ಕಂಟೋನ್ಮೆಂಟ್ ಲಯನ್ಸ್ ಕ್ಲಬ್ಪದಾಧಿಕಾರಿಗಳ ಪದಗ್ರಹಣ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.07: ಬಳ್ಳಾರಿಯ ಲಯನ್ಸ್ ಕ್ಲಬ್ ಕಂಟೊ ನ್ಮೆಂಟ್ಟ್ ನೂತನ ಅಧ್ಯಕ್ಷರಾಗಿ ರಾಜೇಶ್ ಎಂ.ಪಿ, ಕಾರ್ಯದರ್ಶಿಗಳಾಗಿ ಜಿ ಶ್ರೀನಿವಾಸ ರೆಡ್ಡಿ ,ಕೋಶಾಧಿಕಾರಿಯಾಗಿ ಸೂರಜಮಲ್ ಏಕಗ್ರೀವವಾಗಿ ಆಯ್ಕೆಯಾಗಿದ್ದಾರೆ.
ಲಯನ್ಸ್ ಕ್ಲಬ್  ಆವರಣದಲ್ಲಿ ನಡೆದ ಸಮಾರಂಭದಲ್ಲಿ  2024-25  ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಇನ್ಸ್ಟಾಲೇಶನ್ ಆಫೀಸರ್ ಗುರುರಾಜ್ ಬಹದ್ದೂರ್ ಜೋನಲ್ ಚೇರ್ ಪರ್ಸನ್ ರಾಜಶೇಖರ್ ಲಯನ್ಸ್ ಕ್ಲಬ್ ನ ಚಟುವಟಿಕೆಗಳ ಬಗ್ಗೆ ಮಾತನಾಡಿದರು ಮುಖ್ಯ ಅತಿಥಿಯಾಗಿ ಬಿಐಟಿಎಂ ಎಂಬಿಎ ಹೆಚ್ಓಡಿ ಡಾಕ್ಟರ್ ಜ್ಯೋತಿ ಡಿಸೋಜಾ ಮಾತನಾಡಿ ಲಯನ್ಸ್ ಕ್ಲಬ್ ಸೇವೆಗಳನ್ನು ಸಮಾಜಮುಖಿ ಕಾರ್ಯಗಳನ್ನುಪ್ರಶಂಶಿಸಿದರು. ಸೀನಿಯರ್ ಲಯನ್ ಮೆಂಬರ್ ರಾಧಾಕೃಷ್ಣನ್ ಕ್ಲಬ್ಬಿನ ಸೇವೆಗಳನ್ನು ವಿವರಿಸಿದರು ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ಬಿನ ಸದಸ್ಯರಾದ ಸೆಂತಿಲ್ ಕುಮಾರ್ ಶ್ರೀಲತಾ ರಾವ್, ಜವೇರಿಲಾಲ್, ಭರತ್, ಷಣ್ಮುಖ , ಸುಧಾಕರ್ D O  ನೂತನ ಸದಸ್ಯರಾಗಿ ನಾಗರಾಜ ರೆಡ್ಡಿ, ಶಂಕರ್, ವೆಂಕಟೇಶ್, ಶಿವಕುಮಾರ್ ಸೇರಿದ್ದಾರೆ, ಅಧ್ಯಕ್ಷರಾದ ರಾಜೇಶ್ ಸ್ವಾಗತವನ್ನು ಕೋರಿದರು, ಮುಖ್ಯ ಅತಿಥಿಗಳ ಪರಿಚಯ ಹಾಗೂ ವಂದನಾರ್ಪಣೆಯನ್ನು ಕಾರ್ಯದರ್ಶಿಗಳಾದ ಶ್ರೀನಿವಾಸ ರೆಡ್ಡಿ ನೆರವೇರಿಸಿದರು