಕಾರ್ಯಕ್ರಮವನ್ನು ಮಕ್ತಾಯಗೊಳಿಸಲಾಯಿತು.