ಶುದ್ಧ ನೀರಿಗಾಗಿ ಪಟ್ಟಣ ಪಂಚಾಯಿತಿಗೆ ಮನವಿ
ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜು.7: ಪಟ್ಟಣದ ಹೆಚ್. ಆರ್. ರಸ್ತೆಯ ಉತ್ತರ ಭಾಗದಲ್ಲಿ ಬರುವ 2,3,4,5 ನೇ ವಾರ್ಡಿನಲ್ಲಿ ವಾಸಿಸುವ ಜನರು ಶುದ್ಧ ನೀರಿಗಾಗಿ ಪರಿ ತಪ್ಪಿಸುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಹಾರಕ್ಕಾಗಿ ಪಟ್ಟಣ ಪಂಚಾಯಿತಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
  ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಡಾ. ಪಿ. ಎಂ. ಮಂಜುನಾಥ ಮಾತನಾಡಿ, ಪಟ್ಟಣದ ಹೆಚ್. ಆರ್. ರಸ್ತೆಯ ಉತ್ತರ ಭಾಗದಲ್ಲಿ ಅಂದರೆ, ಹಳೆ ಪಟ್ಟಣದ ವ್ಯಾಪ್ತಿಗೆ ಬರುವ 2,3,4,5 ನೇ ವಾರ್ಡನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಸುಮಾರು ವರ್ಷಗಳಿಂದ ನಿರಂತರವಾಗಿ ಇದ್ದು, ಇದನ್ನು ಸರಿಪಡಿಸಲು ಪಟ್ಟಣ ಪಂಚಾಯಿತಿ ವಿಫಲವಾಗಿದ್ದು  ಈ ವಾರ್ಡ್ ಗಳ ಜನರ ನೀರಿನ ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ. ರಂಗಯ್ಯನದುರ್ಗ ಜಲಾಶಯದಿಂದ ಸರಬರಾಜು ಆಗುವ ನೀರು ಗುಣಮಟ್ಟದ್ದು ಆಗಿರದೆ, ಕಲುಷಿತವಾಗಿದೆ. ಜನರು ಕುಡಿಯಲು ,ಬಳಸಲು ಯೋಗ್ಯವಲ್ಲ ದಷ್ಟು ವಿಫರಿತವಾಗಿದೆ. ಆ ನೀರನ್ನು ಸಹ 15-20 ದಿವಸಗಳಿಗೊಮ್ಮೆ ಸರಬರಾಜು ಮಾಡಲಾಗುತ್ತಿದೆ ಇದರಿಂದ ಜನರಿಗೆ ತುಂಬ ತೊಂದರೆಯಾಗುತ್ತಿದೆ   ಇದರ ಪರಿಹಾರಕ್ಕಾಗಿ ಕೊಳವೆ ಬಾವಿ ಕೊರೆಸುವ ಯತ್ನಗಳು ನಡೆಯುತ್ತಿಲ್ಲ.ಇದನ್ನರಿತ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಅದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಿಳಿಸಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಲಿಂಗರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು.
  ಈ ಸಂದರ್ಭದಲ್ಲಿ ಪ ಪಂ ಸದಸ್ಯೆರಾದ ರೂಪ ವಿನಯ್ ಕುಮಾರ್, ಶುಭಾ ಪೃಥಿವೀರಾಜು, ಎಚ್. ಟಿ. ಜಯರಾಮ್, ಎಚ್. ನರಸಿಂಹ,  ಕಿರಣ್ ಗಾಯಕ್ವಾಡ್, ತಿಪ್ಪೇರುದ್ರಗೌಡ, ಡೀಸ್ ರಾಜು, ಹೇಮಾವತಿ, ನಾಗರತ್ನ, ವೀಣಾ, ತಿಪ್ಪೇಸ್ವಾಮಿ, ಲಕ್ಷ್ಮೀ ಸರಸ್ವತಿ ತಿಪ್ಪಮ್ಮ,ಗಂಗಮ್ಮ, ಇನ್ನು ಮುಂತಾದವರಿದ್ದರು.